newsfirstkannada.com

ರಾಮ್​ದೇವ್​ಗೆ ಪಂಚ್​ ಕೊಟ್ಟ ಕೋರ್ಟ್​.. ಪತಂಜಲಿ ಸುಳ್ಳು ಜಾಹೀರಾತುಗಳ ವಿರುದ್ಧ ಸುಪ್ರೀಂ​ ಗರಂ

Share :

Published April 3, 2024 at 6:46am

    ಯೋಗ ಗುರು ಬಾಬಾ ರಾಮ್‌ದೇವ್‌ಗೆ ಮತ್ತೆ ಮುಖಭಂಗ

    ಪತಂಜಲಿ ಉತ್ಪನ್ನಗಳಲ್ಲಿ ಔಷಧೀಯ ಗುಣ ಇರುವ ಬಗ್ಗೆ ತಪ್ಪು ಮಾಹಿತಿ

    ದೇಶ ಸೇವೆಯ ನೆಪ ಕೊಡಬೇಡಿ ಎಂದು ಸುಪ್ರೀಂ ಕೋರ್ಟ್​ ಫುಲ್​ ಗರಂ

ಉಪ್ಪು ತಿಂದವರು ನೀರು ಕುಡಿಯಲೇಬೇಕು. ಸದ್ಯ ಪತಂಜಲಿ ಉತ್ಪನ್ನಗಳ ಬಗ್ಗೆ ಸುಳ್ಳು ಮಾಹಿತಿ ನೀಡಿರೋ ಆರೋಪದ ಉಪ್ಪುತಿಂದಿರೋ ಯೋಗ ಗುರು ಬಾಬಾ ರಾಮ್​ದೇವ್​ಗೆ ಸುಪ್ರೀಂ ಕೋರ್ಟ್​ ಶಿಕ್ಷೆಯ ನೀರು ಕುಡಿಸಲು ಮುಂದಾಗಿದೆ. ತಪ್ಪಾಯ್ತು ಅಂತ ರಾಮ್​ದೇವ್​ ಕ್ಷಮೆಯಾಚಿಸಿದ್ರು ಕೋರ್ಟ್​ ಮುಂದಿನ ಕ್ರಮ ಎದುರಿಸಲು ಸಿದ್ಧರಾಗಿರಿ ಅಂತ ಖಾರವಾಗಿ ನುಡಿದಿದೆ.

ಪತಂಜಲಿ. ಒಂದು ಕಾಲದಲ್ಲಿ ದೇಶದ ದಶದಿಕ್ಕುಗಳಲ್ಲೂ ಪಸರಿಸಿದ್ದ ಫೇಮಸ್​ ಪ್ರೋಡಕ್ಟ್​ ಕಂಪನಿ ಒಂದರ ಹೆಸರಿದು. ಈ ಪತಂಜಲಿ ಕಂಪನಿಯ ಮುಖ್ಯಸ್ಥ ಯೋಗ ಗುರು ಬಾಬಾ ರಾಮ್‌ದೇವ್‌. ಆದರೆ ಕಳೆದ ವರ್ಷದಿಂದ ಈ ಪತಂಜಲಿ ಕಂಪನಿ ಸೂತ್ರ ಹರಿದ ಗಾಳಿ ಪಟದಂತಾಗಿದಿದೆ. ಸುಳ್ಳು ಜಾಹೀರಾತಿನ ಸುಳಿಯಲ್ಲಿ ಸಿಕ್ಕಿ ಪತಂಜಲಿ ಪರದಾಡ್ತಿದೆ.

ಕ್ಷಮೆಯಾಚಿಸಿದರೂ ಒಪ್ಪದ ಸರ್ವೋಚ್ಛ ನ್ಯಾಯಾಲಯ

ಪತಂಜಲಿ ಔಷಧಿ ಉತ್ಪನ್ನಗಳ ಜಾಹೀರಾತುಗಳಿಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ನಲ್ಲಿ ಯೋಗ ಗುರು ಬಾಬಾ ರಾಮ್‌ದೇವ್‌ಗೆ ಮತ್ತೆ ಮುಖಭಂಗವಾಗಿದೆ.

ರಾಮ್‌ದೇವ್ ಕ್ಷಮೆಯಾಚಿಸಿದರೂ ಒಪ್ಪದ ಸರ್ವೋಚ್ಛ ನ್ಯಾಯಾಲಯ

ಪತಂಜಲಿ ಉತ್ಪನ್ನಗಳಲ್ಲಿ ಔಷಧೀಯ ಗುಣ ಇರುವ ಬಗ್ಗೆ ತಪ್ಪು ದಾರಿಗೆಳೆಯುವ ಜಾಹೀರಾತು ಪ್ರಸಾರ ಮಾಡಲಾಗುತ್ತಿದೆ, ಇದರ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ವೈದ್ಯಕೀಯ ಸಂಘ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸುಳ್ಳು, ತಪ್ಪು ದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದ್ದಕ್ಕೆ ಗರಂ ಆಗಿತ್ತು. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಬಾಬಾ ರಾಮ್​ದೇವ್​ ಹಾಗೂ ಆಚಾರ್ಯ ಬಾಲಕೃಷ್ಣಗೆ ನ್ಯಾಯಾಂಗ ನಿಂದನೆ ನೋಟೀಸ್ ಕೂಡ ಜಾರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ಗೆ ಹಾಜರಾಗಿದ್ದ ಬಾಬಾ ರಾಮ್‌ದೇವ್ ಅವರು ನ್ಯಾಯಾಲಯಕ್ಕೆ ಕ್ಷಮೆಯಾಚಿಸಿದ್ದಾರೆ. ಬೇಷರತ್‌ ಕ್ಷಮೆಯಾಚಿಸಿದರೂ ಒಪ್ಪದ ಸರ್ವೋಚ್ಛ ನ್ಯಾಯಾಲಯ ರಾಮ್‌ದೇವ್​ನ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದೆ. ದೇಶ ಸೇವೆಯ ನೆಪ ಕೊಡಬೇಡಿ ಎಂದು ಕೋರ್ಟ್​ ಗರಂ ಆಗಿದೆ.

ಪಂತಂಜಲಿ ಉತ್ಪನ್ನಗಳು ಸುಳ್ಳು ಸುದ್ದಿ ಮೂಲಕ ಸದ್ದು ಮಾಡ್ತಿದ್ರು ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಕಣ್ಣು ಮುಚ್ಚಿಕೊಂಡಿರೋದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಮುಂದಿನ ಕ್ರಮ ಎದುರಿಸಲು ಸಿದ್ಧರಾಗಿರಿ ಎಂದು ಸುಪ್ರೀಂಕೋರ್ಟ್ ಬಾಬಾ ರಾಮ್​ ದೇವ್​ಗೆ ಖಡಕ್ ಎಚ್ಚರಿಕೆ ನೀಡಿದೆ. ಬಾಬಾ ರಾಮ್‌ದೇವ್ ಕ್ಷಮೆ ಯಾಚಿಸಿರುವುದನ್ನ ಟ್ರೋಲ್ ಮಾಡಿರುವ ನೆಟ್ಟಿಗರು ಇದು Sorry ಆಸನ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: Gold Rate: ಮಹಿಳೆಯರೇ.. ಇಂದು ಚಿನ್ನ, ಬೆಳ್ಳಿ ಬೆಲೆ ಇಳಿಕೆ ಕಂಡಿದೆಯಾ? ಇಲ್ಲಿದೆ ಮಾಹಿತಿ

ಒಟ್ನಲ್ಲಿ ಪತಂಜಲಿ ಉತ್ಪನ್ನಗಳ ಜಾಹೀರಾತಿನಲ್ಲಿ ತಪ್ಪು ಹಾಗೂ ಸುಳ್ಳು ಮಾಹಿತಿಯ ಜಾಹೀರಾತು ಮಾಡಿ, ಸದ್ಯ ಮಾಡಿದುಣ್ಣೋ ಮಾರಾಯ ಅಂತ ಬಾಬಾ ರಾಮದೇವ್​ ಕೋರ್ಟ್​ ಕಟಕಟೆಯಲ್ಲಿ ನಿಲ್ಲುವಂತಾಗಿದೆ.. ಕೇಸ್​ ಸಂಬಂಧ ಏಪ್ರಿಲ್ 10ಕ್ಕೆ ವಿಚಾರಣೆ ನಡೆಸಲು ಸುಪ್ರೀಂ ತೀರ್ಮಾನಿಸಿದ್ದು ಪತಂಜಲಿ ಕಂಪನಿಯ ತಪ್ಪಿಗೆ ಯಾವ ಶಿಕ್ಷೆ ನೀಡಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ್​ದೇವ್​ಗೆ ಪಂಚ್​ ಕೊಟ್ಟ ಕೋರ್ಟ್​.. ಪತಂಜಲಿ ಸುಳ್ಳು ಜಾಹೀರಾತುಗಳ ವಿರುದ್ಧ ಸುಪ್ರೀಂ​ ಗರಂ

https://newsfirstlive.com/wp-content/uploads/2024/04/Ramdev.jpg

Load More