newsfirstkannada.com

ಕತಾರ್‌ನಲ್ಲಿ ಮರಣ ದಂಡನೆ.. ಭಾರತೀಯರನ್ನ ಪಾರು ಮಾಡಿದ್ದು ಶಾರುಖ್‌ ಖಾನ್‌ ಅಂತೆ! ಏನಿದರ ಅಸಲಿಯತ್ತು?

Share :

Published February 13, 2024 at 9:25pm

    ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಮಾಜಿ ನಾವಿಕರು

    ಪ್ರಧಾನಿ ಮೋದಿ ನಟ ಶಾರುಖ್‌ ಖಾನ್‌ಗೆ ಮನವಿ ಮಾಡಿದ್ರಂತೆ?

    ಶಾರುಖ್‌ ಖಾನ್ ಮಧ್ಯಪ್ರವೇಶದಿಂದ 8 ಭಾರತೀಯರ ಬಿಡುಗಡೆ?

ಕತಾರ್‌ನಲ್ಲಿ ಭಾರತೀಯ ನೌಕಾಪಡೆಯ 8 ಮಂದಿ ಮಾಜಿ ನಾವಿಕರು ಮರಣದಂಡನೆಯ ಶಿಕ್ಷೆಗೆ ಗುರಿಯಾಗಿದ್ದರು. 18 ತಿಂಗಳ ರಾಜತಾಂತ್ರಿಕ ಹೋರಾಟದ ಬಳಿಕ 8 ಮಂದಿ ಮಾಜಿ ಯೋಧರು ಸಾವಿನ ದವಡೆಯಿಂದ ಪಾರಾಗಿದ್ದಾರೆ. 8 ಮಂದಿಯಲ್ಲಿ 7 ಮಂದಿ ಈಗಾಗಲೇ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ, ಇದು ಭಾರತೀಯ ರಾಜತಾಂತ್ರಿಕತೆಗೆ ಸಿಕ್ಕ ಅತಿ ದೊಡ್ಡ ಗೆಲುವು.

ಭಾರತೀಯರ ಬಿಡುಗಡೆ ಬಗ್ಗೆ ಎಲ್ಲರೂ ಹೆಮ್ಮೆ ಪಡುತ್ತಿರುವಾಗ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ. ಕತಾರ್‌ ಜೈಲಿನಿಂದ ಬಿಡುಗಡೆಯಾದ ಭಾರತೀಯರ ಬಗ್ಗೆ ಆ ಪೋಸ್ಟ್ ಸಖತ್ ಸದ್ದು ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್‌ಗೆ ರಿಪ್ಲೇ ಮಾಡಿರೋ ಸುಬ್ರಮಣಿಯನ್ ಸ್ವಾಮಿ, ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಮಾಜಿ ನೌಕಾಪಡೆಯ ಅಧಿಕಾರಿಗಳ ಬಿಡುಗಡೆಗೆ ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಸಂಸ್ಥೆ ವಿಫಲವಾಗಿತ್ತು. ಆಗ ಈ ವಿಷಯದಲ್ಲಿ ಮಾತುಕತೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್ ನಟ ಶಾರುಖ್‌ ಖಾನ್ ಅವರಿಗೆ ಮನವಿ ಮಾಡಿದ್ದರು. ಶಾರುಖ್‌ ಖಾನ್ ಅವರ ಮಧ್ಯಪ್ರವೇಶದಿಂದ ನೌಕಾಪಡೆಯ ಮಾಜಿ ಅಧಿಕಾರಿಗಳ ಬಿಡುಗಡೆಯಾಗಿದೆ. ಹೀಗಾಗಿ ಪ್ರಧಾನಿ ಮೋದಿ ಅವರು ಕತಾರ್‌ಗೆ ಹೋಗುವಾಗ ಶಾರುಖ್ ಖಾನ್ ಅವರನ್ನು ಕರೆದುಕೊಂಡು ಹೋಗಬೇಕು ಎಂದಿದ್ದಾರೆ.

ಇದನ್ನೂ ಓದಿ: Breaking News: ಭಾರತಕ್ಕೆ ದೊಡ್ಡ ಗೆಲುವು; ಕತಾರ್​​ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ 8 ಮಾಜಿ ನಾವಿಕರು ರಿಲೀಸ್

ಸುಬ್ರಮಣಿಯನ್ ಸ್ವಾಮಿ ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ವಿವಾದಕ್ಕೆ ಖುದ್ದು ಶಾರುಖ್ ಖಾನ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಕತಾರ್‌ ಜೈಲಿನಿಂದ ಬಿಡುಗಡೆಯಾದ ಭಾರತೀಯರಲ್ಲಿ ತನ್ನ ಪಾತ್ರವೇನೂ ಇಲ್ಲ. ಮಧ್ಯಸ್ಥಿಕೆ ವಹಿಸಿದ್ದೇನೆ ಅನ್ನೋದು ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ. ಶಾರುಖ್ ಖಾನ್ ಅವರ ಅಧಿಕೃತ ಕಚೇರಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕತಾರ್‌ನಲ್ಲಿ ಮರಣ ದಂಡನೆ.. ಭಾರತೀಯರನ್ನ ಪಾರು ಮಾಡಿದ್ದು ಶಾರುಖ್‌ ಖಾನ್‌ ಅಂತೆ! ಏನಿದರ ಅಸಲಿಯತ್ತು?

https://newsfirstlive.com/wp-content/uploads/2024/02/Sharukh-Khan.jpg

Load More