newsfirstkannada.com

BIGG BOSS: ಯಾಕೆ ಹೀಗಾಯ್ತು.. ಡ್ರೋನ್ ಗೇಮ್‌ ಪ್ಲಾನ್‌ಗೆ ರೊಚ್ಚಿಗೆದ್ದ ವರ್ತೂರು ಸಂತೋಷ್!

Share :

Published January 12, 2024 at 3:39pm

  ಕಳಪೆ ಹಾಗೂ ಉತ್ತಮದ ಬಗ್ಗೆ ಬಿಗ್​​ ಮನೆಯಲ್ಲಿ ಭಾರಿ ಚರ್ಚೆ

  ಮನೆಯ ಸದಸ್ಯರ ಕಣ್ಮುಂದೆ ತುಕಾಲಿ ಈ ವಾರದ ಕಳಪೆ ಪಟ್ಟ

  ತುಂಬಾ ಇಂಟರೆಸ್ಟಿಂಗ್ ಆಗಿದೆ ಟಿಕೆಟ್ ಟೂ ಫಿನಾಲೆ ಈ ವಾರ

ಬಿಗ್​ಬಾಸ್ ಸೀಸನ್‌ 10 ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ​​ ಮನೆಯಲ್ಲಿ ಆಟದ ಶೈಲಿಗಳು, ಮನೆ ಸದಸ್ಯರ ಮನಸ್ಥಿತಿ ಎಲ್ಲವೂ ಬದಲಾಗಿದೆ. ಇನ್ನೇನಿದ್ದರು ಟ್ರೋಫಿ ಯಾರ ಕೈ ಸೇರಲಿದೆ ಅನ್ನೋ ಕೂತೂಹಲಕ್ಕೆ ಫುಲ್ ಸ್ಟಾಪ್ ಬೀಳಬೇಕಿದೆ. ಇನ್ನೂ, ಟಿಕೆಟ್ ಟೂ ಫಿನಾಲೆ ಈ ವಾರವಂತೂ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬಿಗ್​ಬಾಸ್​ ವಾರಂತ್ಯದ ಕಳಪೆ ಉತ್ತಮದ ಬಗ್ಗೆ ಭಾರಿ ದೊಡ್ಡ ಚರ್ಚೆಯಾಗಿದೆ.

ತುಕಾಲಿ ಸಂತೂ ಆಟದ ವೈಖರಿ ಮನೆಯಲ್ಲಿ ಎಲ್ಲಾ ಸದಸ್ಯರಿಗೂ ಅಸಮಾಧಾನ ಉಂಟು ಮಾಡಿದೆ. ಸಿಕ್ಕ ಕೆಲವು ಟಾಸ್ಕ್​​ಗಳಲ್ಲಿಯೂ ಹಿಂದೆ ಬಿದ್ದಿದ್ದರಿಂದ ಮನೆಯ ಸದಸ್ಯರ ಕಣ್ಮುಂದೆ ತುಕಾಲಿ ಈ ವಾರದ ಕಳಪೆ ಪಟ್ಟಕ್ಕೆ ಆಯ್ಕೆ ಆಗಿದ್ದಾರೆ. ಇನ್ನೂ ಕಾರ್ತಿಕ್, ಪ್ರತಾಪ್ ಮನೆಯ ಕೆಲವು ಸದಸ್ಯರು ತುಕಾಲಿ ಅವರ ಕಳಪೆ ಪ್ರದರ್ಶನಕ್ಕೆ ವೋಟ್ ಮಾಡಿದ್ದಾರೆ. ವರ್ತೂರು ಸಂತೋಷ್ ಅವರು ತಮ್ಮ ಸ್ನೇಹಿತ ಜೈಲು ಸೇರಿದ್ದ ಕಾರಣಕ್ಕೆ ಪ್ರತಾಪ್ ಮೇಲೆ ಕೆಂಡಕಾರಿದ್ದಾರೆ.

ಇದನ್ನು ಓದಿ : ಶ್ರೀರಾಮನಿಗಾಗಿ ‘ವಿಶೇಷ ಅನುಷ್ಠಾನ ಆಚರಣೆ’ಗೆ ಮೋದಿ ಸಂಕಲ್ಪ.. 11 ದಿನ ಪ್ರಧಾನಿ ಏನೇನು ಮಾಡ್ತಾರೆ ಗೊತ್ತಾ..?

ವರ್ತೂರು ಸಂತೋಷ್ ಅವರು ಡ್ರೋನ್ ಪ್ರತಾಪ್‌ಗೆ ನೀನು ಹೀಗೆ ಮಾಡಿದ್ರೆ ಯಾರನ್ನ ಉಳಿಸಿಕೊಳ್ಳೋಕೆ ಆಗೋಲ್ಲ ಅಂದಿದ್ದಾರೆ. ವೇದಿಕೆ ಸಿಕ್ಕಾಗ ಇದೇ ರೀತಿ ಅಲ್ವಾ ಯೂಟಿಲೈಸ್ ಮಾಡಿಕೊಳ್ಳೋದು ಎಂದಿದ್ದಾರೆ. ಅದಕ್ಕೆ ಪ್ರತಾಪ್ ತುಕಾಲಿ ಅವರನ್ನು ಕಳಪೆ ಎಂದೇ ಅಂತ ಅಲ್ವಾ ನಿಮಗೆ ಬೇಸರ ಎಂದು ಕೇಳಿದ್ದಾರೆ. ಸದ್ಯ ಬಿಗ್​​ಬಾಸ್​ ಕೊನೆಯ ವಾರಾಂತ್ಯದಲ್ಲಿ ತುಕಾಲಿ ಜೈಲು ಸೇರಿದ್ದಾರೆ. ಇದರಿಂದ ಈ ವಾರ ಬಿಗ್​ಬಾಸ್​ ಮನೆಯಿಂದ ತುಕಾಲಿ ಸಂತೋಷ್​ ಹೊರ ಹೋಗೋ ಲಕ್ಷಣ ಎದ್ದು ಕಾಣುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಯಾಕೆ ಹೀಗಾಯ್ತು.. ಡ್ರೋನ್ ಗೇಮ್‌ ಪ್ಲಾನ್‌ಗೆ ರೊಚ್ಚಿಗೆದ್ದ ವರ್ತೂರು ಸಂತೋಷ್!

https://newsfirstlive.com/wp-content/uploads/2024/01/bigg-boss-2024-01-12T152645.180.jpg

Load More