Advertisment

BIGG BOSS ಮನೆಗೆ ಎಂಟ್ರಿ ಕೊಡ್ತಾ ಇರೋ ಸ್ಪರ್ಧಿ ಇವರೇ ನೋಡಿ

author-image
Veena Gangani
Updated On
BBK11: ಇಬ್ಬರು ಸ್ವರ್ಗಕ್ಕೆ ಮೂರನೇ ಕಂಟೆಸ್ಟೆಂಟ್ ಧನರಾಜ್ ಆಚಾರ್ಯ​ ಹೋಗಿದ್ದು ಯಾವುದಕ್ಕೆ?
Advertisment
  • ಸಾಮಾಜಿಕ ಜಾಲತಾಣದಲ್ಲಿ ​ವೈರಲ್​ ಆಗುತ್ತಲೇ ಇರುತ್ತವೆ ಧನರಾಜ್ ಕಾಮಿಡಿಗಳು
  • ಗಿಚ್ಚಿ ಗಿಲಿಗಿಲಿಯಲ್ಲಿ ಸೀಸನ್​ 2 ಮೂಲಕ ಫೇಮಸ್​ ಆಗಿದ್ದ ಹಾಸ್ಯ ಕಲಾವಿದ ಧನರಾಜ್
  • ಈ ಬಾರಿಗೆ ಬಿಗ್​ಬಾಸ್​ ಸೀಸನ್​ 11ಕ್ಕೆ ಹಾಸ್ಯ ಕಲಾವಿದ ಧನರಾಜ್ ಬರೋದು ಪಕ್ಕಾ

ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಶುರುವಾಗೋಕೆ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಇದೇ ಸೆಪ್ಟೆಂಬರ್ 29ರಿಂದ ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​ ಇದೆ. ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ವೀಕ್ಷಕರಿಗೆ ಅಂತೂ ಇಂತೂ ಬಿಗ್​ಬಾಸ್​ ಬಗ್ಗೆ ಒಂದೊಂದಾಗಿ ಅಪ್ಡೇಟ್ ಗೊತ್ತಾಗುತ್ತಿದೆ.

Advertisment

ಇದನ್ನೂ ಓದಿ: BIGG BOSS 11ಕ್ಕೆ ಬರ್ತಿದ್ದಾರೆ ಸ್ಯಾಂಡಲ್​ವುಡ್​ ಹಾಟ್​ ಬ್ಯೂಟಿ; ಇನ್ಯಾವ ಸ್ಟಾರ್ಸ್​ಗಳು ಎಂಟ್ರಿ?

ಈ ಬಾರಿ ಸ್ವರ್ಗ ಮತ್ತು ನರಕ ಕಾನ್ಸೆಪ್ಟ್‌ನಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್‌ ರೂಪುಕೊಂಡಿದೆ ಅನ್ನೋದು ನಿಮಗೆ ಈಗಾಗಲೇ ಗೊತ್ತಾಗಿದೆ. ಆದ್ರೆ, ಪಕ್ಕಾ ಸ್ಪರ್ಧಿಗಳು ಯಾರು ಅನ್ನೋದರ ಬಗ್ಗೆ ನ್ಯೂಸ್​ ಫಸ್ಟ್​ಗೆ ಪಕ್ಕಾ ಮಾಹಿತಿ ಲಭ್ಯವಾಗಿದೆ. ಬಿಗ್​ಬಾಸ್​ಗೆ ಕನ್ಫರ್ಮ್ ಆಗಿರೋ ಮೊಟ್ಟ ಮೊದಲ ಸ್ಪರ್ಧಿ ಧನರಾಜ್ ಆಚಾರ್ಯ.

ಹೌದು, ಈ ಬಾರಿಯ ಬಿಗ್​ಬಾಸ್​ ಸೀಸನ್​ 11ಕ್ಕೆ ಗಿಚ್ಚಿಗಿಲಿಗಿಲಿ ಖ್ಯಾತಿಯ ಧನರಾಜ್‌ ಅವರು ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡ್ತಾ ಇದ್ದಾರೆ. ಸಾಕಷ್ಟು ಜನಕ್ಕೆ ಇವರ ಪರಿಚಯ ಇದ್ದೇ ಇದೇ. ಗಿಚ್ಚಿ ಗಿಲಿ ಗಿಲಿಯಲ್ಲಿ ಸಾಕಷ್ಟು ಮನರಂಜನೆ ನೀಡಿದ ಧನರಾಜ್‌, ಸೋಷಿಯಲ್ ಮೀಡಿಯಾದ ಮೂಲಕ ಪಾಪ್ಯುಲರ್‌ ಆದವರು. ವಿಶೇಷವಾಗಿ ಕರಾವಳಿ ಭಾಗದ ಜನರಿಗೆ ಇವರು ತೀರ ಪರಿಚಿತರು. ಗಿಚ್ಚಿಗಿಲಿಗಿಲಿಗೆ ಬಂದ ನಂತರ ಕರ್ನಾಟಕಕ್ಕೆ ಇವರ ಟ್ಯಾಲೆಂಟ್ ಗೊತ್ತಾಯ್ತು.

Advertisment

publive-image

ಈಗ ಬಿಗ್‌ಬಾಸ್ ಸೀಸನ್‌ 11ರ ಮೂಲಕ ನಿಮ್ಮನ್ನ ರಂಜಿಸಲು ಧನರಾಜ್ ಬರ್ತಿದ್ದಾರೆ. ಇವರ ಕಾಮಿಡಿ ಪಂಚ್‌ಗಳಿಗೆ ರೆಡಿಯಾಗಿ. ಹಾಸ್ಯ ನಟ ಧನರಾಜ್‌ ಕಾಮಿಡಿ ಟೈಮಿಂಗ್‌ ಸಖತ್‌ ಇದೇ. ಹಾಗಾಗಿಯೇ ಅವರು ಪಾಪ್ಯುಲರ್ ಆಗಿರೋದು. ಇನ್ಮೇಲೆ ಪ್ರತಿ ದಿನ ನಿಮಗೆ ಮನರಂಜನೆ ಫಿಕ್ಸ್ ಆಗಿದೆ.

ಇದನ್ನೂ ಓದಿ:ಮಗ ಅಷ್ಟೇ ಅಲ್ಲ, ತಾಯಿ ಕೂಡ ರಾಕ್​.. ಬಾಹುಬಲಿ ಶಿವಗಾಮಿ ಲುಕ್​ನಲ್ಲಿ ವರುಣ್​ ಆರಾಧ್ಯ ತಾಯಿ ಫುಲ್ ಮಿಂಚಿಂಗ್​

ಇನ್ನು, ಹೊಸ ಹೊಸ ಕಾಮಿಡಿಗಳನ್ನು ಕ್ರಿಯೇಟ್​ ಮಾಡಿ ನೆಟ್ಟಿಗರನ್ನು ನಕ್ಕು ನಲಿಸುತ್ತಿದ್ದ ಧನರಾಜ್ ಆಚಾರ್ಯ ಹಾಗೂ ಪ್ರಜ್ಞಾ ಆಚಾರ್ಯ ದಂಪತಿ ಮೊನ್ನೆಯಷ್ಟೇ ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದಾರೆ. 2024 ಮೇ 17ರಂದು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವನ್ನು ಶೇರ್​ ಮಾಡಿಕೊಳ್ಳುವ ಮೂಲಕ ಗುಡ್​ನ್ಯೂಸ್​ ಕೊಟ್ಟಿದ್ದರು. ಬಳಿಕ ಧನರಾಜ್ ಆಚಾರ್ಯ ಹಾಗೂ ಪ್ರಜ್ಞಾ ಆಚಾರ್ಯ ದಂಪತಿ ಮುದ್ದಾದ ಹೆಣ್ಣು ಮಗುವನ್ನು ಮನೆಗೆ ಗ್ರ್ಯಾಂಡ್ ವೆಲ್ಕಮ್ ಮಾಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment