/newsfirstlive-kannada/media/post_attachments/wp-content/uploads/2024/09/Kiccha-sudeep-2.jpg)
ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ ಬಾಸ್​ ಬರಲಿದೆ. ಕಿಚ್ಚ ಸುದೀಪ್​ ನಿರೂಪಣೆಯಲ್ಲಿ ಬಿಗ್​ ಬಾಸ್​ ಸೀಸನ್​​ 11 ಬರಲಿದೆ. ಈಗಾಗಲೇ ಪ್ರೊಮೋ ರಿಲೀಸ್​ ಮಾಡಿದ್ದು, ಸ್ವರ್ಗ-ನರಕ ಎಂಬ ವಿಭಿನ್ನ ಪ್ರಯೋಗದ ಮೂಲಕ ರಿಯಾಲಿಟಿ ಶೋ ಮೂಡಿ ಬರಲಿದೆ. ಸದ್ಯ ಅಭಿಮಾನಿಗಳ ಕುತೂಹಲತೆಯನ್ನೂ ಪ್ರೊಮೋ ಹೆಚ್ಚಿಸಿದೆ.
ನಿನ್ನೆ ಬಿಗ್​ ಬಾಸ್ ಸೀಸನ್​ 11 ಪ್ರಾರಂಭದ ಬಗ್ಗೆ ಪತ್ರಿಕಾಗೋಷ್ಠಿ ನಡೆದಿತ್ತು. ಈ ವೇಳೆ ಕಾರ್ಯಕ್ರಮದ ಆಯೋಜಕರ ಬಳಿ ಪತ್ರಕರ್ತರೊಬ್ಬರು ಕಿಚ್ಚನ ಸಂಭಾವನೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಹಿಂದಿ ಬಿಗ್​​ ಬಾಸ್​​ ನಡೆಸಿಕೊಡುವ ಸಲ್ಮಾನ್​​ ಖಾನ್​ಗೆ ಸಂಭಾವನೆಯಾಗಿ 350 ಕೋಟಿ ನೀಡಲಾಗುತ್ತೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಕಿಚ್ಚ ಸುದೀಪ್​ಗೆ ನೀಡುತ್ತಿರುವ ಸಂಭಾವನೆ ಎಷ್ಟು ಎಂದು ಕೇಳಿದ್ದಾರೆ?.
ಇದನ್ನೂ ಓದಿ: ಬಿಗ್‌ಬಾಸ್ ಸೀಸನ್ 11: ಶೋಗೂ ಮೊದಲೇ 5 ಸ್ಪರ್ಧಿಗಳ ಹೆಸರು ಫೈನಲ್! ಸ್ವರ್ಗಕ್ಕೆ ಯಾರು? ನರಕಕ್ಕೆ ಯಾರು?
ಇದಕ್ಕೆ ಆಯೋಜಕರು ನೀವು 350 ಕೋಟಿ ಕೊಡುತ್ತಿದ್ದಾರೆ ಎಂದರೆ ನಂಬುತ್ತೀರಾ? ಹಿಂದಿಯಲ್ಲಿ ಜನರು 1000 ಕೋಟಿ ನೀಡುತ್ತಾರೆ ಎಂದು ಮಾತನಾಡಿಕೊಳ್ಳುತ್ತಾರೆ. ಈ ವೇಳೆ ಸುದೀಪ್​ರವರು ಪತ್ರಕರ್ತ ಮತ್ತು ಆಯೋಜಕರ ಕಾಲೆಳೆದಿದ್ದಾರೆ. ಒಳ್ಳೆಯ ಪ್ರಶ್ನೆ ಕೇಳಿದ್ದೀರಾ ಎಂದು ಸುದೀಪ್​ ಹೇಳಿದ್ದಾರೆ. ಅತ್ತ ಆಯೋಜಕರು ನಿಮ್ಮ ಮನವಿಯನ್ನು ನೋಟ್​ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us