newsfirstkannada.com

ಶ್ರೀರಾಮನ ಫೋಟೋ ಇರುವ ಪ್ಲೇಟ್​ನಲ್ಲಿ ಬಿರಿಯಾನಿ ಊಟ; ಭುಗಿಲೆದ್ದ ಮತ್ತೊಂದು ವಿವಾದ

Share :

Published April 23, 2024 at 2:54pm

  ಹಿಂದೂ ಸಂಘಟನೆಗಳಿಂದ ತೀವ್ರ ಖಂಡನೆ ವ್ಯಕ್ತವಾಗಿದೆ

  ಬಿರಿಯಾನಿ ಅಂಗಡಿ ಮಾಲೀಕನ ವಿರುದ್ಧ ಕ್ರಮಕ್ಕೆ ಆಗ್ರಹ

  ನಾಲ್ಕು ಪ್ಲೇಟ್​ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು

ಭಗವಾನ್ ಶ್ರೀರಾಮನ ಫೋಟೋ ಇರುವ ಪ್ಲೇಟ್​​​ನಲ್ಲಿ ಬಿರಿಯಾನಿ ಬಡಿಸಿರುವ ಗಲಾಟೆ ದೆಹಲಿಯಲ್ಲಿ ಭುಗಿಲೆದ್ದಿದೆ. ಉತ್ತರ ದೆಹಲಿಯ ಜಹಂಗಿರ್​ಪುರಿಯಲ್ಲಿರುವ ಬಿರಿಯಾನಿ ಮಾರಾಟಗಾರರೊಬ್ಬರು ರಾಮಭಕ್ತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಶ್ರೀರಾಮನ ಫೋಟೋಗಳನ್ನು ಹೊಂದಿರುವ ಯೂಸ್ ಅಂಡ್​ ಥ್ರೋ ಪ್ಲೇಟ್​ನಲ್ಲಿ ಬಿರಿಯಾನಿ ಬಡಿಸಿದ್ದಾರೆ. ಈ ವಿಚಾರ ಹಿಂದೂ ಸಂಘಟನೆಗಳಿಗೆ ಗೊತ್ತಾಗುತ್ತಿದ್ದಂತೆಯೇ ಬಿರಿಯಾನಿ ಅಂಗಡಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ.

ಇದನ್ನೂ ಓದಿ:ಚುನಾವಣೆ.. ಝಣ ಝಣ ಕಾಂಚಾಣ.. ಈತನ ಅಂಗಿ ಒಳಗೆ ಇತ್ತು 14 ಲಕ್ಷ ಹಣ..!

ಮೊದಲು ಇದನ್ನು ಕೆಲವು ಗ್ರಾಹಕರು ಗಮನಿಸಿದ್ದಾರೆ. ನಂತರ ಹಿಂದೂ ಸಂಘಟನೆಗಳಿಗೆ ಮಾಹಿತಿ ನೀಡಿದ್ದಾರೆ. ಹಿಂದೂ ಕಾರ್ಯಕರ್ತರು ಸ್ಥಳಕ್ಕೆ ಬಂದು ನೋಡಿದಾಗ, ಪ್ಲೇಟ್​ಗಳನ್ನು ಬಳಸಿ ಕಸದ ತೊಟ್ಟಿಗೆ ಬಿಸಾಡಿರೋದು ಪತ್ತೆಯಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಶ್ರೀರಾಮನ ಫೋಟೋ ಇರುವ ನಾಲ್ಕು ಪ್ಲೇಟ್​​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀರಾಮನ ಫೋಟೋ ಇರುವ ಪ್ಲೇಟ್​ನಲ್ಲಿ ಬಿರಿಯಾನಿ ಊಟ; ಭುಗಿಲೆದ್ದ ಮತ್ತೊಂದು ವಿವಾದ

https://newsfirstlive.com/wp-content/uploads/2024/04/RAMA.jpg

Load More