newsfirstkannada.com

IPL 2024: ಮುಂಬೈ ಪಂದ್ಯ ನೋಡೋ ಆಸೆ.. ಟಿಕೆಟ್​​ ಖರೀದಿಸಲು ಹೋಗಿ 1.52 ಲಕ್ಷ ರೂಪಾಯಿ ಕಳೆದುಕೊಂಡ ವಿದ್ಯಾರ್ಥಿ

Share :

Published April 12, 2024 at 1:27pm

    ಟಿಕೆಟ್​ ಖರೀದಿಸಲು ಹೋಗಿ ಮೋಸ ಹೋದ 19 ವರ್ಷದ ವಿದ್ಯಾರ್ಥಿ

    ಬರೋಬ್ಬರಿ 1.52 ಲಕ್ಷ ರೂಪಾಯಿ ಕಳೆದುಕೊಂಡ ಮುಂಬೈ ಫ್ಯಾನ್ಸ್​

    ಟಿಕೆಟ್​ಗಾಗಿ ಆನ್​ಲೈನ್ ಮೊರೆ ಹೋಗೋ ಮುಂಚೆ ಈ ಸ್ಟೋರಿ ಓದಿ​

ಐಪಿಎಲ್​ ಪಂದ್ಯ ವೀಕ್ಷಿಸಲು ಟಿಕೆಟ್​ ನೀಡುವ ನೆಪದಲ್ಲಿ 19 ವರ್ಷದ ವಿದ್ಯಾರ್ಥಿ ಮೋಸ ಹೋದ ಘಟನೆ ಮುಂಬೈನಲ್ಲಿ ನಡೆದಿದೆ. ಬರೋಬ್ಬರಿ 1.52 ಲಕ್ಷ ರೂಪಾಯಿಯನ್ನು ವಿದ್ಯಾರ್ಥಿ ಕಳೆದುಕೊಂಡಿದ್ದಾನೆ.

ಮುಂಬೈ ಇಂಡಿಯನ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​​ ಪಂದ್ಯ ವೀಕ್ಷಿಸಲು ಕ್ರಿತ್​ ಗುಪ್ತಾ ಎಂಬ ವಿದ್ಯಾರ್ಥಿ ಟಿಕೆಟ್​ ಕಾಯ್ದಿರಿಸಲು ಮುಂದಾಗುತ್ತಾನೆ. ಅದಕ್ಕಾಗಿ ಆನ್​ಲೈನ್​ ಮೊರೆ ಹೋಗುತ್ತಾನೆ. ಇನ್​​ಸ್ಟಾಗ್ರಾಂ ಲಿಂಕ್​​ ಮೂಲಕ ಟಿಕೆಟ್​​ ಪಡೆಯಲು ನಿರ್ಧರಿಸುತ್ತಾನೆ.

ಪ್ರಾರಂಭದಲ್ಲಿ ಕ್ರಿತ್​ ಗುಪ್ತಾ ಆನ್​ಲೈನ್​ ಲಿಂಕ್​ ಮೂಲಕ ಸಂದೇಶ ಕಳುಹಿಸುತ್ತಾನೆ. ಬಳಿ ಟಿಕೆಟ್​ ಲಭ್ಯತೆಯ ಬಗ್ಗೆ ವಿಚಾರಿಸುತ್ತಾನೆ. ಈ ವೇಳೆ ವಂಚಕ ಆತನನ್ನು ಸಂಪರ್ಕಿಸಿ ಟೆಕೆಟ್​ ನೀಡುವುದಾಗಿ ಭರವಸೆ ನೀಡುತ್ತಾನೆ. ವಂಚಕನ ಭರವಸೆಯನ್ನು ನಂಬಿ ಕ್ರಿತ್​ ಗುಪ್ತಾ ಆತ ನೀಡಿದ ಕ್ಯೂಆರ್​ ಕೋಡ್​​ ಮೂಲಕ ಹಣ ಪಾವತಿಸಲು ಮುಂದಾಗುತ್ತಾನೆ. ಅಂದಹಾಗೆಯೇ ವಿದ್ಯಾರ್ಥಿ ಗೂಗಲ್ ಪೇ ಮೂಲಕ ಎಸ್​ಬಿಐ ಖಾತೆಯಿಂದ ಸುಮಾರು 22 ಬಾರಿ ಟಿಕೆಟ್​ಗಾಗಿ ಹಣ ಪಾವತಿಸಿದ್ದಾನೆ. ಒಟ್ಟು 1.52 ಲಕ್ಷ ರೂಪಾಯಿಯನ್ನು ಕಳುಹಿಸಿದ್ದಾನೆ. ಏಪ್ರಿಲ್​ 14ರಂದು ಈ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ ಜೆರ್ಸಿ 13 ವರ್ಷಗಳಾದ್ರೂ ವಾಶ್ ಮಾಡಿಯೇ ಇಲ್ಲ.. ಯಾಕೆ ಗೊತ್ತಾ?

ಬಳಿಕ ವಂಚಕನ ಮೊಬೈಲ್​ ಸಂಖ್ಯೆಯ ಮೂಲಕ ಆತನನ್ನು ಸಂಪರ್ಕಿಸಲು ಮುಂದಾದಾಗ ಸ್ವಿಚ್​ ಆಫರ್​ ಮಾಡಿದ್ದಾನೆ. ಬಳಿಕ ಕ್ರಿತ್​ ಗುಪ್ತಾನಿಗೆ ವಂಚನೆಗೆ ಒಳಗಾಗಿದ್ದೇನೆ ಎಂಬ ಅರಿವಾಗಿದೆ. ಕೊನೆಗೆ ಬೊರಿವಲಿ ಪೊಲೀಸ್​​ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ದೂರಿನ ಅನ್ವಯ ಸೆಕ್ಷನ್​ 34, 420 ಅಡಿಯಲ್ಲಿ ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಸ್​ ದಾಖಲಾಗಿದೆ. ಪೊಲೀಸರು ವಂಚನೆಗಾರರಿಗೆ ಬಲೆ ಬೀಸಿದ್ದು, ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IPL 2024: ಮುಂಬೈ ಪಂದ್ಯ ನೋಡೋ ಆಸೆ.. ಟಿಕೆಟ್​​ ಖರೀದಿಸಲು ಹೋಗಿ 1.52 ಲಕ್ಷ ರೂಪಾಯಿ ಕಳೆದುಕೊಂಡ ವಿದ್ಯಾರ್ಥಿ

https://newsfirstlive.com/wp-content/uploads/2024/04/IPL-MI.jpg

Load More