newsfirstkannada.com

ಗ್ರ್ಯಾಂಡ್​​ ಈವೆಂಟ್​​ನಲ್ಲಿ 83 ಕೋಟಿ ಮೌಲ್ಯದ ಡ್ರೆಸ್​​ನಲ್ಲಿ ಮಿಂಚಿದ ಸುಧಾರೆಡ್ಡಿ; ಯಾರು ಈ ಚೆಲುವೆ?

Share :

Published May 8, 2024 at 5:56am

Update May 8, 2024 at 4:36pm

  ನೆರೆದಿದ್ದ ಕಣ್ಣು ಕುಕ್ಕುವಂತೆ ಮಾಡಿ ಬಿಲಿಯನೇರ್‌ ಸುಧಾ ರೆಡ್ಡಿ ಡೈಮಂಡ್ ನೆಕ್ಲೇಸ್‌

  2024ರ ಮೆಟ್ ಗಾಲಾ ಈವೆಂಟ್​​ನಲ್ಲಿ ಸಖತ್​ ಆಗಿ ಮಿಂಚಿದ ಭಾರತೀಯ ಸೆಲೆಬ್ರೆಟಿಗಳು

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ಸುಧಾ ರೆಡ್ಡಿ ಬ್ಯೂಟಿಫುಲ್​ ಫೋಟೋಸ್

ಮೆಟ್ ಗಾಲಾ 2024 ಇದು ಅತ್ಯಂತ ಮಹತ್ವದ ಅಂತಾರಾಷ್ಟ್ರೀಯ ಫ್ಯಾಷನ್ ಈವೆಂಟ್‌ಗಳಲ್ಲಿ ಒಂದಾಗಿದೆ. ಹೆಚ್ಚು ಹೆಸರುವಾಸಿಯಾಗಿರುವ ಈ ಮೆಟ್ ಗಾಲಾ ಈವೆಂಟ್​ ನ್ಯೂಯಾರ್ಕ್‌ನಲ್ಲಿ ನಡೆದಿದೆ. 2024ರ ಮೆಟ್ ಗಾಲಾ ಪ್ರತಿಷ್ಠಿತ ಸಮಾರಂಭದಲ್ಲಿ ಸಾಕಷ್ಟು ಭಾರತೀಯ ಸೆಲೆಬ್ರೆಟಿಗಳು ಮಿಂಚಿದ್ದಾರೆ.

ಇದನ್ನೂ ಓದಿ: Met Gala 2024: ಆಲಿಯಾ ಭಟ್​ಗೆ ದೀಪಿಕಾ ಪಡುಕೋಣೆ ಎಂದು ಕೂಗಿದ ವಿಡಿಯೋ ವೈರಲ್‌; ಅಸಲಿಗೆ ಆಗಿದ್ದೇನು?

ಈ ಮೆಟ್ ಗಾಲಾ ಈವೆಂಟ್​ನಲ್ಲಿ ಭಾರತೀಯ ಉದ್ಯಮಿ ಮತ್ತು ಬಿಲಿಯನೇರ್‌ ಸುಧಾ ರೆಡ್ಡಿ ಕೂಡ ಭಾಗಿಯಾಗಿದ್ದರು. ಇದೇ ಮೆಟ್ ಗಾಲಾ ಸಮಾರಂಭದಲ್ಲಿ ಉದ್ಯಮಿ ಮತ್ತು ಬಿಲಿಯನೇರ್‌ ಸುಧಾ ರೆಡ್ಡಿ ಅವರು ತೊಟ್ಟಿದ್ದ ಡೈಮಂಡ್ ನೆಕ್ಲೇಸ್‌ ನೆಟ್ಟಿಗರ ಗಮನ ಸೆಳೆದಿದೆ. ಹೌದು, ಹೈದರಾಬಾದ್ ಮೂಲದ ಬಿಲಿಯನೇರ್ ಮತ್ತು ಸುಧಾ ರೆಡ್ಡಿ ಅವರು ರೇಷ್ಮೆ ಗೌನ್ ಧರಿಸಿ ಮತ್ತು 180 ಕ್ಯಾರೆಟ್ ಡೈಮಂಡ್ ನೆಕ್ಲೇಸ್‌ ತೊಟ್ಟು ಫ್ಯಾಷನ್ ಪ್ರಿಯರ ಗಮನ ಸೆಳೆದಿದ್ದಾರೆ. ಇದರ ಜೊತೆಗೆ ಸುಮಾರು 10 ಮಿಲಿಯನ್ ಡಾಲರ್ ಅಂದರೆ ಬರೋಬ್ಬರಿ 83 ಕೋಟಿ ರೂಪಾಯಿ ಮೌಲ್ಯದ ಉಡುಪು ತೊಟ್ಟು ಮೆಟ್​​ ಗಾಲದಲ್ಲಿ ಸುಧಾ ರೆಡ್ಡಿ ಹೆಜ್ಜೆ ಹಾಕಿದ್ದಾರೆ. ವಿಶೇಷ ಎಂದರೆ ಸುಧಾ ರೆಡ್ಡಿ ಧರಿಸಿರುವ ಉಡುಗೆಯನ್ನು ಪ್ರಸಿದ್ಧ ಭಾರತೀಯ ಫ್ಯಾಷನ್ ಡಿಸೈನರ್​ ಆಗಿರೋತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ್ದಾರೆ. ಹೀಗಾಗಿ ಈ ವಸ್ತ್ರಕ್ಕೆ ಇನ್ನು ಹೊಳಪು ಜಾಸ್ತಿ ಬಂದಿದೆ ಎಂದರೆ ತಪ್ಪಾಗಲಾರದು.

View this post on Instagram

A post shared by Sudha Reddy (@sudhareddy.official)

ಇನ್ನು, ಬಿಲಿಯನೇರ್‌ ಸುಧಾ ರೆಡ್ಡಿ ಅವರು 180 ಕ್ಯಾರೆಟ್ ಡೈಮಂಡ್ ನೆಕ್ಲೇಸ್‌ ತೊಟ್ಟು ಹೆಜ್ಜೆ ಹಾಕಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗುತ್ತಿದೆ. ಸುಧಾ ರೆಡ್ಡಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ  ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಸುಧಾ ರೆಡ್ಡಿ ಅವರು ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ನಿರ್ದೇಶಕಿ. ರೆಡ್ಡಿ ಅವರು ಸುಧಾ ರೆಡ್ಡಿ ಫೌಂಡೇಶನ್, ಯುನಿಸೆಫ್, ಗ್ಲೋಬಲ್ ಗಿಫ್ಟ್ ಫೌಂಡೇಶನ್ ಮುಂತಾದ ಸಾಕಷ್ಟು ಚಾರಿಟಿ ಮೂಲಕ ಲೋಕೋಪಕಾರಿ ಕಾರ್ಯಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರ ಧರಿಸಿದ್ದ ಉಡುಪಿನ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ರ್ಯಾಂಡ್​​ ಈವೆಂಟ್​​ನಲ್ಲಿ 83 ಕೋಟಿ ಮೌಲ್ಯದ ಡ್ರೆಸ್​​ನಲ್ಲಿ ಮಿಂಚಿದ ಸುಧಾರೆಡ್ಡಿ; ಯಾರು ಈ ಚೆಲುವೆ?

https://newsfirstlive.com/wp-content/uploads/2024/05/Sudha-Reddy4.jpg

Load More