/newsfirstlive-kannada/media/post_attachments/wp-content/uploads/2024/07/Bike-Accident.jpg)
ವಿಜಯಪುರ: ಕಂಪೌಂಡ್‌ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಇಂಡಿ ತಾಲೂಕಿನ ರೂಗಿ ಕ್ರಾಸ್ನ ಸುಲಗಮ್ಮದೇವಿ ಮಠದ ಬಳಿ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ: ಟ್ರ್ಯಾಕ್ಟರ್ ಸಾಲ, ಬೆಳೆ ಸಾಲ, ಕೈ ಸಾಲ.. ಸಾಲಬಾಧೆಗೆ ಬೇಸತ್ತು ನೇಣು ಹಾಕಿಕೊಂಡ ರೈತ
ನಾಗೇಶ ನಾವಿ 27, ಸಿದ್ದು ಬಿರಾದಾರ 37 ಮೃತಪಟ್ಟಿರುವ ದುರ್ದೈವಿಗಳು. ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಪೌಂಡ್‌ಗೆ ಹೋಗಿ ಡಿಕ್ಕಿ ಹೊಡೆದಿದ್ದಾರೆ. ಬೈಕ್ ಡಿಕ್ಕಿ ಹಿನ್ನೆಲೆ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಸಿಕ್ಕಿ ಬಿದ್ದ ಅಂತರ್ ಜಿಲ್ಲಾ ಕಳ್ಳರು! 244 ಗ್ರಾಂ ಬಂಗಾರ, 2500 ಗ್ರಾಂ ಬೆಳ್ಳಿ ವಶಕ್ಕೆ
ಮೃತಪಟ್ಟಿರುವ ಶವಗಳನ್ನು ಇಂಡಿ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ