Advertisment

BBK11: ಬಿಗ್‌ ಬಾಸ್ ಮನೆಯಲ್ಲಿ ಬೆಂಕಿ.. ನರಕ ಬಿಟ್ಟು ಸ್ವರ್ಗಕ್ಕೆ ಬಂದ ಚೈತ್ರಾ ಆರ್ಭಟ; ಏನಾಯ್ತು?

author-image
admin
Updated On
ಬಿಗ್​ಬಾಸ್​ ಮನೆಯಲ್ಲಿ ಮೊದಲ ದಿನವೇ ಚೈತ್ರಾ ಕುಂದಾಪುರ ಕಿರಿಕ್‌; ಕಿಚ್ಚನಿಂದ ಕ್ಲಾಸ್​ ಪಕ್ಕಾ!
Advertisment
  • ಬಿಗ್ ಬಾಸ್ ಸೀಸನ್ 11 ಶುರುವಾದ ಮೊದಲ ದಿನವೇ ಫೈಟ್‌!
  • ನರಕದ ನಿವಾಸಿಗಳನ್ನು ಶಿಕ್ಷೆಗೆ ಗುರಿ ಪಡಿಸಿದ ಸ್ವರ್ಗದ ಸ್ಪರ್ಧಿಗಳು
  • ಹಣ್ಣನ್ನು ಕಚ್ಚಿ ನರಕದ ಮನೆಯೊಳಗೆ ಬಿಸಾಕಿದ್ದ ಚೈತ್ರಾ ಕುಂದಾಪುರ

ಬಿಗ್ ಬಾಸ್ ಸೀಸನ್ 11 ಮನೆಗೆ ಮೊದಲ ಬಾರಿಗೆ ಬೆಂಕಿ ಬಿದ್ದಿದೆ. ಅಂದ್ರೆ ಸ್ವರ್ಗ, ನರಕದ ಸ್ಪರ್ಧಿಗಳು ಅಕ್ಷರಶ: ಯುದ್ಧಕ್ಕೆ ಧುಮುಕಿದ್ದಾರೆ. ಬಿಗ್ ಬಾಸ್ ಶುರುವಾದ ಮೊದಲ ದಿನವೇ ಸೀಸನ್ 11ರ ಸ್ಪರ್ಧೆಗಳ ಜಟಾಪಟಿ ಶುರುವಾಗಿದೆ. ಈ ಬಾರಿ ಹಿಂದುತ್ವದ ಫೈರ್ ಬ್ರ್ಯಾಂಡ್ ಅಂತಲೇ ಹೆಸರುವಾಸಿಯಾಗಿರುವ ಚೈತ್ರಾ ಕುಂದಾಪುರ ಅವರು ಬೆಂಕಿ ಆಗಿದ್ದಾರೆ.

Advertisment

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮತ್ತೆ ಹುಲಿ ಉಗುರು.. ವರ್ತೂರ್‌ ಸಂತೋಷ್ ಬಳಿಕ ಮತ್ತೊಬ್ಬ ಸ್ಪರ್ಧಿಗೆ ಸಂಕಷ್ಟ? 

ಬಿಗ್‌ ಬಾಸ್ ಸೀಸನ್ 11ರ ಸ್ವರ್ಗ, ನರಕದ ಯುದ್ಧ ಶುರುವಾಗಿದೆ. ಇಂದಿನ ಟಾಸ್ಕ್‌ನಲ್ಲಿ ನರಕದ ನಿವಾಸಿಗಳಿಗೆ ಸ್ವರ್ಗದಲ್ಲಿರುವ ಸ್ಪರ್ಧಿಗಳು ಶಿಕ್ಷೆಗೆ ಗುರಿಪಡಿಸಿದ್ದಾರೆ. ಸ್ವರ್ಗದವರು ತೆಗೆದುಕೊಂಡ ತೀರ್ಮಾನದಂತೆ ಮನೆ ಕೆಲಸದ ಜವಾಬ್ದಾರಿಯನ್ನು ನರಕ ನಿವಾಸಿಗಳ ಮೇಲೆ ಏರಲಾಗಿದೆ.

publive-image

ನರಕದಲ್ಲಿರುವ ಏಳು ಸ್ಪರ್ಧಿಗಳು ಬಿಗ್‌ ಬಾಸ್ ಮನೆಯ ಕೆಲಸ ಮಾಡಲು ಆರಂಭಿಸಿದ್ದಾರೆ. ಅಂದ್ರೆ ಮನೆಯನ್ನ ತೊಳೆಯೋದು, ಗುಡಿಸೋ ಕೆಲಸ ಮಾಡುತ್ತಾ ಇದ್ದಾರೆ. ಈ ಮಧ್ಯೆ ಸ್ವರ್ಗ, ನರಕದ ಅಸಲಿ ಕಿಚ್ಚು ಹೊತ್ತಿಕೊಂಡಿದೆ.
ಸ್ವರ್ಗದಲ್ಲಿರುವ ಉಗ್ರಂ ಮಂಜು ಅವರು ನರಕ ನಿವಾಸಿ ಚೈತ್ರಾ ಕುಂದಾಪುರ ಅವರಿಗೆ ಕೆಲಸ ಒಂದನ್ನ ಹೇಳಿದ್ದಾರೆ. ಹಣ್ಣನ್ನು ವಾಷ್ ಮಾಡಿ ಕಟ್ ಮಾಡಿಕೊಡಲು ಚೈತ್ರಾ ಅವರಿಗೆ ಉಗ್ರಂ ಮಂಜು ಹೇಳಿದ್ದಾರೆ. ಆದರೆ ಚೈತ್ರಾ ಅವರು ಹಣ್ಣನ್ನು ಕಚ್ಚಿ ನರಕದ ಮನೆಯೊಳಗೆ ಬಿಸಾಕಿದ್ದಾರೆ. ಆಗ ಸ್ವರ್ಗದ ನಿವಾಸಿಗಳು ಕೂಗಾಡಿದ್ದು, ರೂಲ್ಸ್ ಬ್ರೇಕ್‌ ಆಗಿದೆ ಎನ್ನುತ್ತಾರೆ.

Advertisment

publive-image

ಮಂಜು ಉಗ್ರಾವತಾರಕ್ಕೆ ಉತ್ತರಿಸಿದ ಚೈತ್ರಾ ಕುಂದಾಪುರ ಅವರು ನನ್ನನ್ನು ಯಾಕೆ ಕರೆಯಬೇಕಾಗಿತ್ತು. ಯಾಕೆ ನನ್ನನ್ನು ಪ್ರವೋಕ್ ಮಾಡಬೇಕಿತ್ತು. ನಾನು ಹಣ್ಣನ್ನು ತಿನ್ನುತ್ತೇನೆ ಎಂದು ಸವಾಲು ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಯಮುನಾ ಸೇರಿ ಹಲವರು ರೂಲ್ಸ್ ಬಗ್ಗೆ ಮಾತನಾಡಿದ್ದಾರೆ. ಆಗ ಚೈತ್ರಾ ಕುಂದಾಪುರ ಅವರು ಮಾತನಾಡಬಾರದು ಅಂತ ರೂಲ್ಸ್ ಬುಕ್‌ನಲ್ಲಿದ್ರೆ ತೋರಿಸಿ ನಾನು ಮಾತನಾಡಲ್ಲ ಎಂದು ಪ್ರತಿ ಸವಾಲು ಹಾಕಿದ್ದಾರೆ.
ಸೀಸನ್ 11ರ ಮೊದಲನೆ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಿಚ್ಚು ಹೊತ್ತಿಕೊಂಡಿದೆ. ಚೈತ್ರಾ ಕುಂದಾಪುರ ಅವರು ಉಗ್ರಂ ಮಂಜು ಮಧ್ಯೆ ಬೆಂಕಿ ಹೊತ್ತಿಕೊಂಡಿದ್ದು, ಜಗಳ ತಾರಕಕ್ಕೇರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment