newsfirstkannada.com

VIDEO: ‘ಡಿ.ಕೆ ಶಿವಕುಮಾರ್ ಸಿಎಂ ಆಗಲಿ’- ಹಾಡಿ ಹೊಗಳಿದ BJP ನಾಯಕ ಅಶ್ವತ್ಥ್‌ ನಾರಾಯಣ

Share :

Published January 16, 2024 at 1:27pm

Update January 16, 2024 at 1:28pm

  ಡಿಕೆಶಿ ಸಿಎಂ ಆಗಲಿ ಎಂದು ಹಾರೈಸಿದ ಮಾಜಿ ಡಿಸಿಎಂ ಅಶ್ವತ್ಥ್

  ಇನ್ನೂ ಎತ್ತರಕ್ಕೆ ಹೋಗಲಿ ಹಾಗೆಯೇ ಸಿಎಂ ಕೂಡ ಆಗಲಿ

  ಚಪ್ಪಾಳೆ ಹೊಡೆದು ಫುಲ್ ಸ್ಮೈಲ್ ಕೊಟ್ಟ ಸಚಿವ ಜಮೀರ್ ಅಹ್ಮದ್

ಬೆಂಗಳೂರು: ರಾಜಕಾರಣದಲ್ಲಿ ಯಾರು ಮಿತ್ರರೂ ಅಲ್ಲ. ಯಾರು ಶತ್ರುಗಳೂ ಅಲ್ಲ ಅನ್ನೋ ಮಾತು ಸಾರ್ವಕಾಲಿಕ ಸತ್ಯ. ಈ ಮಾತು ಡಿಸಿಎಂ ಡಿ.ಕೆ ಶಿವಕುಮಾರ್, ಮಾಜಿ ಸಚಿವ ಅಶ್ವತ್ಥ್ ನಾರಾಯಣ ಅವರ ರಾಜಕೀಯ ನಡೆಯಲ್ಲೂ ನಿಜವಾಗಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಶ್ವತ್ಥ್‌ ನಾರಾಯಣ ಅವರು ಡಿ.ಕೆ ಶಿವಕುಮಾರ್ ಸಿಎಂ ಆಗಲಿ ಎಂದು ಹಾರೈಸಿದ್ದಾರೆ.

ಶೇಷಾದ್ರಿಪುರಂನ ಶಿರೂರು ಪಾರ್ಕ್‌ನಲ್ಲಿ ಮಲ್ಲೇಶ್ವರಂ, ಚಾಮರಾಜಪೇಟೆ, ಗಾಂಧಿನಗರ ಕ್ಷೇತ್ರದ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಅಶ್ವತ್ಥ್‌ ನಾರಾಯಣ ಅವರು, ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ. ಇನ್ನು ಉನ್ನತ ಮಟ್ಟದ ಸ್ಥಾನಕ್ಕೆ ಹೋಗಲಿ. ಇನ್ನೂ ಎತ್ತರಕ್ಕೆ ಹೋಗಲಿ ಹಾಗೆಯೇ ಸಿಎಂ ಕೂಡ ಆಗಲಿ ಎಂದು ಹಾರೈಸುತ್ತೇನೆ ಎಂದರು.

ಇದನ್ನೂ ಓದಿ: ಕಲ್ಲು ಒಡೆಯೋರು ನೀವು, ಗುಡಿ ಕಟ್ಟೋರು ನೀವು.. ಕೊನೆಗೆ ದೇಗುಲಕ್ಕೆ ಪ್ರವೇಶ ಇಲ್ಲ -ಸಿದ್ದರಾಮಯ್ಯ ವಾಗ್ದಾಳಿ

ಅಶ್ವತ್ಥ್‌ ನಾರಾಯಣ ಅವರ ಈ ಮಾತುಗಳು ಜನಸ್ಪಂದನಾ ಕಾರ್ಯಕ್ರಮದಲ್ಲಿದ್ದ ಕಾಂಗ್ರೆಸ್‌ ನಾಯಕರು ಖುಷಿಯಾಗುವಂತೆ ಮಾಡಿತ್ತು. ವೇದಿಕೆ ಮೇಲೆ ಇದ್ದಂತಹ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮುಗುಳುನಕ್ಕು ಸುಮ್ಮನಾದ್ರೆ ಪಕ್ಕದಲ್ಲೇ ಇದ್ದ ಸಚಿವ ಜಮೀರ್ ಅಹ್ಮದ್ ಅವರು ಚಪ್ಪಾಳೆ ಹೊಡೆದು ಫುಲ್ ಸ್ಮೈಲ್ ಕೊಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಡಿ.ಕೆ ಶಿವಕುಮಾರ್ ಸಿಎಂ ಆಗಲಿ’- ಹಾಡಿ ಹೊಗಳಿದ BJP ನಾಯಕ ಅಶ್ವತ್ಥ್‌ ನಾರಾಯಣ

https://newsfirstlive.com/wp-content/uploads/2024/01/Dkshivakumar-Ashwath-Narayana.jpg

Load More