Bigg Boss ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ-ಕಿಚ್ಚನ ಪಂಚಾಯ್ತಿಯಲ್ಲಿ ಏನೆಲ್ಲ ಚರ್ಚೆ ಆಗುತ್ತೆ..?

author-image
Ganesh
Updated On
Bigg Boss ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ-ಕಿಚ್ಚನ ಪಂಚಾಯ್ತಿಯಲ್ಲಿ ಏನೆಲ್ಲ ಚರ್ಚೆ ಆಗುತ್ತೆ..?
Advertisment
  • ‘ವಾರದ ಕತೆ ಕಿಚ್ಚನ ಜೊತೆ’ ನೋಡಲು ವೀಕ್ಷಕರು ಎಕ್ಸೈಟ್
  • ಸ್ವರ್ಗ-ನರಕ ನಿನ್ನೆಯಿಂದ ಒಂದಾಗಿದೆ, ಮನೆ ದೊಡ್ಡದಾಗಿದೆ
  • ರೂಲ್ಸ್​ ಬ್ರೇಕ್, ತಪ್ಪಿನ ಲೆಕ್ಕಾಚಾರದ ಬಗ್ಗೆ ಮಾತುಕತೆ

ಬಿಗ್​ಬಾಸ್ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ. ಒಂದು ವಿಜಯ ದಶಮಿ ಸಂಭ್ರಮವಾದರೆ, ಮತ್ತೊಂದು ರಾತ್ರಿ 9 ಗಂಟೆಗೆ ಕಿಚ್ಚ ಸುದೀಪ್​​ ಅವರ ಮಾತುಗಳನ್ನು ಆಲಿಸಿಕೊಳ್ಳುವ ಕೌತುಕ. ಬಿಗ್​ಬಾಸ್ ಶುರುವಾಗಿ ಎರಡು ವಾರ ಕಳೆದು ಹೋಗಿದ್ದು, ಶನಿವಾರವಾದ ಇಂದು ರಾತ್ರಿ ಮತ್ತೆ ಸುದೀಪ್ ಪಂಚಾಯ್ತಿ ನಡೆಸಲಿದ್ದಾರೆ.

ಇದನ್ನೂ ಓದಿ:BBK11: ನಾವಿನ್ನು ಯಾವ ಆಟ ಆಡಲ್ಲ ಎಂದ ಗೋಲ್ಡ್​​ ಸುರೇಶ್​! ಈ ಕೋಪಕ್ಕೆ ಕಾರಣವೇನು?

ಸ್ಪರ್ಧಿಗಳ ಕಿತ್ತಾಟ, ಬಿಗ್​​ಬಾಸ್​ ಕೊಟ್ಟ ಟಾಸ್ಕ್​, ಗೇಮ್ ಎಲ್ಲವನ್ನೂ ನೋಡಿ ಸರಿ ತಪ್ಪುಗಳ ಬಗ್ಗೆ ಮಾತಾಡಿಕೊಳ್ತಿದ್ದ ಅಭಿಮಾನಿಗಳು ಇಂದು ಸುದೀಪ್​ ಪ್ರತಿಕ್ರಿಯೆ ಹೇಗಿರುತ್ತದೆ? ಸ್ಪರ್ಧಿಗಳ ಜೊತೆ ಹೇಗೆ ಮಾತುಕತೆ ನಡೆಸ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಬಿಗ್​​ಬಾಸ್​ ಕಿಚ್ಚ ಸುದೀಪ್ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸ್ತಾರೆ ಅನ್ನೋದ್ರ ಬಗ್ಗೆ ಪ್ರೊಮೋದಲ್ಲಿ ಚಿಕ್ಕದಾಗಿ ರಿವೀಲ್ ಮಾಡಿದ್ದಾರೆ.

25 ಸೆಕೆಂಡ್ ಇರುವ ವಿಡಿಯೋದಲ್ಲಿ ದೊಡ್ಮನೆಯ ಸ್ವರ್ಗ, ನರಕ ಒಂದಾಗಿದೆ. ರೂಲ್ಸ್​ ಬ್ರೇಕ್, ತಪ್ಪಿನ ಲೆಕ್ಕಾಚಾರಕ್ಕೆ ಕಿಚ್ಚನ ಪಂಚಾಯ್ತಿಯಲ್ಲಿ ಉತ್ತರ ಸಿಗಬೇಕು ಎಂಬ ಸಂದೇಶವನ್ನು ಬಿಗ್​ಬಾಸ್ ನೀಡಿದ್ದಾರೆ. ಹೀಗಾಗಿ ಇಂದಿನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ:BBK11:ನರಕದ ಮನೆ ಪೀಸ್ ಪೀಸ್ ಮಾಡಿದ ಬಿಗ್​ಬಾಸ್​; ಅಸಲಿಗೆ ಆಗಿದ್ದು ಏನು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment