newsfirstkannada.com

ಬಿಗ್​ಬಾಸ್​ ನಮ್ರತಾಗೆ ಜೊತೆಯಾದ ಕಿಶನ್.. ಇಬ್ಬರ ತಕಥಿಮಿತ ಡ್ಯಾನ್ಸ್​ಗೆ ಎಲ್ರೂ ಕ್ಲೀನ್ ಬೋಲ್ಡ್‌!

Share :

Published February 27, 2024 at 4:34pm

    ಚಂದಮಾಮನನ್ನೇ ಭೂಮಿಗಿಳಿಸಿದ ಕಿಶನ್​​ ನಮ್ರತಾ ರೊಮ್ಯಾಂಟಿಕ್ ಡ್ಯಾನ್ಸ್

    ಒಂದಲ್ಲ ಎರಡಲ್ಲ ಬರೋಬ್ಬರಿ 4.4 ಮಿಲಿಯನ್ ವೀವ್ಸ್​ ಪಡೆದುಕೊಂಡ ನೃತ್ಯ

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಕಿಶನ್,​​ ನಮ್ರತಾ ವಿಡಿಯೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ನಮ್ರತಾ ಗೌಡ ಸಖತ್​ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳ ಮನಸ್ಸನ್ನು ಇನ್ನಷ್ಟು ಖುಷಿ ಪಡಿಸುತ್ತಿದ್ದಾರೆ. ಹೌದು, ಕಲರ್ಸ್​ ಕನ್ನಡ ವಾಹಿನಿಯ ತಕಧಿಮಿತ ರಿಯಾಲಿಟಿ ಶೋ ಮೂಲಕ ಜೋಡಿಯಾಗಿ ಎಲ್ಲರ ಮನಸೂರೆಗೊಳಿಸಿದ್ದು ಕಿಶನ್ ಹಾಗೂ ನಮ್ರತಾ ಜೋಡಿ.

ಇದನ್ನು ಓದಿ: ಟಾಲಿವುಡ್​​​ ನಿರ್ದೇಶಕ ಕ್ರಿಶ್​​ ವಿರುದ್ಧ ಡ್ರಗ್ಸ್​​ ಕೇಸ್; ತೆಲುಗು ಖ್ಯಾತ ನಟ-ನಟಿಯರಿಗೆ ಬಂಧನದ ಭೀತಿ!

ಇನ್ನೂ, ಇವರಿಬ್ಬರ ಡ್ಯಾನ್ಸ್ ಪರ್ಫಾಮೆನ್ಸ್​ಗೆ ತಕಧಿಮಿತ ಶೋನಲ್ಲಿ ಎಲ್ಲರೂ ಕ್ಲೀನ್ ಬೋಲ್ಡ್ ಆಗುತ್ತಿದ್ದರು. ಅಲ್ಲಿಂದ ಪರಿಚಯವಾದ ಈ ಗೆಳೆತನ ಇಂದಿಗೂ ಗಟ್ಟಿಯಾಗಿದೆ. ಕಿಶನ್ ಆ್ಯಂಡ್ ನಮ್ರತಾ ಇಬ್ಬರು ಈಗಲೂ ಕೂಡ ಡ್ಯಾನ್ಸ್ ರೀಲ್ಸ್​ ಅಭಿಮಾನಿಗಳನ್ನ ರಂಜಿಸ್ತಾ ಇದ್ದಾರೆ. ಈಗಲೂ ಕೂಡ ಇಬ್ಬರ ಗೆಳತನ ತುಂಬಾನೆ ಚೆನ್ನಾಗಿದೆ. ಕಿಶನ್ ಒಬ್ಬರು ಪ್ರೋಫೆಷನಲ್ ಡ್ಯಾನ್ಸರ್ ಆಗಿದ್ದಾರೆ. ಅದರಲ್ಲೂ ನಮ್ರತಾ ಕೂಡ ಅದ್ಭುತವಾಗಿ ಡ್ಯಾನ್ಸ್ ಮಾಡ್ತಾರೆ. ಇಬ್ಬರು ಕೂಡ ಕನ್ನಡ ಬಿಗ್​​ಬಾಸ್​​ನ ಬೇರೆ ಬೇರೆ ಸೀಸನ್​ಗಳ ಸ್ಪರ್ಧಿಗಳು ಆಗಿದ್ದಾರೆ. ಬಿಗ್​ಬಾಸ್​ ಸೀಸನ್ 7ರಲ್ಲಿ ಕಿಶನ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇನ್ನೂ ನಮ್ರತಾ ಕೂಡ ಸೀಸನ್ 10ರ ಸ್ಪರ್ಧಿಯಾಗಿದ್ದರು. ತಮ್ಮ ನೃತ್ಯ ಕಲೆಯನ್ನ ಬಿಗ್​ಬಾಸ್​ ಮನೆಯೊಳಗೂ ಪ್ರಸ್ತುತ ಪಡಿಸಿದ್ದರು.

View this post on Instagram

A post shared by Kishen Bilagali (@kishenbilagali)

ಸದ್ಯ ನಮ್ರತಾ ಹಾಗೂ ಕಿಶನ್ ಸಮಯ ಸಿಕ್ಕಾಗ ತಮ್ಮ ಅಭಿಮಾನಿಗಳಿಗೋಸ್ಕರ ಒಳ್ಳೆ, ಒಳ್ಳೆ ಡ್ಯಾನ್ಸ್ ರೀಲ್ಸ್ ಮಾಡಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಒಂದು ರೋಮ್ಯಾಟಿಕ್ ಸಾಂಗ್​ಗೆ ಬ್ಯೂಟಿಫುಲ್ ಆಗಿ ಶ್ಯಾಡೋ ಕಾನ್ಸೆಪ್ಟ್ ಇಟ್ಟುಕೊಂಡು ಪರ್ಫಾಮ್ ಮಾಡಿದ್ದಾರೆ. ಈ ಇಬ್ಬರ ನೃತ್ಯಕ್ಕೆ ಎಲ್ಲರು ಫಿದಾ ಆಗಿದ್ದಾರೆ. ನಮ್ರತಾ ಮತ್ತು ಕಿಶನ್‌ ಆನ್‌ಸ್ಕ್ರೀನ್ ಅಪಿರಿಯನ್ಸ್, ಪರ್ಫಾಮೆನ್ಸ್‌, ಕೋ-ಆಡಿನೇಷನ್‌, ತೆರೆಯ ಮೇಲೆ ಸೊಗಸಾಗಿ ಮೂಡಿ ಬಂದಿದೆ. ಹಿಂದಿ ರಿಯಾಲಿಟಿ ಶೋನಲ್ಲಿ ಅದ್ಭುತವಾಗಿ ಮಿಂಚಿದ ಕಿಶನ್‌ ಮತ್ತು ನಮ್ಮ ಕನ್ನಡ ರಿಯಾಲಿಟಿ ಶೋನಲ್ಲಿ ಶೈನ್ ಆಗಿದ್ದ ನಮ್ರತಾ ಗೌಡರ ಈ ವಿಡಿಯೋ ಅಭಿಮಾನಿಗಳ ಮನಸ್ಸು ಗೆದ್ದಿದೆ. ಒಂದಕ್ಕಿಂತ ಒಂದು ಅದ್ಭುತ ನೃತ್ಯವನ್ನ ಮಾಡ್ತಾ ತಮ್ಮ ಅಭಿಮಾನಿಗಳನ್ನ ರಂಜಿಸ್ತಾ ಇದೆ ಈ ಬ್ಯೂಟಿಫುಲ್ ಪೇರ್. ಹೀಗೇ ಮುಂದೆಯೂ ಇವರಿಂದ ಮತ್ತಷ್ಟು ವಿಡಿಯೋಸ್‌ ಎಕ್ಸ್‌ಪೆಕ್ಟ್ ಮಾಡೋದ್ರಲ್ಲಿ ತಪ್ಪೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್​ ನಮ್ರತಾಗೆ ಜೊತೆಯಾದ ಕಿಶನ್.. ಇಬ್ಬರ ತಕಥಿಮಿತ ಡ್ಯಾನ್ಸ್​ಗೆ ಎಲ್ರೂ ಕ್ಲೀನ್ ಬೋಲ್ಡ್‌!

https://newsfirstlive.com/wp-content/uploads/2024/02/namrutha-5.jpg

Load More