/newsfirstlive-kannada/media/post_attachments/wp-content/uploads/2024/09/bigg-boss-11.jpg)
ಬಿಗ್ ಬಾಸ್ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್ ಶುರುವಾಗಲು ಕ್ಷಣಗಣನೆ ಶುರುವಾಗಿದೆ. ಕಿಚ್ಚ ಸುದೀಪ್ ಸಾರಥ್ಯದಲ್ಲಿ ಇಂದು ಸಂಜೆ ಸೀಸನ್ 11ರ 17 ಸ್ಪರ್ಧಿಗಳಿಗೆ ಸ್ವರ್ಗ, ನರಕದ ಬಾಗಿಲು ತೆರೆಯಲಾಗುತ್ತಿದೆ. ಈಗಾಗಲೇ ಬಿಗ್ ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಟ್ಟ ಕೆಲವು ಸ್ಪರ್ಧಿಗಳ ಹೆಸರನ್ನು ಅಧಿಕೃತವಾಗಿ ರಿವೀಲ್ ಮಾಡಲಾಗಿದೆ.
ಇದನ್ನೂ ಓದಿ: ‘ಬಿಗ್​ಬಾಸ್​ನಲ್ಲಿ ಗುದ್ದಾಟಕ್ಕೆ ನಿಂತರೆ..’ ಖಡಕ್ ಡೈಲಾಗ್ ಮೂಲಕ ಗೌತಮಿ ಎಂಟ್ರಿ VIDEO
ಬಿಗ್ ಬಾಸ್ ಸೀಸನ್ 11ರ ಅಸಲಿ ಆಟ ಶುರುವಾಗದೋ ಇಂದು ಸಂಜೆಯಿಂದ. ಗ್ರ್ಯಾಂಡ್ ಓಪನಿಂಗ್‌ಗೆ ಕಿಚ್ಚ ಸುದೀಪ್ ಅವರು ಕಿಕ್ ಸ್ಟಾರ್ಟ್ ಕೊಡಲು ಸಜ್ಜಾಗಿದ್ದಾರೆ. ಕಿರುತೆರೆಯ ಬಾದ್ ಷಾ ಎಂಟ್ರಿ ಕೊಟ್ಟ ಮೇಲೆ 17 ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗುತ್ತಿದೆ. ಪ್ರತಿ ಬಾರಿಗಿಂತ ಈ ಬಾರಿ ಸೀಸನ್ 11 ಸಖತ್ ಡಿಫರೆಂಟ್ ಆಗಿದೆ.
/newsfirstlive-kannada/media/post_attachments/wp-content/uploads/2024/09/bigg-boss7.jpg)
ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳು ಈ ಬಾರಿ ಆರಂಭದಲ್ಲೇ ಎರಡು ಮನೆಗಳಿಗೆ ಪ್ರವೇಶ ಮಾಡುತ್ತಿದ್ದಾರೆ. ಪ್ರೊಮೋದಲ್ಲಿ ರಿಲೀಸ್ ಆಗಿರುವಂತೆ ಸ್ವರ್ಗ, ಮತ್ತು ನರಕದ ಮನೆ ಈಗಾಗಲೇ ರೆಡಿಯಾಗಿದೆ. ಸ್ವರ್ಗಕ್ಕೆ ಹೋಗುವವರು ಅದೃಷ್ಟ ಮಾಡಿದ್ರೆ ನರಕಕ್ಕೆ ಹೋಗುವವರು ನಿಜಕ್ಕೂ ಕರ್ಣ ಕಠೋರವಾದ ಕಷ್ಟಗಳನ್ನು ಎದುರಿಸಬೇಕಾಗಿದೆ.
ಇದನ್ನೂ ಓದಿ: biggbosskannada11: ಹೊಸ ಸೀಸನ್, ಹೊಸ ಮನೆಗೆ 17 ಹೊಸ ಕಂಟೆಸ್ಟೆಂಟ್ಸ್.. ಸ್ವರ್ಗ, ನರಕದ ಬಾಗಿಲು ಓಪನ್!
ಸದ್ಯದ ಲೆಕ್ಕಾಚಾರದ ಪ್ರಕಾರ ಬಿಗ್ ಬಾಸ್ ಸೀಸನ್ 11ರಲ್ಲಿ ಕೆಲವರಿಗೆ ಸ್ವರ್ಗದ ಬಾಗಿಲು ತೆರೆದಿದೆ. ಇನ್ನೂ ಕೆಲವರಿಗೆ ನರಕದ ಶಿಕ್ಷೆ ಕಾದು ಕುಳಿತಿದೆ. ಹಾಗಿದ್ರೆ ಯಾರ್ ಯಾರು ಸ್ವರ್ಗ, ನರಕಕ್ಕೆ ಎಂಟ್ರಿ ಕೊಡಬಹುದು ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ.
/newsfirstlive-kannada/media/post_attachments/wp-content/uploads/2024/09/Bigg-boss-Season-11-Sudeep-2.jpg)
ನರಕಕ್ಕೆ ಹೋಗುವವರು ಯಾರು?
ಶಿಶಿರ ಶಾಸ್ತ್ರಿ, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್, ಚೈತ್ರಾ ಕುಂದಾಪುರ, ರಂಜಿತ್ ಗೌಡ, ಅನುಷಾ ರೈ, ಮಾನಸ ತುಕಾಲಿ.
ಬಿಗ್ ಬಾಸ್ ಸ್ವರ್ಗದ ಸ್ಪರ್ಧಿಗಳು?
ಧರ್ಮ ಕೀರ್ತಿ ರಾಜ್, ಗೌತಮಿ ಜಾಧವ್, ಯಮುನಾ ಶ್ರೀನಿಧಿ, ಭವ್ಯಾ ಗೌಡ, ಲಾಯರ್ ಜಗದೀಶ್, ಉಗ್ರಂ ಮಂಜು, ಐಶ್ವರ್ಯ ಶಿಂದೋಗಿ, ಧನರಾಜ್, ಹಂಸ ನಾರಾಯಣಸ್ವಾಮಿ, ತ್ರಿವಿಕ್ರಮ್.
ಬಿಗ್ ಬಾಸ್ ತಂಡ ರಾಜಾ, ರಾಣಿ ಫಿನಾಲೆಯಲ್ಲಿ 4 ಸ್ಪರ್ಧಿಗಳ ಹೆಸರು ಘೋಷಣೆ ಮಾಡಿದೆ. ಇದರಲ್ಲಿ ಯಾರು ಸ್ವರ್ಗಕ್ಕೆ ಹೋಗಬೇಕು? ಯಾರು ನರಕಕ್ಕೆ ಹೋಗಬೇಕು ಅನ್ನೋದನ್ನ ವೋಟ್ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆ ಲಾಯರ್ ಜಗದೀಶ್ ಅವರು ನರಕಕ್ಕೆ ಹೋಗಬಹುದು ಅಂತ ವೀಕ್ಷಕರು ಲೆಕ್ಕಾಚಾರ ಹಾಕಿದ್ರು. ಆದರೆ ಲಾಯರ್ ಜಗದೀಶ್ ಅವರು ಸ್ವರ್ಗದಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us