ಕಾಲೇಜು ಮುಂಭಾಗ ಸ್ಕಿಡ್ ಆಗಿ ಬಿದ್ದ ಬೈಕ್.. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು, ಯುವಕ ಗಂಭೀರ

author-image
Bheemappa
Updated On
ಕಾಲೇಜು ಮುಂಭಾಗ ಸ್ಕಿಡ್ ಆಗಿ ಬಿದ್ದ ಬೈಕ್.. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು, ಯುವಕ ಗಂಭೀರ
Advertisment
  • ರಾತ್ರಿ ವೇಳೆ ವೇಗವಾಗಿ ಹೋಗುವಾಗ ಸ್ಕಿಡ್ ಆದ ಬೈಕ್
  • ಘಟನೆಯಲ್ಲಿ ಗಾಯಗೊಂಡ ಯುವಕ, ಆಸ್ಪತ್ರೆಗೆ ದಾಖಲು
  • ಬೈಕ್ ಬಿದ್ದಿರುವ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿ

ಬೆಂಗಳೂರು: ವೇಗವಾಗಿ ಹೋಗುವಾಗ ಬೈಕ್​ವೊಂದು ಸ್ಕಿಡ್ ಆಗಿ ಬಿದ್ದು ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ನಗರದ ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್ ಕಾಲೇಜು ಮುಂಭಾಗ ಮಧ್ಯರಾತ್ರಿ ನಡೆದಿದೆ.

ಇದನ್ನೂ ಓದಿ:ಬಿಕ್ಕಿಬಿಕ್ಕಿ ಕಣ್ಣೀರಿಟ್ಟ​ ಪಾಂಡ್ಯ.. ಪತ್ನಿ ಅನುಷ್ಕಾ ಶರ್ಮಾಗೆ ವಿಡಿಯೋ ಕಾಲ್ ಮಾಡಿ ಕೊಹ್ಲಿ ಭಾವುಕ

ಕುಮಾರ್ (30) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ. ನವೀನ್ (20) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಇಬ್ಬರು ರಾತ್ರಿ 1:30ರ ಸುಮಾರಿಗೆ ಬೈಕ್​ನಲ್ಲಿ ವೇಗವಾಗಿ ಹೋಗುವಾಗ ಆಕ್ಸ್‌ಫರ್ಡ್ ಕಾಲೇಜು ಮುಂಭಾಗ ಬೈಕ್​ ಸ್ಕಿಡ್ ಆಗಿ ಬಿದ್ದಿದೆ. ಇದರಿಂದ ಸ್ಥಳದಲ್ಲೇ ಕುಮಾರ್ ಸಾವನ್ನಪ್ಪಿದ್ದು ನವೀನ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಡಿವಾಳ ಸಂಚಾರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment