newsfirstkannada.com

×

BIGG BOSS: ಈ ಬಾರಿ ದೊಡ್ಮನೆಗೆ ಹೋಗೋ ಸ್ಪರ್ಧಿಗಳು ಇವರೇ ನೋಡಿ; ಎಕ್ಸ್​​ಕ್ಲೂಸೀವ್ ಮಾಹಿತಿ

Share :

Published October 7, 2023 at 5:34am

    ಕನ್ನಡದ ಬಿಗ್​ಬಾಸ್ ಸೀಸನ್​ 10ಗೆ ಕ್ಷಣಗಣನೇ ಶುರು

    ಬಿಗ್​ಬಾಸ್​ ಮನೆಗೆ ಕಾಲಿಡೋ ಆ ಸ್ಪರ್ಧಿಗಳು ಯಾರು!

    ಎಕ್ಸ್​ಕ್ಲೂಸಿವ್​ ಮಾಹಿತಿ ನ್ಯೂಸ್​ ಫಸ್ಟ್​ಗೆ ಲಭ್ಯವಾಗಿದೆ!

ಕನ್ನಡದ ಬಿಗ್​ಬಾಸ್ ಸೀಸನ್​ 10ಗೆ ಒಂದು ದಿನ ಅಷ್ಟೇ ಬಾಕಿ ಇದೆ. ಸಾಮಾಜಿಕ ಜಾಲತಾಣದಲ್ಲಿ ಬಿಗ್​ಬಾಸ್​ ಮನೆಗೆ ಕಾಲಿಡೋ ಆ ಸ್ಪರ್ಧಿಗಳು ಯಾರು ಎಂಬುವುದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇನ್ನೂ ನಿನ್ನೆ ಒಂದಿಷ್ಟು ಸಂಭಾವ್ಯ ಸ್ಪರ್ಧಿಗಳ ಪಟ್ಟಿಯ ಬಗ್ಗೆ ನಿಮ್ಮಗೆ ಮಾಹಿತಿ ನೀಡಿದ್ದೇವೆ. ಅದರಲ್ಲಿ ಈ ಮೂರು ಸ್ಪರ್ಧಿಗಳು ಕನ್ಫರ್ಮ್​ ಆಗಿದ್ದಾರೆ ಎಂಬುವುದರ ಬಗ್ಗೆ ಎಕ್ಸ್​ಕ್ಲೂಸಿವ್​ ಮಾಹಿತಿ ಲಭ್ಯವಾಗಿದೆ.

ನಾಗಿಣಿ ಖ್ಯಾತಿಯ ನಟಿ ನಮ್ರತಾ ಗೌಡ

ಹೌದು ಎಲ್ಲಿ ನೋಡಿದರು ಬಿಗ್​ಬಾಸ್​. ಯಾರ ಮಾತನ್ನು ಕೇಳಿದರು ಬಿಗ್​ಬಾಸ್​ದ್ದೆ ಹವಾ. ಈಗಂತು ಕುಳಿತರೂ, ನಿಂತರೂ ಬಿಗ್​ ಬಾಸ್​ ಮಾತು. ಕನ್ನಡ ಬಿಗ್​ಬಾಸ್​ ಸೀಸನ್​ 10 ಅಷ್ಟರ ಮಟ್ಟಿಗೆ ಭಾರಿ ಚರ್ಚೆಯಾಗ್ತಿದೆ. ಸ್ಪರ್ಧಿಗಳ ಪಟ್ಟಿಯಲ್ಲಿ ದಿನದಿಂದ ದಿನಕ್ಕೆ ಒಂದೊಂದು ಹೆಸರು ಆ್ಯಡ್​ ಆಗುತ್ತಿವೆ. ಸದ್ಯ ನ್ಯೂಸ್​​ ಫಸ್ಟ್​​ಗೆ ಮೂವರು ಸ್ಪರ್ಧಿಗಳ ಪಕ್ಕಾ ಮಾಹಿತಿ ಲಭ್ಯವಾಗಿದೆ.

ಹೌದು, ಈ ಹಿಂದಿನ ಎಲ್ಲಾ ಸೀಸನ್​ನಲ್ಲೂ ಬಿಗ್​ಬಾಸ್​​ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯನ್ನ ಗಮನಿಸಿದರೆ ಅಲ್ಲಿ ಎಲ್ಲಾ ಕ್ಷೇತ್ರದ ಇಂಟ್ರಸ್ಟಿಂಗ್​ ವ್ಯಕ್ತಿತ್ವಗಳನ್ನ ಆಯ್ಕೆ ಮಾಡಲಾಗುತ್ತೆ. ಸಿನಿಮಾ, ಸೀರಿಯಲ್​, ಕ್ರೀಡೆ, ಅಷ್ಟೇಯಲ್ಲ ಸುದ್ದಿ ಮಾಧ್ಯಮದಿಂದಲೂ ಸ್ಪರ್ಧಿಗಳಿರ್ತಾರೆ. ಇನ್ನೂ ನಮಗೆ ಸಿಕ್ಕಿರೋ ಮಾಹಿತಿ ಪ್ರಕಾರ ನಾಗಿಣಿ ಖ್ಯಾತಿಯ ನಮ್ರತಾ, ಸುದ್ದಿ ಮಾಧ್ಯಮದಲ್ಲಿ ಹೆಸರುವಾಸಿಯಾಗಿರೋ ಹಿರಿಯ ಪತ್ರಕರ್ತರಾದ ಗೌರಿಶ್​ ಅಕ್ಕಿ ಹಾಗೂ ಹರಹರ ಮಹಾದೇವ ಸೀರಿಯಲ್​ ಖ್ಯಾತಿಯ ನಟ ವಿನಯ್​ ಗೌಡ​​ ಬಿಗ್​ಬಾಸ್​ ಮನೆಗೆ ಕಾಲಿಡೋದು ಪಕ್ಕಾ ಆಗಿದೆ.

ಹಿರಿಯ ಪತ್ರಕರ್ತರಾದ ಗೌರಿಶ್​ ಅಕ್ಕಿ

ಇನ್ನೂ ಬಿಗ್​ ಬಾಸ್​ ಅನೌನ್ಸ್​ ಆದಾಗಿಂದ ಹಲವು ಕಿರುತೆರೆ ಸೆಲಬ್ರಿಟಿಗಳ ಹೆಸರು ಕೇಳಿ ಬಂದಿದ್ದವು. ಅದರಲ್ಲೂ ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್​ ಕೂಡ ಒಬ್ಬರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ರಂಜನಿ, ನಾನು ಬಿಗ್​ಬಾಸ್​ಗೆ ಹೋಗ್ತಿದ್ದೀನಿ ಅನ್ನೋದು ಸುಳ್ಳು ಸುದ್ದಿ. ನನ್ನ ಕೇರಿಯರ್​ ಪ್ಲಾನ್​ ಬೇರೆನೇ ಇದೆ. ಆ ಬಗ್ಗೆ ಸೂಕ್ತ ಸಮಯದಲ್ಲಿ ತಿಳಿಸುವೆ. ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೇ ಇರಲಿ ಎಂದು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಅಂದ್ಹಾಗೆ, ಈ ಹಿಂದೆ ಕನ್ನಡತಿ ಪ್ರಮೋಷನ್​ ಟೈಮ್​ನಲ್ಲಿ ರಂಜನಿ ಬಿಗ್​ ಬಾಸ್ ಮನೆಗೆ ಕಾಲಿಟ್ಟಿದ್ದರು. ಬಿಗ್ ಮನೆಯಲ್ಲಿ​ ಹಲವು ಗಂಟೆ ಸಮಯ ಕಳೆದಿದ್ದನ್ನ ಇಲ್ಲಿ ಸ್ಮರಿಸಬಹುದು.

ಹರಹರ ಮಹಾದೇವ ಸೀರಿಯಲ್​ ಖ್ಯಾತಿಯ ನಟ ವಿನಯ್​ ಗೌಡ​​

ಇನ್ನೂ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಹೆಸರು ಕೂಡ ಕೇಳಿ ಬಂದಿತ್ತು. ಆದ್ರೆ ಇದು ಕೂಡ ಸುಳ್ಳು ಸುದ್ದಿಯಾಗಿದ್ದು, ಮೇಘಾ ಅವರು ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಮಾಜ ಸೇವೆಯಲ್ಲಿ ನಿರತರಾಗಿರುವ ಅಕ್ಕ ಅನು ಅವರ ಹೆಸರು ಕೂಡ ಹರಿದಾಡ್ತಾ ಇತ್ತು. ಈ ಬಗ್ಗೆ ಒಂದು ಪೇಜ್​ ಪೋಸ್ಟ್​​ ಮಾಡಿತ್ತು ಅದಕ್ಕೆ ರಿಪ್ಲೈ​​ ಮಾಡಿರೋ ಅಕ್ಕ ಅನು, ಬಿಗ್​ ಬಾಸ್​ಗೆ ಹೋಗುತ್ತಿಲ್ಲ ಅಂತಾ ತಿಳಿಸಿದ್ದಾರೆ. ಒಟ್ಟಿನಲ್ಲಿ ನಟಿ ನಮ್ರತಾ, ನಟ ವಿನಯ್​ ಗೌಡ​, ಪತ್ರಕರ್ತ ಗೌರಿಶ್​ ಅಕ್ಕಿ ಬಿಗ್​ ಬಾಸ್​ ಪಕ್ಕಾ ಸ್ಪರ್ಧಿಗಳಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಈ ಬಾರಿ ದೊಡ್ಮನೆಗೆ ಹೋಗೋ ಸ್ಪರ್ಧಿಗಳು ಇವರೇ ನೋಡಿ; ಎಕ್ಸ್​​ಕ್ಲೂಸೀವ್ ಮಾಹಿತಿ

https://newsfirstlive.com/wp-content/uploads/2023/10/bigg-boss-16.jpg

Load More