newsfirstkannada.com

ಗದ್ದೆಗಿಳಿದ ನಟಿ ಹೇಮಾ ಮಾಲಿನಿ.. ಪ್ರಚಾರದ ನಡುವೆ ತೆನೆ ಕೊಯ್ದು ಭರ್ಜರಿ ಫೋಟೋಶೂಟ್​ ಮಾಡಿದ BJP ಅಭ್ಯರ್ಥಿ

Share :

Published April 12, 2024 at 1:59pm

  ಕೈಯಲ್ಲಿ ಕತ್ತಿ ಹಿಡಿದು ಗದ್ದೆಗಿಳಿದ ನಟಿ ಹೇಮಾ ಮಾಲಿನಿ

  ಗೋಧಿ ತೆನೆ ಕಟಾವು ಮಾಡಿ ಫೋಟೋಗೆ ಪೋಸು ಕೊಟ್ಟ ಬಿಜೆಪಿ ಅಭ್ಯರ್ಥಿ

  ಲೋಕಸಭಾ ಚುನಾವಣೆಗೆ ಭರ್ಜರಿ ಮತ ಪ್ರಚಾರ ಮಾಡುತ್ತಿರುವ ಮಥುರಾದ ಅಭ್ಯರ್ಥಿ

ಲೋಕಸಭಾ ಚುನಾವಣೆಗೆ ಭರ್ಜರಿ ಮತ ಪ್ರಚಾರ ನಡೆಯುತ್ತಿದೆ. ಈಗಾಗಲೇ ಕೆಲವು ಅಭ್ಯರ್ಥಿಗಳು ಬಿರುಸಿನ ಮತ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರದ ವೇಳೆ ಜನರನ್ನು ಸೆಳೆಯಲು ನಾನಾ ಸರ್ಕಸ್​ ಮಾಡುತ್ತಿದ್ದಾರೆ. ಅದರಂತೆಯೇ ಮಥುರಾದ ಬಿಜೆಬಿ ಅಭ್ಯರ್ಥಿ ಮತ್ತು ನಟಿ ಹೇಮಾ ಮಾಲಿನಿ ಗದ್ದೆಗೆ ಇಳಿದಿದ್ದು, ಭರ್ಜರಿ ಫೋಟೋಶೂಟ್​ ಮಾಡಿಸಿದ್ದಾರೆ.

ಹೇಮಾ ಮಾಲಿನಿ ಗೋಧಿ ಬೆಳೆದಿದ್ದ ಗದ್ದೆಗೆ ಇಳಿದಿದ್ದಾರೆ. ಈ ವೇಳೆ ಕೈಯಲ್ಲಿ ಕತ್ತಿ ಹಿಡಿದು ಗೋಧಿ ಬೆಳೆ ಕಟಾವು ಮಾಡಿದ್ದಾರೆ. ಜೊತೆಗೆ ವಿವಿಧ ಭಂಗಿಯಲ್ಲಿ ಪೋಸು ನೀಡಿದ್ದಾರೆ. ಸದ್ಯ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ.

‘‘10 ವರ್ಷಗಳಿಂದ ನಾನು ನಿಯಮಿತವಾಗಿ ಭೇಟಿಯಾಗುತ್ತಿರುವ ರೈತರೊಂದಿಗೆ ಸಂವಾದ ನಡೆಸಲು ಇಂದು ನಾನು ಜಮೀನಿಗೆ ಹೋಗಿದ್ದೆ. ಅವರು ನನಗೆ ಪ್ರೀತಿ ತೋರಿಸಿದರು ಮತ್ತು ನಾನು ಅವರೊಂದಿಗೆ ಪೋಸ್ ನೀಡಬೇಕೆಂದು ಒತ್ತಾಯಿಸಿದರು’’ ಎಂದು ಹೇಮಾ ಮಾಲಿನಿ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: IPL 2024: ಮುಂಬೈ ಪಂದ್ಯ ನೋಡೋ ಆಸೆ.. ಟಿಕೆಟ್​​ ಖರೀದಿಸಲು ಹೋಗಿ 1.52 ಲಕ್ಷ ರೂಪಾಯಿ ಕಳೆದುಕೊಂಡ ವಿದ್ಯಾರ್ಥಿ

ಮಥುರಾದಲ್ಲಿ ಶೇ35 ಪ್ರತಿಶತದಷ್ಟು ಜಾಟ್​ ಸಮುದಾಯವಿದೆ. 2019ರಲ್ಲಿ ಮಧುರಾದಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿತ್ತು. ಇದೀಗ ಮತ್ತೆ ಜಯಗಳಿಸಲು ಹೇಮಾ ಮಾಲಿನಿಯವರನ್ನು ಬಿಜೆಪಿ ಕಣಕ್ಕಿಳಿಸಿದೆ. ಸದ್ಯ ಆರ್​ಎಲ್​ಡಿ ಮುಖ್ಯಸ್ಥ ಜಯಂತ್​ ಚೌಧರಿ ವಿರುದ್ಧ ನಟಿ ಭರ್ಜರಿ ಮತ ಪ್ರಚಾರ ಮಾಡುತ್ತಿದ್ದಾರೆ. 2014ರಲ್ಲಿ ಹೇಮಾ ಮಾಲಿನಿ ಜಯಂತ್​ ವಿರುದ್ಧ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಯ ಸಾಧಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗದ್ದೆಗಿಳಿದ ನಟಿ ಹೇಮಾ ಮಾಲಿನಿ.. ಪ್ರಚಾರದ ನಡುವೆ ತೆನೆ ಕೊಯ್ದು ಭರ್ಜರಿ ಫೋಟೋಶೂಟ್​ ಮಾಡಿದ BJP ಅಭ್ಯರ್ಥಿ

https://newsfirstlive.com/wp-content/uploads/2024/04/Hema-Malini.jpg

Load More