newsfirstkannada.com

ಪೆನ್​ಡ್ರೈವ್​ ಪ್ರಕರಣದ ಬಗ್ಗೆ ಬಿಜೆಪಿ ನಾಯಕನ ಅನುಮಾನ; SIT ವಿರುದ್ಧ ಕೇಸ್‌ ಹಾಕ್ತೀನಿ ಎಂದ ದೇವರಾಜೇಗೌಡ

Share :

Published May 9, 2024 at 7:15am

    ಕಾರ್ ಡ್ರೈವರ್‌ನ ಬಂಧಿಸದೇ SIT ಮೀನಾಮೇಷ ಎಣಿಸುತ್ತಿದೆ ಎಂದು ಆರೋಪ

    ಪೆನ್‌ಡ್ರೈವ್ ಹಂಚಿದವರ ವಿರುದ್ಧವೂ ಕ್ರಮ ತೆಗೊಳ್ಳಿ ಎಂದ ಆರಗ ಜ್ಞಾನೇಂದ್ರ

    ಜೆಡಿಎಸ್‌ವರಿಗೆ ಮಾನಸಿಕ ರೋಗ ಎಂದ ಪ್ರಿಯಾಂಕ್‌ ಖರ್ಗೆ

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ನಲ್ಲಿ ರಾಜಕೀಯ ಜಟಾಪಟಿ ಜೋರಾಗಿದೆ. ಅಶ್ಲೀಲ ವಿಡಿಯೋ ಕೇಸ್‌ ತನಿಖೆಯ ಬಗ್ಗೆಯೇ ದೋಸ್ತಿಗಳು ಅಪಸ್ವರ ಎತ್ತಿದ್ದಾರೆ. ಎಸ್‌ಐಟಿ ತನಿಖೆ ಸರಿಯಾಗಿ ನಡೀತಿಲ್ಲ ಅಂತ ಆರೋಪಿಸಿದ್ದಾರೆ. ಇತ್ತ ಬಿಜೆಪಿಗರ ಆರೋಪಕ್ಕೆ ಕಾಂಗ್ರೆಸ್ ನಾಯಕರು ಕೌಂಟರ್ ಕೊಟ್ಟಿದ್ದಾರೆ. ಬಿಜೆಪಿ-ಜೆಡಿಎಸ್ ವಿರುದ್ಧ ಮಾತಿನ ಮಳೆ ಸುರಿಸಿದ್ದಾರೆ.

ಹಾಸನ ಪೆನ್​ಡ್ರೈವ್​ ಪ್ರಕರಣ ಸದ್ಯ ರಾಜಕೀಯ ಪಡಸಾಲೆಯಲ್ಲಿ ಏಟು-ಎದಿರೇಟಿಗೆ ವೇದಿಕೆಯಾಗಿದೆ. ಒಂದ್ಕಡೆ ಆರೋಪ, ಪ್ರತ್ಯಾರೋಪ. ಮತ್ತೊಂದ್ಕಡೆ ಅಬ್ಬರ, ಆಕ್ರೋಶ, ಒಂದು ಪ್ರಕರಣ ಹತ್ತು ಅನುಮಾನ, ಹಲವರ ಮಧ್ಯೆ ವಾಕ್ ಸಮರ ಮತ್ತಷ್ಟು ತಾರಕಕ್ಕೇರಿದೆ.

ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ

ಎಸ್‌ಐಟಿ ಅಂದ್ರೆ ಸಿದ್ದು, ಡಿಕೆಶಿ ತಂಡ

ಎಸ್‌ಐಟಿ ಅಂದ್ರೆ ಸಿದ್ದರಾಮಯ್ಯ, ಡಿಕೆಶಿ ತನಿಖಾ ತಂಡ ಅಂತ ದೋಸ್ತಿಗಳು ಗುಡುಗುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಮಾಜಿ ಕಾರ್ ಡ್ರೈವರ್‌ನ ಬಂಧಿಸದೇ ಎಸ್‌ಐಟಿ ಮೀನಾಮೇಷ ಎಣಿಸುತ್ತಿದೆ ಅಂತ ಆರೋಪಿಸ್ತಿದ್ದಾರೆ. ಅಲ್ಲದೇ ನನ್ನ ವಿಚಾರಣೆ ಮಾಡಿ ಕೆಲ ಅಂಶಗಳ ಡಿಲೀಟ್ ಮಾಡಲು ಹೇಳಿದ್ದಾರೆ ಅಂತ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಆರೋಪಿಸಿದ್ದಾರೆ. ಹೀಗಾಗಿ ಎಸ್ಐಟಿ ತನಿಖಾ ತಂಡದ ವಿರುದ್ದ ಕ್ರಿಮಿನಲ್ ಕೇಸ್ ಹಾಕ್ತೀವಿ ಅಂತ ಗುಡುಗಿದ್ದಾರೆ. ಇತ್ತ ಪೆನ್‌ಡ್ರೈವ್ ಹಂಚಿದವರ ವಿರುದ್ಧವೂ ಕ್ರಮಕ್ಕೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಇಬ್ಬರು ರೌಡಿಶೀಟರ್​ಗಳ ಬರ್ಬರ ಹತ್ಯೆ.. ನಡು ಬೀದಿಯಲ್ಲಿ ಹೆಣವಾದ ಸೇಬು, ಗೌಸು

‘25 ಸಾವಿರ ಪೆನ್‌ಡ್ರೈವ್ ಹಂಚಿದ್ರೆ ನೀವ್ ಏನ್ ಮಾಡ್ತಿದ್ರಿ’

ಮಹಾನಾಯಕ ಹಾಸನದಲ್ಲಿ ಪೆನ್‌ಡ್ರೈವ್‌ ಹಂಚಿದ್ದಾರೆ ಅಂತ ಮಾಜಿ ಸಿಎಂ ಹೆಚ್‌ಡಿಕೆ ಆರೋಪಿಸಿದ್ರು. ಇದಕ್ಕೆ ಟಕ್ಕರ್ ಕೊಟ್ಟಿರೋ ಸಚಿವ ಪ್ರಿಯಾಂಕ್ ಖರ್ಗೆ 25 ಸಾವಿರ ಪೆನ್‌ಡ್ರೈವ್ ಹಂಚೋವರೆಗೂ ನೀವ್ ಏನ್ ಮಾಡ್ತಿದ್ರಿ ಅಂತ ಜೆಡಿಎಸ್‌ನ ಪ್ರಶ್ನಿಸಿದ್ದಾರೆ. ಇತ್ತ ಅವರವರ ನಡುವಿನ ಜಗಳದಿಂದ ಈ ಪ್ರಕರಣ ಹೊರ ಬಂದಿದೆ ಅಂತ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಇನ್ನೂ ಹಾಸನ ಪೆನ್ ಡ್ರೈವ್ ವಿಚಾರ ಮುಂದಿಟ್ಟುಕೊಂಡು ಡಿಕೆಗೆ ರಣವ್ಯೂಹ ರಚಿಸಲು ಮಂಡ್ಯದಲ್ಲಿ ಜೆಡಿಎಸ್ ನಾಯಕರು ಸಜ್ಜಾಗಿದ್ದಾರೆ. ಕೈ ವಿರುದ್ಧ ಪ್ರತಿಭಟನೆ ಮಾಡಿ ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದ್ದಾರೆ. ಅದೇನೆ ಇರ್ಲಿ, ಲೋಕಸಭೆ ಕದನದ ಕಾವು ಮುಗಿದರು ಪೆನ್‌ಡ್ರೈವ್ ಪಾಲಿಟಿಕ್ಸ್ ಬಿಸಿ ಮಾತ್ರ ಆರದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೆನ್​ಡ್ರೈವ್​ ಪ್ರಕರಣದ ಬಗ್ಗೆ ಬಿಜೆಪಿ ನಾಯಕನ ಅನುಮಾನ; SIT ವಿರುದ್ಧ ಕೇಸ್‌ ಹಾಕ್ತೀನಿ ಎಂದ ದೇವರಾಜೇಗೌಡ

https://newsfirstlive.com/wp-content/uploads/2024/05/devarajegowda.jpg

Load More