newsfirstkannada.com

‘ಡ್ರೈವರ್ ಪೆನ್‌ಡ್ರೈವ್‌ ಕೊಟ್ಟಿದ್ದು ಸತ್ಯ’- ಹಾಸನ ವಿಡಿಯೋ ಲೀಕ್‌ನ ಅಸಲಿ ರಹಸ್ಯ ಬಿಚ್ಚಿಟ್ಟ ದೇವರಾಜೇಗೌಡ

Share :

Published April 30, 2024 at 2:37pm

  ಕಾಂಗ್ರೆಸ್‌ನಿಂದ ನ್ಯಾಯ ಸಿಕ್ಕಿಲ್ಲ ಅಂತ ಕಾರ್ತಿಕ್ ಮೊದಲೇ ಹೇಳಿದ್ದಾನೆ

  ಪ್ರಜ್ವಲ್ ಮೊಬೈಲ್‌ನಲ್ಲಿ ಇದ್ದ ವಿಡಿಯೋಗಳು ಡ್ರೈವರ್‌ಗೆ ಸಿಕ್ಕಿದ್ದು ಹೇಗೆ?

  ‘ಕಾಂಗ್ರೆಸ್ ತೋಡಿರುವ ಗುಂಡಿಯಲ್ಲಿ ಅವರೇ ಬೀಳುವುದು ಸತ್ಯ’

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಇವತ್ತು ಹೊಸ ರಾಜಕೀಯ ತಿರುವು ಸಿಕ್ಕಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ವಿಡಿಯೋ ಬಿಡುಗಡೆ ಮಾಡಿದ್ದು, ಸ್ಫೋಟಕ ಮಾಹಿತಿ ಬಯಲು ಮಾಡಿದ್ದಾರೆ. ಇದರ ಜೊತೆಗೆ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಮಹಾನಾಯಕ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮೇಲೆ ಆರೋಪ ಮಾಡಿದ್ದಾರೆ.

ಪ್ರಜ್ವಲ್ ರೇವಣ್ಣ ಅವರ ಬಳಿ 15 ವರ್ಷ ಕಾರು ಚಾಲಕ ಆಗಿದ್ದ ಕಾರ್ತಿಕ್ ಇಂದು SIT ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ತೆರಳುವ ಮುನ್ನ ವಿಡಿಯೋ ಬಿಡುಗಡೆ ಮಾಡಿರುವ ಕಾರ್ತಿಕ್, ನಾನು ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಪಟ್ಟ ವಿಡಿಯೋವನ್ನು ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ಕೊಟ್ಟಿದ್ದೇನೆ. ಕಾಂಗ್ರೆಸ್ ನಾಯಕರಿಗೆ ಯಾವುದೇ ಪೆನ್‌ಡ್ರೈವ್ ಕೊಟ್ಟಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಹಾಸನ ಪೆನ್‌ಡ್ರೈವ್ ಕೇಸ್‌ಗೆ ಬಿಗ್ ಟ್ವಿಸ್ಟ್; ಅಶ್ಲೀಲ ವಿಡಿಯೋ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಡ್ರೈವರ್‌ ಕಾರ್ತಿಕ್

ಕಾರು ಚಾಲಕ ಕಾರ್ತಿಕ್ ನೀಡಿದ ವಿಡಿಯೋ ಸ್ಟೇಟ್‌ಮೆಂಟ್ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಹಾಸನ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ. ಡ್ರೈವರ್ ಕಾರ್ತಿಕ್ ಕಾಂಗ್ರೆಸ್‌ನವರ ಹತ್ತಿರ ಹೋಗಿದ್ದೇ ನನಗೆ ನ್ಯಾಯ ಸಿಗಲಿಲ್ಲ ಅಂತ ಹೇಳಿಕೊಂಡಿದ್ದಾನೆ. ನನಗೆ ಪೆನ್‌ಡ್ರೈವ್ ಕೊಟ್ಟಿದ್ದು ಸತ್ಯ. ನಾನು ವಕೀಲನಾಗಿ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ಮಾಡಬೇಕು. ನನ್ನ ವೃತ್ತಿ ಧರ್ಮ ಪಾಲಿಸಿದ್ದೇನೆ ಎಂದಿದ್ದಾರೆ.

ಅಸಲಿಗೆ ಕಾರ್ತಿಕ್ ನನಗೆ ಪೆನ್‌ಡ್ರೈವ್ ಕೊಟ್ಟಿಲ್ಲ. ನಾನು ಅವನ ಬಳಿ ಇದ್ದ ಪೆನ್‌ಡ್ರೈವ್‌ನಿಂದ ಕಾಪಿ ಮಾಡಿಕೊಂಡಿದ್ದೇನೆ. ವಿಡಿಯೋಗಳಿರುವ ಪೆನ್‌ಡ್ರೈವ್‌ ಅನ್ನು ನಾನು ಯಾರಿಗೂ ಕೊಡಲ್ಲ. ಕೋರ್ಟ್‌ನಲ್ಲಿ ಜಡ್ಜ್ ಮುಂದೆ ಕೊಡ್ತೀನಿ ಅಂತಾ ಅಂದಿದ್ದೆ. ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ಇದ್ದ ವಿಡಿಯೋಗಳು ಕಾರ್ತಿಕ್‌ಗೆ ಹೇಗೆ ಸಿಕ್ಕಿದೆ. ಆತನಿಗೆ ಪೆನ್ ಡ್ರೈವ್ ಎಲ್ಲಿಂದ ಬಂತು ಅನ್ನೋದು ಈಗ ಮುಖ್ಯವಾದ ಪ್ರಶ್ನೆ. ನಾನು ವಿಡಿಯೋ ಲೀಕ್ ಮಾಡಿಲ್ಲ. ಬೇರೆಯವರಿಗೆ ನೋಡೋಕು ಕೊಟ್ಟಿಲ್ಲ ನಾನು. ನನ್ನ ಮನೆಯಲ್ಲಿ ಸಿಸಿಟಿವಿ ರೆಕಾರ್ಡ್ ಆಗಿದೆ. ಕಾರ್ತಿಕ್ ಯಾರ ಒತ್ತಡಕ್ಕೆ ಮಣಿದು ಹೇಳಿದ್ದೇನೆ. ಕಾಂಗ್ರೆಸ್ ಸರ್ಕಾರ ನೀವು ತೋಡಿರುವ ಗುಂಡಿಯಲ್ಲಿ ಕೆಲವೇ ದಿನದಲ್ಲಿ ನೀವು ಬೀಳುತ್ತೀರಾ ಇದು ಸತ್ಯ ಎಂದು ದೇವರಾಜೇಗೌಡರು ಗುಡುಗಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಪೆನ್‌ಡ್ರೈವ್ ಹಂಚಿದ್ಯಾರು? ಸ್ಫೋಟಕ ಟ್ವಿಸ್ಟ್ ಕೊಟ್ಟ ಚಾಲಕ ಕಾರ್ತಿಕ್‌; ಬಿಜೆಪಿ ನಾಯಕ ಹೇಳಿದ್ದೇನು?

ಹಾಸನದ ವಿಡಿಯೋವನ್ನು ಬಿಜೆಪಿಯವರು ಯಾಕೆ ಲೀಕ್ ಮಾಡ್ತಾರೆ. ಜೆಡಿಎಸ್‌ನವರು ಅವರದ್ದು ಅವರೇ ಲೀಕ್ ಮಾಡ್ತಾರಾ. ಇದರಿಂದ ಕಾಂಗ್ರೆಸ್‌ನವರಿಗೆ ಲಾಭ‌ವಿದೆ. ಕಾರ್ತಿಕ್ ಮೊದಲೇ ಹೇಳಿದ್ದಾನೆ ಕಾಂಗ್ರೆಸ್‌ನಿಂದ ನ್ಯಾಯ ಸಿಕ್ಕಿಲ್ಲ ಎಂದು. ಕಾರ್ತಿಕ್ ವಿಡಿಯೋದಲ್ಲಿ ಹೇಳಿರೋದು ಎಲ್ಲಾ ಸತ್ಯ. ಆದ್ರೆ ಕೊನೆಯಲ್ಲಿ ಪೆನ್ ಡ್ರೈವ್ ಬಿಟ್ಟಿದ್ದ ವಿಚಾರ ಸುಳ್ಳು. ಎಸ್ಐಟಿ ನನಗೆ ನೋಟಿಸ್ ಕೊಡಲಿ ಅಂತ ಕಾಯ್ತಾ ಇದ್ದೀನಿ. ನನ್ನತ್ರ ಕೆಲವು ದಾಖಲೆಗಳು ಇವೆ ಕೊಡ್ತೀನಿ. ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಲಿ. ಇಲ್ಲದೆ ಇದ್ರೆ ಹೈಕೋರ್ಟ್‌ನಲ್ಲಿ ರಿಟ್ ಹಾಕಿ ಸಿಬಿಐ ತನಿಖೆಗೆ ವಹಿಸಬೇಕು ಅಂತಾ ಕೋರುತ್ತೇನೆ ಎಂದು ದೇವರಾಜೇಗೌಡ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಡ್ರೈವರ್ ಪೆನ್‌ಡ್ರೈವ್‌ ಕೊಟ್ಟಿದ್ದು ಸತ್ಯ’- ಹಾಸನ ವಿಡಿಯೋ ಲೀಕ್‌ನ ಅಸಲಿ ರಹಸ್ಯ ಬಿಚ್ಚಿಟ್ಟ ದೇವರಾಜೇಗೌಡ

https://newsfirstlive.com/wp-content/uploads/2024/04/Hassan-Prajwal-Revanna-Bjp.jpg

Load More