ಹೆಮ್ಮೆಯಿಂದ ಹೇಳಬಲ್ಲೆ ಒಳ್ಳೆಯ ವ್ಯಕ್ತಿಗೆ ವೋಟ್ ಮಾಡಿದ್ದೇನೆ ಎಂದ ಫ್ಯಾನ್
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಡ್ರೋನ್ ಪ್ರತಾಪ್ ವಿಡಿಯೋ
ಸಾಕಷ್ಟು ಜನರಿಗೆ ಸಹಾಯ ಮಾಡುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಪ್ರತಾಪ್
ಡ್ರೋನ್ ಪ್ರತಾಪ್ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದ ವ್ಯಕ್ತಿ. ಅದರಲ್ಲೂ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ಕ್ಕೆ ಎಂಟ್ರಿ ಕೊಟ್ಟು ರನ್ನರ್ ಆಗಿದ್ದ ಮೇಲಂತೂ ಡ್ರೋನ್ ಪ್ರತಾಪ್ ಹವಾ ಬೇರೆ ಲೆವೆಲ್ಗೆ ಟರ್ನ್ ಆಯಿತು.
ಇದನ್ನೂ ಓದಿ: ಮತ್ತೊಂದು ರಣ ರೋಚಕ ಯುದ್ಧಕ್ಕೆ ಸಜ್ಜಾದ ಕಿಂಗ್ ಕೊಹ್ಲಿ.. ವಿರಾಟ್‌ಗೆ ನಿಜವಾದ ಎದುರಾಳಿ ಯಾರು?
ಜೊತೆಗೆ ಬಿಗ್ಬಾಸ್ನಿಂದ ಬಂದ ಹಣದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು, ಬಿಗ್ಬಾಸ್ನಿಂದ ಆಚೆ ಬಂದ ಬಳಿಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡು ಡ್ರೋನ್ ಪ್ರತಾಪ್ ಈಗ ಹೊಸ ಕೆಲಸಕ್ಕೆ ಮುಂದಾಗಿದ್ದಾರೆ. ಡ್ರೋನ್ ಪ್ರತಾಪ್ ತಮ್ಮ ಹುಟ್ಟುಹಬ್ಬದಂದು ಒಂದು ನೂತನ ಕೆಲಸಕ್ಕೆ ಕೈ ಹಾಕಲು ಮುಂದಾಗಿದ್ದಾರೆ. ಡ್ರೋನ್ ಪ್ರತಾಪ್, ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಡ್ರೋನ್ ಪ್ರತಾಪ್ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಏನಿದೆ?
ಡಾ. ರಾಜ್ಕುಮಾರ್ ಸರ್ ಅವರು ನೇತ್ರದಾನ ಮಹಾದಾನ ಅಂತ ಹೇಳಿದ್ದಾರೆ. ಮುಂಬರುವ ಜೂನ್ 11ರಂದು ನನ್ನ ಹುಟ್ಟು ಹಬ್ಬ ಇದೆ. ನನ್ನ ಹುಟ್ಟು ಹಬ್ಬವನ್ನು ಈ ಬಾರಿ ವಿಶೇಷವಾಗಿ ಆಚರಿಸಿಕೊಳ್ಳಬೇಕು ಅಂತ ಅಂದುಕೊಂಡಿದ್ದೇನೆ. ಯಾರಾದರೂ ಐದು ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ನಾನು ತೀರ್ಮಾನ ಮಾಡಿದ್ದೀನಿ. ಯಾರಾದರೂ ಬಡವರಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಹಣ ಭರಿಸಲು ಸಾಧ್ಯವಾಗದೇ ಇರುವವರು ಇದ್ದರೆ ದಯವಿಟ್ಟು ನಮಗೆ ತಿಳಿಸಿ. ನಮಗೆ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಕಳಿಸಿ ಅಥವಾ ಕಮೆಂಟ್ ಸೆಕ್ಷನ್ನಲ್ಲಿ ಅವರನ್ನು ಮೆನ್ಷನ್ ಮಾಡಿ. ನಾವು ಅಗತ್ಯವಿರುವ ಐದು ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸುತ್ತೇವೆ ಅಂತ ಹೇಳಿಕೊಂಡಿದ್ದಾರೆ.
View this post on Instagram
ಇನ್ನು, ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಧನಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಬಿಗ್ಬಾಸ್ನಲ್ಲಿ ನಿಮಗೆ ವೋಟ್ ಮಾಡಿದ್ದಕ್ಕೆ ಸಾರ್ಥಕವಾಯ್ತು, ಕಲಿ ಯುಗದ ಕರ್ಣ ನಮ್ಮ ಡ್ರೋನ್ ಪ್ರತಾಪ್ ಅಣ್ಣ, ಹೆಮ್ಮೆಯಿಂದ ಹೇಳಬಲ್ಲೆ ನಾನು ಒಳ್ಳೆಯ ವ್ಯಕ್ತಿಗೆ ವೋಟ್ ಮಾಡಿದ್ದೇನೆ ಎಂದು, ಕಾರ್ತಿಕ್ ಬದಲು ನೀನಾದ್ರೂ ಗೆದ್ದಿದ್ರೆ ಇನ್ನು ತುಂಬಾ ಕೆಲಸ ಆಗ್ತಾ ಇತ್ತು ಅನ್ಸುತ್ತೆ, ದೇವರು 100 ವರ್ಷ ಸುಖ ನೆಮ್ಮದಿ ಕೊಟ್ಟು ಕಾಪಾಡಲಿ, ಅಗತ್ಯ ಇರುವವರ ಮೊಬೈಲ್ ಸಂಖ್ಯೆ, ವಿಳಾಸಗಳನ್ನು ಕಮೆಂಟ್ ಸೆಕ್ಷನ್ನಲ್ಲಿ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ