/newsfirstlive-kannada/media/post_attachments/wp-content/uploads/2024/09/BBK-11-Gowtami-Jadhav.jpg)
ಕನ್ನಡ ಕಿರುತೆರೆಗೆ ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಓಪನಿಂಗ್ ಕೊಟ್ಟಾಯ್ತು. ಸುಂಟರಗಾಳಿ ಸೃಷ್ಟಿಸುವ ಈ ರಿಯಾಲಿಟಿ ಶೋನ ಅಸಲಿ ಆಟ ಈಗ ಶುರುವಾಗಿದೆ. ಸೀಸನ್ 11ರ 17 ಕಂಟೆಸ್ಟೆಂಟ್‌ಗಳು ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 7 ಸ್ಪರ್ಧಿಗಳು ನರಕದ ಪಾಲಾಗಿದ್ರೆ 10 ಮಂದಿ ಸ್ಪರ್ಗದ ಸುಖ ಅನುಭವಿಸುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 11ರ ಆರಂಭದಲ್ಲೇ ಭರ್ಜರಿ ಟ್ವಿಸ್ಟ್‌ಗಳನ್ನ ಕೊಡಲಾಗಿತ್ತು. ಇದೀಗ ಮೊದಲ ದಿನವೇ ಹೊಸ ಅಧ್ಯಾಯಕ್ಕೆ ಸ್ಪರ್ಧಿಗಳು ಮುನ್ನುಡಿ ಬರೆದಿದ್ದಾರೆ. ಹೊರಗಡೆ ತಮ್ಮ ಇಷ್ಟದಂತೆ ಬದುಕಿ ಬಂದಿರೋ ಮಂದಿ ಈಗ ಸೆರೆಮನೆಯಲ್ಲಿ ಬಿಗ್ ಬಾಸ್ ಲೈಫಿಗೆ ಹೊಂದಿಕೊಳ್ಳುವ ಯತ್ನ ಮಾಡುತ್ತಿದ್ದಾರೆ.
ಪ್ರಮುಖವಾಗಿ ಸೀಸನ್ 11ರ 17 ಸ್ಪರ್ಧಿಗಳ ಅಸಲಿ ಮುಖವಾಡ ಬಯಲಾಗುವ ಸಮಯ ಈಗ ಬಂದಿದೆ. 2 ಕೋಟಿ ರೂಪಾಯಿ ಚಿನ್ನವನ್ನು ಮೈಮೇಲೆ ಹಾಕಿಕೊಂಡು ಬಂದಿದ್ದ ಗೋಲ್ಡ್ ಸುರೇಶ್ ಅವರು ತಮ್ಮ ಚಿನ್ನವನ್ನೆಲ್ಲಾ ಈಗ ಗಂಟು ಮೂಟೆ ಕಟ್ಟಿ ನರಕದ ಜೀವನಕ್ಕೆ ಸಜ್ಜಾಗಿದ್ದಾರೆ.
ಹೊಸ ಅಧ್ಯಾಯಕ್ಕೆ ಗೌತಮಿ ಹೊಸ ಟಚ್!
ಸ್ವರ್ಗದಲ್ಲಿರುವ ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್ ಅವರು ಎಲ್ಲರಿಗಿಂತ ಮುಂಚೆ ಬಿಗ್ ಬಾಸ್ ಮನೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಸತ್ಯ ಸೀರಿಯಲ್ ಗೆಟಪ್‌ನಲ್ಲೇ ಗೌತಮಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.
ಗೌತಮಿ ಅವರ ವಿಗ್ ನೋಡಿ ನರಕದಲ್ಲಿರುವ ರಂಜಿತ್ ಅವರು ನೀವು ವಿಗ್ ಹಾಕೊಂಡೇ ಇರಬೇಕಾ? ಟಾಸ್ಕ್ ಟೈಮ್‌ನಲ್ಲಿ ಬಿದ್ದು ಹೋಗ್ಬಿಟ್ರೆ ಅನ್ನೋ ಮಾತನಾಡಿದ್ದಾರೆ. ಇದಕ್ಕೆ ತಕ್ಕ ಉತ್ತರ ಕೊಟ್ಟಿರುವ ಗೌತಮಿ ಅವರು ಜನರು ಇದೇ ರೀತಿ ನನ್ನ ನೋಡಿ ಪ್ರೀತಿಸಿ ಇಲ್ಲಿವರೆಗೂ ಬರೋದಕ್ಕೆ ನನ್ನ ಜೊತೆ ಇದ್ದಾರೆ. ನಿಮಗೆ ಕಾಣುವಂತ ನಾನು ನಾನಾಗಿ ಬದಲಾಗುತ್ತೀನಿ ಅಂತ ಅನ್ನಿಸುತ್ತೆ. ಗೌತಮಿಯ ಹೊಸ ಅಧ್ಯಾಯ ಈಗ ಶುರುವಾಗುತ್ತಿದೆ ಎಂದು ತಮ್ಮ ಅಸಲಿ ರೂಪಕ್ಕೆ ಬದಲಾಗಿದ್ದಾರೆ.
ಇದನ್ನೂ ಓದಿ: ‘ಬಿಗ್ಬಾಸ್ನಲ್ಲಿ ಗುದ್ದಾಟಕ್ಕೆ ನಿಂತರೆ..’ ಖಡಕ್ ಡೈಲಾಗ್ ಮೂಲಕ ಗೌತಮಿ ಎಂಟ್ರಿ VIDEO
ಬಿಗ್ ಬಾಸ್ ಮನೆಯಲ್ಲಿ ಈಗ ಒಬ್ಬೊಬ್ಬರದ್ದು ಒಂದೊಂದು ಲೆಕ್ಕಾಚಾರ ಶುರುವಾಗಿದೆ. ಮೊದಲ ದಿನ ಸ್ವರ್ಗ, ನರಕದ ವಾತಾವರಣ ತಿಳಿಯಾಗಿದ್ರೂ ದಿನಕಳೆದಂತೆ ಬೆಂಕಿ, ನೀರಿನ ಯುದ್ಧಕ್ಕೆ ಅಖಾಡ ಸಜ್ಜಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ