newsfirstkannada.com

‘ಕಷ್ಟದಲ್ಲಿದ್ದಾಗ ತುಳಿಯೋಕೆ ಬಂದ್ರು.. ಅವ್ರಿಗೆ ಉತ್ತರ ಕೊಡ್ತೀನಿ’ – ವರ್ತೂರು ಸಂತೋಷ್ ಖಡಕ್ ಸವಾಲು!

Share :

Published January 30, 2024 at 4:42pm

Update January 30, 2024 at 4:38pm

  ಕಷ್ಟದಲ್ಲಿರೋವಾಗ ತುಳಿಯೋಕೆ ಬರ್ತೀರಲ್ಲ ನೀವು ಇರ್ಬೇಕು!

  ಬಿಗ್‌ಬಾಸ್ ಮನೆಯಲ್ಲಿ ಕ್ಯಾಮೆರಾ ಇದೆ ಅಂತ ನಾಟಕ ಮಾಡಿಲ್ಲ

  ಹಳ್ಳಿಕಾರ್ ರೇಸ್‌ಗೆ ಸುದೀಪ್ ಅಣ್ಣನೂ ಬರ್ತೀನಿ ಅಂತ ಹೇಳಿದ್ರು

ಬಿಗ್‌ಬಾಸ್‌ ಸೀಸನ್‌ 10ರ ಸ್ಪರ್ಧಿ ವರ್ತೂರು ಸಂತೋಷ್ ಅವರು ರಿಯಾಲಿಟಿ ಶೋ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಇಷ್ಟು ದಿನ ತಾವು ಅನುಭವಿಸಿದ ನೋವು, ಕಷ್ಟದ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.

ಬಿಗ್‌ಬಾಸ್‌ನಲ್ಲಿ ಕಳೆದ ದಿನಗಳ ಬಗ್ಗೆ ಮಾತನಾಡಿದ ವರ್ತೂರು ಸಂತೋಷ್ ಅವರು ನಾನು ದುಡ್ಡು ಕೊಟ್ಟು ಜನರಿಂದ ವೋಟ್ ಹಾಕಿಸಿದ್ದೇನೆ ಅನ್ನೋದು ಸುಳ್ಳು. ಅದು ನಿಜವಾದ್ರೆ ನಾನು ಸತ್ತಂತೆ ಲೆಕ್ಕ. ನಾನು ಧೈರ್ಯವಾಗಿ ಹೇಳುತ್ತೇನೆ. ನಮ್ಮ ಅಪ್ಪ, ತಾತನವರು ಇನ್ನೊಬ್ಬರಿಗೆ ಮೋಸ ಮಾಡಬಾರ್ದು ಅಂತ ಹೇಳಿದ್ದಾರೆ. ಒಬ್ರು ಒಡವೆ ತಿನ್ನಬಾರ್ದು. ಇನ್ನೊಬ್ಬರಿಗೆ ಅನ್ಯಾಯ ಮಾಡಬಾರ್ದು ಅಂತ ಹೇಳಿದ್ದಾರೆ. ನನ್ನ ವಿರುದ್ಧ ಮಾತನಾಡುವವರ ಬಗ್ಗೆ ನನಗೆ ತುಂಬಾ ನೋವಾಗಿದೆ ಎಂದಿದ್ದಾರೆ.

ಎಲ್ಲಾ ತರಹ ಜನರನ್ನು ನಾನು ನೋಡಿದ್ದೇನೆ. ಕಷ್ಟದಲ್ಲಿರೋವಾಗ ತುಳಿಯೋಕೆ ಬರ್ತಾರಲ್ಲ ನಿಮ್ಮಂತವರು ನಿಜವಾಗಲೂ ಇರಬೇಕು. ಒಬ್ಬ ವ್ಯಕ್ತಿಯನ್ನ ಗಟ್ಟಿ ಮಾಡೋದು ಯಾವಾಗ ಅಂದ್ರೆ ಒಂದು ಸಾಧನೆಯನ್ನ ಹೊಡೆಯೋಕೆ ಬಂದಾಗ. ಆದರೆ ಜನ ನನ್ನ ಪರ ಇದ್ದಾರೆ. ನಾನು ಗೆದ್ದಿದ್ದೀನಿ. ಯಾವಾಗಲೂ ನಾನು ಜನರ ಜೊತೆಗೆ ಇರ್ತೇನೆ. ನನ್ನ ಮನೆ ದುಡ್ಡು ಖರ್ಚು ಮಾಡಿ ಎಷ್ಟೋ ಊರಿಗೆ ಹೋಗಿದ್ದೇನೆ. ನಮ್ಮದು ರೈತಾಪಿ ಕುಟುಂಬ. ಸುತ್ತಮುತ್ತಲಿನ 16 ಹಳ್ಳಿಗೆ ಊಟ ಹಾಕಿರೋ ಮನೆತನ ನಮ್ಮದು. ನಾವು ಅನ್ಯಾಯ ಮಾಡೋದಿಲ್ಲ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.

ಇದನ್ನೂ ಓದಿ: BBK10: ಮುದ್ದಿನ ಮಗ ವರ್ತೂರು​ ಸಂತೋಷ್​ಗೆ ಚಿನ್ನದ ಸರ ಹಾಕಿದ ತಾಯಿ; ಅದರಲ್ಲಿ ಏನಿದೆ ಗೊತ್ತಾ?

ಇದೇ ವೇಳೆ ಹಳ್ಳಿಕಾರ್ ರೇಸ್‌ಗೆ ಸುದೀಪ್ ಅಣ್ಣನೂ ಬರ್ತೀನಿ ಅಂತ ಹೇಳಿದ್ದಾರೆ. ಆ ಗೆಲುವನ್ನ ನಾವು ತೋರಿಸಬೇಕು. ಬಿಗ್‌ಬಾಸ್ ಮನೆಯಲ್ಲಿ ಕ್ಯಾಮೆರಾ ಇದೆ ಅಂತ ನಾಟಕ ಮಾಡಿಲ್ಲ. ಯಾವುದೇ ಜಾತಿ, ಜನಾಂಗ, ರಾಜಕೀಯ ಪಕ್ಷಕ್ಕೆ ನನ್ನ ಸೀಮಿತ ಮಾಡಬೇಡಿ ಎಂದು ವರ್ತೂರು ಸಂತೋಷ್ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕಷ್ಟದಲ್ಲಿದ್ದಾಗ ತುಳಿಯೋಕೆ ಬಂದ್ರು.. ಅವ್ರಿಗೆ ಉತ್ತರ ಕೊಡ್ತೀನಿ’ – ವರ್ತೂರು ಸಂತೋಷ್ ಖಡಕ್ ಸವಾಲು!

https://newsfirstlive.com/wp-content/uploads/2024/01/Varthur-Santhosh-3.jpg

Load More