newsfirstkannada.com

BBK10: ಬಿಗ್​​ಬಾಸ್​ನಲ್ಲಿ ಯಾರನ್ನಾದ್ರೂ ಹೊಡೆದು ಆಚೆ ಬರ್ತಿದ್ದೆ; ರಕ್ಷಕ ಬುಲೆಟ್​​ ಹೀಗೆ ಹೇಳಿದ್ದೇಕೆ?

Share :

Published January 15, 2024 at 6:04am

  ಸಿಂಗಲ್​ ಆಗಿ ಮಿಂಗಲ್​ ಆದವರ ಮನಸ್ಸಿನ ಮಾತುಗಳು ಇಲ್ಲಿವೆ!

  ಬಿಗ್​ಬಾಸ್​ ಶೋ ಗಾಸಿಪ್​ ಮಾಡೋರಿಗೆ ಹಾಟ್ ​ಸ್ಪಾಟ್​ ಇದು

  ನ್ಯೂಸ್​ಫಸ್ಟ್​ ರೌಂಡ್​ ಟೇಬಲ್​ನಲ್ಲಿ ಬಿಗ್​ಬಾಸ್​ 5 ಸ್ಪರ್ಧಿಗಳು

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​ 10- 15ನೇ ವಾರಕ್ಕೆ ಕಾಲಿಟ್ಟಿದೆ. ಬಿಗ್​ಬಾಸ್​​ನಲ್ಲಿ 8 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಬಿಗ್​ಬಾಸ್ ಮನೆಯಿಂದ ಯಾವ ಸ್ಪರ್ಧಿ ಆಚೆ ಬಂದಿರಲಿಲ್ಲ. ಆದರೆ ಮಿಡ್​ ವೀಕ್​ ಎಲಿಮಿನೇಷನ್ ಇರಲಿದೆ.

ಬಿಗ್​ಬಾಸ್​ ಮನೆಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳ ಪೈಕಿ ನಮ್ರತಾ ಗೌಡ, ತನಿಷಾ, ಡ್ರೋನ್​ ಪ್ರಾತಾಪ್​,ವಿನಯ್​, ಸಂಗೀತಾ, ಕಾರ್ತಿಕ್​, ವರ್ತೂರು ಸಂತೋಷ್​​ ಹಾಗೂ ತುಕಾಲಿ ಸಂತೋಷ್​ ಉಳಿದುಕೊಂಡಿದ್ದಾರೆ. ಬಿಗ್​ಬಾಸ್​ ಶುರುವಾದ ಮೊದಲ ವಾರದಿಂದ ಒಬ್ಬೊಬ್ಬರಾಗಿ ಆಚೆ ಹೋಗುತ್ತಿದ್ದರು. ಅವರ ಪೈಕಿ 5 ಸ್ಪರ್ಧಿಗಳು ನ್ಯೂಸ್​​ಫಸ್ಟ್​ನೊಂದಿಗೆ ಮನಬಿಚ್ಚಿ ಮಾತಾಡಿದ್ದಾರೆ. ಸ್ನೇಹಿತ್​​, ರಕ್ಷಕ್​​ ಬುಲೆಟ್​, ನೀತು, ಪವಿ ಹಾಗೂ ಮೈಕಲ್​ ನ್ಯೂಸ್​​ಫಸ್ಟ್​​ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಬಿಗ್​ಬಾಸ್​​ 5 ಸ್ಪರ್ಧಿಗಳು ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.

ಇದನ್ನು ಓದಿ: BIGG BOSS: ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಎಲ್ಲರೂ ಖುಷ್‌.. ಸಂಕ್ರಾಂತಿಗೆ ಸಮ್​ಥಿಂಗ್ ಸ್ಪೆಷಲ್!

ಬಿಗ್​​ಬಾಸ್​ನಲ್ಲಿ ಯಾರನ್ನಾದ್ರೂ ಹೊಡೆದು ಆಚೆ ಬರ್ತಿದ್ದೆ ಎಂದು ರಕ್ಷಕ ಬುಲೆಟ್​ ಹೇಳಿದ್ದಾರೆ. ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ಅವರು, ನಾನು ಎಲಿಮಿನೇಟ್​ ಆಗೋ ಮುಂಚೆ ಸುದೀಪ್​ ಅಣ್ಣ ಒಂದು ಮಾತನ್ನು ಕೇಳುತ್ತಾರೆ. ಈ ವಾರ ಏನೂ ಮಾಡಿಲ್ಲ ಎಂದಿದ್ದರು. ನಾನು ಮತ್ತೆ ತುಕಾಲಿ ಸಂತೋಷ್​ ಅವರು ಬಾತ್​​ ರೂಂನಲ್ಲಿ ಕುಳಿತುಕೊಂಡಾಗ ಈ ಬಗ್ಗೆ ಮಾತಾಡಿದ್ದೇವೆ. ಟಾಸ್ಕ್​​ ಆಡಿದ್ದೀನಿ, ಡೈಲಾಗ್ ಹೊಡೆದಿದ್ದೇನೆ, ಡ್ಯಾನ್ಸ್​ ಮಾಡಿದ್ದೀವಿ, ಮಜಾ ಮಾಡಿದ್ದೇವೆ ಇನ್ನು ಏನ್​ ಮಾಡಬೇಕು. ಒಂದು ಹೊಡೆಯಬೇಕು ಇಲ್ಲ, ಅಂದ್ರೆ ಮುಖ್ಯದ್ವಾರದಿಂದ ಆಚೆ ಹೋಗಬೇಕು ಅಷ್ಟೇ. ಅದು ಒಂದನ್ನು ಮಿಸ್​ ಮಾಡಿಕೊಂಡಿದ್ದೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BBK10: ಬಿಗ್​​ಬಾಸ್​ನಲ್ಲಿ ಯಾರನ್ನಾದ್ರೂ ಹೊಡೆದು ಆಚೆ ಬರ್ತಿದ್ದೆ; ರಕ್ಷಕ ಬುಲೆಟ್​​ ಹೀಗೆ ಹೇಳಿದ್ದೇಕೆ?

https://newsfirstlive.com/wp-content/uploads/2024/01/rakshak-bulet.jpg

Load More