/newsfirstlive-kannada/media/post_attachments/wp-content/uploads/2024/04/BIHAR_MAN_1.jpg)
ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಪತ್ನಿ ಮರಣದ ನಂತರ ಅತ್ತೆಯ ಜೊತೆ ಸಲುಗೆ ಬೆಳೆಸಿ, ಪ್ರೀತಿ ಮಾಡಿ ಮದುವೆಯಾಗಿರುವ ಘಟನೆ ಬಿಹಾರ ಬಂಕಾದ ಛತ್ರಪಾಲ್ ಪಂಚಾಯತ್‌ನ ಹೀರ್ಮೋತಿ ಗ್ರಾಮದಲ್ಲಿ ನಡೆದಿದೆ.
ಹೀರ್ಮೋತಿ ಗ್ರಾಮದ ಸಿಕಂದರ್ ಯಾದವ್, ಅತ್ತೆ ಗೀತಾ ದೇವಿ (45)ಯನ್ನು ಮದುವೆಯಾದ ಅಳಿಯ. ಮಾವ ದಿಲೇಶ್ವರ್ ದರ್ವೆ (55) ಗೀತಾ ದೇವಿ (45) ಈ ಇಬ್ಬರು ದಂಪತಿ. ಕೆಲವು ವರ್ಷಗಳ ಹಿಂದೆ ತಮ್ಮ ಮಗಳನ್ನು ಸಿಕಂದರ್ ಯಾದವ್ಗೆ ಕೊಟ್ಟು ಈ ದಂಪತಿ ಮದುವೆ ಮಾಡಿರುತ್ತಾರೆ. ಆದ್ರೆ ಕೆಲವು ಕಾರಣಗಳಿಂದ ಪತ್ನಿ ಸಾವನ್ನಪ್ಪುತ್ತಾಳೆ. ನಂತರ ಅಳಿಯ ಅತ್ತೆ ಮನೆಯಲ್ಲಿ ಇರಲು ಪ್ರಾರಂಭಿಸುತ್ತಾನೆ ಎನ್ನಲಾಗಿದೆ.
ಇದನ್ನೂ ಓದಿ:6:41ಕ್ಕೆ ಅರ್ಧಶತಕ 6:47ಕ್ಕೆ ಸೆಂಚುರಿ.. ಜಸ್ಟ್ ಆ 6 ನಿಮಿಷದ ವಿಲ್ ಜಾಕ್ಸ್ ಬ್ಯಾಟಿಂಗ್ ರಣಾರ್ಭಟ ಹೇಗಿತ್ತು?
ಇದನ್ನೂ ಓದಿ: Lok Sabha polls; ಕರ್ನಾಟಕದ ಒಂದೇ ಕ್ಷೇತ್ರದಲ್ಲಿ ಮೋದಿ, ಪ್ರಿಯಾಂಕಾ ಗಾಂಧಿ ಕ್ಯಾಂಪೇನ್ ಅಬ್ಬರ, ಎಲ್ಲಿ?
ಅಳಿಯ, ಅತ್ತೆ ಮನೆಯಲ್ಲಿ ಇರುವುದರಿಂದ ಇಬ್ಬರ ನಡುವೆ ಸಲುಗೆ ಬೆಳೆದು ಪ್ರೀತಿ ಮೂಡಿರುತ್ತದೆ. ಈ ಬಗ್ಗೆ ಕುಟುಂಬದಲ್ಲಿ ಅನುಮಾನ ಬಂದಿರುತ್ತದೆ. ಆದರೆ ಅಧಿಕೃತವಾಗಿ ಯಾರೂ ಪ್ರಸ್ತಾಪ ಮಾಡಿರುವುದಿಲ್ಲ. ಆದರೆ ಒಂದು ದಿನ ಇಬ್ಬರು ಮನೆಯಲ್ಲಿ ಪ್ರಣಯಾದಲ್ಲಿ ಇರುವಾಗ ಗಂಡ ದಿಲೇಶ್ವರ್ ದರ್ವೆ ಕೈಗೆ ರೆಡ್ ಆ್ಯಂಡ್ ಆಗಿ ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಶ್ರೀನಿವಾಸ್ ಪ್ರಸಾದ್ ನಿಧನ.. ಕೊನೆ ಕ್ಷಣದಲ್ಲಿ ಏನೆಲ್ಲ ಆಯಿತು -ಅಳಿಯ ಹರ್ಷವರ್ಧನ್ ಭಾವುಕ
बिहार, में सास-दामाद ने गांव वालों के सामने रचाई शादी, दामाद और सास का कई सालों से चल रहा था अफेयर, अब यही देखना रह गया था #AbkiBaar400Paar#Election2024#GTvsRCB#TakeItLightly#viralvideo#LokSabhaPolls#TejRanFam#INFOSYSpic.twitter.com/YGKl7P8pQj
— Priya halchal (@HalchalPriya) April 28, 2024
ಇದನ್ನೂ ಓದಿ: ನಗುನಗುತಾ ಕಳುಹಿಸಿಕೊಡಿ ಎಂದಿದ್ರಂತೆ ಶ್ರೀನಿವಾಸ್ ಪ್ರಸಾದ್.. ಅಪ್ಪನ ಕುರಿತು ಹಿರಿಯ ಮಗಳು ಭಾವುಕ ನುಡಿಗಳು
ಇದರಿಂದ ಕುಟುಂಬದಲ್ಲಿ ಸಂಘರ್ಷ ಏರ್ಪಟ್ಟು ಗ್ರಾಮ ಪಂಚಾಯತಿವರೆಗೆ ಸುದ್ದಿ ಹೋಗುತ್ತದೆ. ಆಗ ಅಳಿಯನು ಅತ್ತೆ ಮೇಲಿರುವ ಪ್ರೀತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಇನ್ನು ಏನು ಮಾಡೋಕೆ ಆಗುವುದಿಲ್ಲ ಎಂದು ಗಂಡನ ಹಾಗೂ ಗ್ರಾಮದ ಹಿರಿಯರ ಒಪ್ಪಿಗೆ ಪಡೆದುಕೊಂಡು ಇಬ್ಬರು ಎಲ್ಲರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಅಲ್ಲದೇ ಆಕೆಯ ಪತಿ ಕಾನೂನು ಪ್ರಕಾರ ಮದುವೆಯನ್ನು ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ