newsfirstkannada.com

ಮಾಂಸಕ್ಕಾಗಿ ಗುಂಡಿಟ್ಟು ಕಾಡೆಮ್ಮೆ ಕೊಂದ ಪಾಪಿಗಳು, ಮಾಂಸ ನೋಡಿ ಅಧಿಕಾರಿಗಳು ಶಾಕ್..!

Share :

Published April 2, 2024 at 1:29pm

  ಇಬ್ಬರು ಆರೋಪಿಗಳ ಬಂಧನ, ಐವರ ವಿರುದ್ಧ ಕೇಸ್

  ಅರಣ್ಯಾಧಿಕಾರಿ ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿದೆ

  ಕಾಡೆಮ್ಮೆ ಕತ್ತರಿಸಿ ಮಾಂಸ ಸೇವನೆ ಮಾಡುವಾಗ ಸಿಕ್ಕಿಬಿದ್ದ ಕಳ್ಳರು

ಹಾಸನ: ಮಾಂಸಕ್ಕಾಗಿ ಕಾಡೆಮ್ಮೆ ಶೂಟ್‌ ಮಾಡಿ ಕೊಂದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಐವರು ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.

ಹೊಸೂರು ಎಸ್ಟೇಟ್‌ನ ಉಮೇಶ್, ರವಿ ಬಂಧಿತ ಆರೋಪಿಗಳು. ಸಕಲೇಶಪುರ ತಾಲೂಕಿನ ಹೊಸೂರು ಎಸ್ಟೇಟ್‌ನಲ್ಲಿ ಘಟನೆ ನಡೆದಿತ್ತು. ಹೊಸೂರು ಎಸ್ಟೇಟ್ ಸಮೀಪ ಮಾಂಸಕ್ಕಾಗಿ ಬಂದೂಕಿನಿಂದ ಕಾಡೆಮ್ಮೆ ಮೇಲೆ ಉಮೇಶ್ ಹಾಗೂ ರವಿ ಶೂಟ್ ಮಾಡಿದ್ದರು.

ಇದನ್ನೂ ಓದಿ: ಕಾರು-ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

ನಂತರ ಕಾಡೆಮ್ಮೆಯನ್ನು ಕತ್ತರಿಸಿ ಮಾಂಸ ಸೇವನೆ ಮಾಡುವಾಗ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಶಿಲ್ಪಾ ನೇತೃತ್ವದ ತಂಡ ದಾಳಿ ಮಾಡಿದೆ. ಕಾಡೆಮ್ಮೆಯ ಸುಮಾರು 10 ಕೆಜಿ ಮಾಂಸ ವಶವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣ ಸಂಬಂಧ ‌ಮಧು, ಆಕಾಶ್, ಅಜೀಜ್, ಸೋಮಣ್ಣ, ಇಕ್ಕೀಲ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಂಸಕ್ಕಾಗಿ ಗುಂಡಿಟ್ಟು ಕಾಡೆಮ್ಮೆ ಕೊಂದ ಪಾಪಿಗಳು, ಮಾಂಸ ನೋಡಿ ಅಧಿಕಾರಿಗಳು ಶಾಕ್..!

https://newsfirstlive.com/wp-content/uploads/2024/04/HSN-MEAT.jpg

Load More