newsfirstkannada.com

ಡಿವೈಡರ್​ಗೆ ಬೈಕ್​ ಡಿಕ್ಕಿ; ರಾಜಕಾಲುವೆಗೆ ಬಿದ್ನಾ ಡೆಲಿವರಿ ಬಾಯ್? ಬದುಕಿದನೋ, ಸಾವನ್ನಪ್ಪಿದನೋ? ನಿಗೂಢ!

Share :

Published July 6, 2024 at 1:09pm

  ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿಗಳು

  ಡಿವೈಡರ್​ಗೆ ಡಿಕ್ಕಿ ಹೊಡೆದ ಬೈಕ್, ರಾಜಕಾಲುವೆಗೆ ಸವಾರ ಬಿದ್ದನಾ?

  ಸ್ಥಳದಲ್ಲಿ ಶೋರ್ಧ ಕಾರ್ಯ, ಬಿಬಿಎಂಪಿ ಇಂಜಿನಿಯರ್ಸ್​​ ಆಗಮನ

ಬೆಂಗಳೂರು: ರಾತ್ರಿ ವೇಳೆ ಬೈಕ್ ಡಿವೈಡರ್​ಗೆ ಡಿಕ್ಕಿ ಹೊಡೆದು ಸವಾರನೊಬ್ಬ ರಾಜಕಾಲುವೆ ಬಿದ್ದು ಸಾವನ್ನಪ್ಪಿದ್ದಾನೆ ಎನ್ನುವ ಆತಂಕ ಎದುರಾಗಿದೆ. ಅನುಮಾನದ ಮೇಲೆ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಜ್ಞಾನ ಭಾರತಿ ಮೆಟ್ರೋ ಸ್ಟೇಷನ್ ಸಮೀಪದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಸಿಲಿಕಾನ್​ ಸಿಟಿಯಲ್ಲಿ ಡೆಂಘೀಗೆ ಮೊದಲ ಬಲಿ.. 11 ವರ್ಷದ ಬಾಲಕ ಸಾವು

ಬ್ಯಾಟರಾಯನಪುರದ ನಿವಾಸಿ ಡೆಲಿವರಿ ಬಾಯ್ ಆಗಿರುವ ಹೇಮಂತ್ ಕುಮಾರ್ (27) ಸದ್ಯ ನಾಪತ್ತೆ ಆಗಿದ್ದಾನೆ. ಈತ ನಿನ್ನೆ ರಾತ್ರಿ 10:30ರ ಸುಮಾರಿಗೆ ಕೆಂಗೇರಿ ಕಡೆಯಿಂದ ಮೈಸೂರು ರಸ್ತೆಯಲ್ಲಿ ಪ್ರಯಾಣಿಸುತ್ತಿರುವಾಗ ಬೈಕ್ ಡಿವೈಡರ್​ಗೆ ಡಿಕ್ಕಿಯಾಗಿ ರಾಜಕಾಲುವೆಗೆ ಬಿದ್ದಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪ್ರತ್ಯಕ್ಷದರ್ಶಿಗಳು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: KRS, ಕಬಿನಿ ಡ್ಯಾಂ ನೀರಿನ ಮಟ್ಟ ಹೇಗಿದೆ.. ಈ ಜಲಾಶಯದಿಂದ ಶೀಘ್ರದಲ್ಲೇ ಶುಭಸುದ್ದಿ..!

ಈ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಪೋಲಿಸರು ರಾಜಕಾಲುವೆಯಲ್ಲಿ ಬೆಳಗ್ಗೆಯಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಸವಾರನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಜ್ಞಾನ ಭಾರತಿ ಮೆಟ್ರೋ ಸ್ಟೇಷನ್ ಸಮೀಪವೇ ಸವಾರನ ಬೈಕ್ ಇದೆ. ಸ್ಥಳದಲ್ಲಿ ಚಪ್ಪಲಿಗಳು, ಡಿವೈಡರ್​ಗೆ ಬೈಕ್ ತಾಗಿರುವ ಗುರುತು ಆಧಾರಿಸಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬೈಕ್ ಸವಾರ ಬಿದ್ದಿದ್ದಾನೋ, ಇಲ್ಲವೋ ಎಂಬುದು ಪೊಲೀಸರಿಗೆ ಅನುಮಾನವಿದೆ. ಇನ್ನು ಈ ಸಂಬಂಧ ಪೊಲೀಸರು ಬಿಬಿಎಂಪಿ ಇಂಜಿನಿಯರ್ಸ್​ನ್ನ ಘಟನಾ ಸ್ಥಳಕ್ಕೆ ಕರೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿವೈಡರ್​ಗೆ ಬೈಕ್​ ಡಿಕ್ಕಿ; ರಾಜಕಾಲುವೆಗೆ ಬಿದ್ನಾ ಡೆಲಿವರಿ ಬಾಯ್? ಬದುಕಿದನೋ, ಸಾವನ್ನಪ್ಪಿದನೋ? ನಿಗೂಢ!

https://newsfirstlive.com/wp-content/uploads/2024/07/BNG_JNANA_BHARATI.jpg

Load More