newsfirstkannada.com

BBK10: ನಮ್ರತಾ ಬ್ಯೂಟಿ ಬಗ್ಗೆ ಹಾಡಿ ಹೊಗಳಿದ ಕಾರ್ತಿಕ್​.. ‘ಕರಿಮಣಿ ಮಾಲೀಕ ನೀನಲ್ಲ’ ಎಂದ ಫ್ಯಾನ್ಸ್​!

Share :

Published February 5, 2024 at 5:20pm

    ನಮ್ರತಾ ಜೊತೆ ಕ್ಯೂಟ್ ಆಗಿ ಮಾತಾಡಿ ಹೊಗಳಿದ ಕಾರ್ತಿಕ್​ ಮಹೇಶ್​

    ಅದೆಷ್ಟೋ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದ ವಿಡಿಯೋ!

    ಸೈಡ್​ಗೆ ತಿರುಗಿದ್ರಲ್ಲ ಆಗ ನಿಮ್ಮ ಮೂಗು ಬೊಟ್ಟು ಚೆನ್ನಾಗಿ ಕಾಣುತ್ತಿತ್ತು- ಕಾರ್ತಿಕ್​

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 10 ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವೈರಲ್​ ಆದ ವಿಡಿಯೋದಲ್ಲಿ ನಮ್ರತಾ ಗೌಡ ಹಾಗೂ ಕಾರ್ತಿಕ್​ ಮಹೇಶ್​ ಅವರು ಕ್ಯೂಟ್​ ಆಗಿ ಮಾತನಾಡಿರೋ ವಿಡಿಯೋ ಅದೆಷ್ಟೋ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಇದನ್ನು ಓದಿ: Bigg Boss: ನಮ್ರತಾ ಮೋಸ ಮಾಡ್ಬಿಟ್ರಾ? ಕೊನೆಗೂ ಸ್ನೇಹಿತ್‌ ಬಿಚ್ಚಿಟ್ರು ಬೇಸರ; ಹೇಳಿದ್ದೇನು?

ಹೌದು, ಬಿಗ್​ಬಾಸ್​​ ಸೀಸನ್​ 10ರ ವಿನ್ನರ್​ ಪಟ್ಟ ಪಡೆದ ಕಾರ್ತಿಕ್​ ಮಹೇಶ್​ ಅವರು ನಮ್ರತಾ ಗೌಡ ಅವರ ಜೊತೆ ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ಮಾತಾಡುತ್ತಿದ್ದರು. ಈ ವೇಳೆ ನಮ್ರತಾ ಡ್ಯಾನ್ಸ್ ಕ್ಲಾಸ್​ನಲ್ಲಿ ಇದ್ದರು. ಆದರೂ ಅವರು ಕಾರ್ತಿಕ್​ಗೋಸ್ಕರ ಸಮಯ ಮಾಡಿಕೊಂಡು ಲೈವ್​​ಗೆ ಬಂದಿದ್ದಾರೆ. ‘ಡ್ಯಾನ್ಸ್ ಕ್ಲಾಸ್​ನಲ್ಲಿ ಇದ್ದರೂ ಚೆನ್ನಾಗಿ ಕಾಣುತ್ತಾ ಇದೀರಾ. ಸೈಡ್​ಗೆ ತಿರುಗಿದ್ರಲ್ಲ ಆಗ ನಿಮ್ಮ ಮೂಗು ಬೊಟ್ಟು ಚೆನ್ನಾಗಿ ಕಾಣುತ್ತಿತ್ತು’ ಎಂದು ಕಾರ್ತಿಕ್ ಕಾಲೆಳೆದಿದ್ದಾರೆ. ಆಗ ನಮ್ರತಾ ಅವರು ನಾಚುತ್ತಾ ಸಾಕು ಕಾರ್ತಿಕ್​ ಸ್ಟಾಪ್​ ಮಾಡು ಎಂದು ಹೇಳುತ್ತಾರೆ. ಇದೇ ವಿಡಿಯೋವನ್ನು ಇಟ್ಟುಕೊಂಡು ಸಾಕಷ್ಟು ಮಂದಿ ಹೊಸ ಹೊಸ ಸಾಂಗ್ಸ್​ ಹಾಕುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. ಇತ್ತೀಚೆಗೆ ಟ್ರೆಂಡ್‌​ ಆಗಿರೋ ‘ಕರಿಮಣಿ ಮಾಲೀಕ ನೀನಲ್ಲ’ ಸಾಂಗ್ ಹಾಕಲಾಗಿದೆ.

ಇದೇ ವಿಚಾರದ ಬಗ್ಗೆ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ಕಾರ್ತಿಕ್ ಮಹೇಶ್, ಚೆನ್ನಾಗಿ ಕಾಣುತ್ತಿದ್ದಾರೆ ಅಂದ್ರೆ ಹೇಳುವುದರಲ್ಲಿ ತಪ್ಪೇನಿದೆ ಅಲ್ವಾ. ನನಗೆ ಇದ್ದೆಲ್ಲಾ ಹೇಳುವುದಕ್ಕೆ ತುಂಬಾ ಖುಷಿ ಆಗುತ್ತೆ ಅಂತ ಹೇಳಿಕೊಂಡಿದ್ದಾರೆ. ಬಿಗ್​ಬಾಸ್ ಮನೆಯಲ್ಲಿದ್ದಾಗ ಕೊನೆಯ ದಿನಗಳಲ್ಲಿ ಕಾರ್ತಿಕ್ ಹಾಗೂ ನಮ್ರತಾ ನಡುವೆ ಜಗಳ ಆಗಿತ್ತು. ಇದನ್ನು ಅವರು ಮುಂದುವರಿಸಿಲ್ಲ. ಬಿಗ್​ಬಾಸ್​ನಿಂದ ಹೊರ ಬಂದ ಬಳಿಕ ಕಾರ್ತಿಕ್ -ನಮ್ರತಾ ಫ್ರೆಂಡ್​ಶಿಪ್ ಮುಂದುವರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ನಮ್ರತಾ ಬ್ಯೂಟಿ ಬಗ್ಗೆ ಹಾಡಿ ಹೊಗಳಿದ ಕಾರ್ತಿಕ್​.. ‘ಕರಿಮಣಿ ಮಾಲೀಕ ನೀನಲ್ಲ’ ಎಂದ ಫ್ಯಾನ್ಸ್​!

https://newsfirstlive.com/wp-content/uploads/2024/02/bigg-bopss.jpg

Load More