/newsfirstlive-kannada/media/post_attachments/wp-content/uploads/2024/09/JOB-2-1.jpg)
ವಿವಿಧ ಉದ್ಯೋಗಗಳಿಗೆ ಬಿಹಾರ ಸರ್ಕಾರ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಬಿಡುಗಡೆಗೊಂಡಿರುವ ಅಧಿಕೃತ ನೋಟಿಫಿಕೇಶನ್ ಗಮನಿಸಿ ಬಳಿಕ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಸಾವಿರಕ್ಕೂ ಅಧಿಕ ಉದ್ಯೋಗಗಳಿದ್ದು ಅಪ್ಲೇ ಮಾಡಿದವರನ್ನ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಕರ್ನಾಟಕದ ರೆವಿನ್ಯೂ ಇಲಾಖೆಯಲ್ಲಿ ಬೃಹತ್ ಹುದ್ದೆಗಳ ನೇಮಕಾತಿ.. ಅರ್ಜಿ ಆರಂಭ, ಕೊನೆ ದಿನಾಂಕ?
ಬಿಹಾರ ಪಬ್ಲಿಕ್ ಸರ್ವೀಸ್ ಕಮಿಷನ್ ಇಲಾಖೆಯು ಈ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ವಯೋಮಿತಿ, ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಸೇರಿದಂತೆ ಇತರೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಆನ್​ಶುಲ್ಕ ಎಷ್ಟು ಪಾವತಿ ಮಾಡಬೇಕು ಎಂಬ ವಿವರ ಇಲ್ಲಿ ನೀಡಲಾಗಿದೆ.
ಸಂಬಳ-
₹61,500 ರಿಂದ ₹72,000
₹59,857 ರಿಂದ ₹68,795
ಒಟ್ಟು ಹುದ್ದೆಗಳು-
1,957
ವಿದ್ಯಾರ್ಹತೆ-
ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿರಬೇಕು. ವಿವಿಧ ಹುದ್ದೆಗಳಿಗೆ ಬೇರೆ ಬೇರೆ ಶೈಕ್ಷಣಿಕ ಅರ್ಹತೆ ಕೇಳಲಾಗಿದೆ. ಅಭ್ಯರ್ಥಿಗಳು ನೋಟಿಫಿಕೆಶನ್ ವೀಕ್ಷಿಸಬೇಕು.
ಇದನ್ನೂ ಓದಿ:SSLC, PUC ಬೋರ್ಡ್ ಎಕ್ಸಾಂ ಯಾವಾಗ.. ಈ ತಿಂಗಳಲ್ಲೇ CBSE ಪರೀಕ್ಷೆ ನಡೆಸುತ್ತಾ?
ಈ ಹುದ್ದೆಗಳ ಪ್ರಮುಖ ದಿನಾಂಕಗಳು
- ಅರ್ಜಿ ಆರಂಭದ ದಿನಾಂಕ- ಸೆಪ್ಟೆಂಬರ್ 28, 2024
- ಅರ್ಜಿ ಕೊನೆಯ ದಿನಾಂಕ- ಅಕ್ಟೋಬರ್ 18, 2024
ವಯೋಮಿತಿ-
- ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ರಿಂದ 40 ವರ್ಷಗಳು
- ಪುರುಷರಿಗೆ ಗರಿಷ್ಠ- 37 ವರ್ಷಗಳು
- ಮಹಿಳೆಯರಿಗೆ ಗರಿಷ್ಠ- 40 ವರ್ಷಗಳು
ಅರ್ಜಿ ಶುಲ್ಕ ಎಷ್ಟು ಇದೆ..?
ಜನರಲ್, ಓಬಿಸಿ, ಇತರೆ ಅಭ್ಯರ್ಥಿಗಳು- 600 ರೂ.ಗಳು
ಎಸ್​​ಸಿ, ಎಸ್​​ಟಿ, ವಿಶೇಷ ಚೇತನರು- 150 ರೂ.ಗಳು
ಎಲ್ಲ ವರ್ಗದ ಮಹಿಳೆಯರಿಗೆ- 150 ರೂ.ಗಳು
ಆಯ್ಕೆ ಪ್ರಕ್ರಿಯೆ-
- ಪ್ರಿಲಿಮ್ಸ್ ಪರೀಕ್ಷೆ,
- ಮುಖ್ಯ ಪರೀಕ್ಷೆ ಹಾಗೂ
- ವ್ಯಕ್ತಿತ್ವ ಪರೀಕ್ಷೆ ಇರುತ್ತವೆ
ಅಪ್ಲೇ ಮಾಡಲು ಈ ಲಿಂಕ್​ಗೆ ಭೇಟಿ ನೀಡಿ- bpsc.bih.nic.in
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ