newsfirstkannada.com

×

‘ನನಗೆ ಮೊದಲೇ ಗೊತ್ತಿತ್ತು.. ಜೈಲಿಗೆ ಕಳಿಸಲು ಇಬ್ಬರಿಂದ ಜಂಟಿ ಆಪರೇಷನ್’- ಮುನಿರತ್ನ ವಿಡಿಯೋ ಬಿಡುಗಡೆ

Share :

Published September 14, 2024 at 7:13pm

    ತಮ್ಮ ಬಂಧನದ ವಿಷಯ ಮೊದಲೇ ಅರಿತಿದ್ದರಾ ಬಿಜೆಪಿ ಶಾಸಕ ಮುನಿರತ್ನ?

    ಇದು ಜಾಯಿಂಟ್ ಆಪರೇಷನ್ ಎಂದು ಹೇಳಿದ್ದೇಕೆ RR ನಗರ ಶಾಸಕ

    ವಿಡಿಯೋದಲ್ಲಿ ಮಾಜಿ ಸಚಿವರು ಬೆರಳು ಮಾಡಿದ್ದು ಯಾರತ್ತ ಗೊತ್ತಾ?

ಬೆಂಗಳೂರು: ಜಾತಿ ನಿಂದನೆ, ಜೀವ ಬೆದರಿಕೆ ಆರೋಪದಲ್ಲಿ ಆರ್.ಆರ್ ನಗರದ ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿದೆ. ಬಂಧನಕ್ಕೂ ಮೊದಲು ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ ಶಾಸಕ ಮುನಿರತ್ನ. ವಿಡಿಯೋದಲ್ಲಿ ಗುತ್ತಿಗಾದರ ಚೆಲುವರಾಜು ಬಗ್ಗೆ ಅನೇಕ ವಿಷಯಗಳನ್ನು ಹೇಳಿರುವ ಮುನಿರತ್ನ, ಇದು ನನ್ನ ವಿರುದ್ಧ ಡಿ.ಕೆ.ಸುರೇಶ್ ಹಾಗೂ ಕುಸುಮ ಹನುಮಂತರಾಯಪ್ಪ ಹೂಡಿರುವ ಸಂಚು ಎಂದು ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಶಾಸಕ ಮುನಿರತ್ನ ಬಂಧನ ಕೇಸ್‌ಗೆ ಹೊಸ ಟ್ವಿಸ್ಟ್.. ದೂರು ಕೊಟ್ಟ ಗುತ್ತಿಗೆದಾರ ಚೆಲುವರಾಜು ಏನಂದ್ರು?

15 ವರ್ಷಗಳಿಂದ ನನ್ನ ಮೇಲೆ ಯಾವುದೇ ಗುತ್ತಿಗೆದಾರ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ದೂರು ನೀಡಿಲ್ಲ. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ನನ್ನ ವಿರುದ್ಧ ಸಂಚು ರೂಪಿಸಲಾಗಿದೆ. ದೂರುದಾರ ವ್ಯಕ್ತಿ 7-8 ವರ್ಷಗಳಿಂದ ನಮ್ಮ ಜೊತೆ ಕೆಲಸ ಮಾಡುತ್ತಿದ್ದ. ಯಾವತ್ತೂ ತೊಂದರೆ ಕೊಡದವರು ಇವತ್ತು ಕೊಡುವ ಅವಕಾಶ ಇರುತ್ತಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: FIR ದಾಖಲಾಗ್ತಿದ್ದಂತೆ ಆಂಧ್ರಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕ ಮುನಿರತ್ನ.. ಅರೆಸ್ಟ್ ಆಗಿದ್ದು ಹೇಗೆ?

ನನಗೆ ಬಂದಿದ್ದ ದೂರಲ್ಲಿ ಪ್ರತಿ ತಿಂಗಳು ದೇವರಾಜ್ ಅರಸು ಟ್ರಕ್ ಟರ್ಮಿನಲ್​ನಲ್ಲಿ 15 ಲಕ್ಷ ರೂಪಾಯಿ ಅಕ್ರಮ ನಡೆಯುತ್ತಿದೆ ಎಂದು ಪತ್ರ ಬರೀತಿನಿ. ತನಿಖೆ ನಡೆಸಿ ಎಂದಾಗಿನಿಂದಲೂ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಲೇ ಇದೆ. ಲೋಕಸಭಾ ಫಲಿತಾಂಶದ ಬಳಿಕ ನನಗೆ ಕೆಟ್ಟ ದಿನಗಳು ಇವೆ ಅಂತ ನನಗೆ ಗೊತ್ತಿತ್ತು. ಏನಾದ್ರೂ ಮಾಡಿ ಮುನಿರತ್ನನನ್ನ ಜೈಲಿಗೆ ಕಳುಹಿಸಬೇಕು ಎಂದು ಶಪಥ ಮಾಡಿದ್ದರು. ಎಂಎಲ್​ಎ ಎಲೆಕ್ಷನ್​​ನಲ್ಲಿ ನಾನು ಗೆದ್ದಾಗಲೇ ನನಗೆ ಇದರ ಸೂಚನೆ ಸಿಕ್ಕಿತ್ತು. ವಿಧಾನಸಭೆ ಚುನಾವಣೆಯಲ್ಲೂ ಸೋತ ಆ ಮಹಿಳೆ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿ ಈ ಜಂಟಿ ಕಾರ್ಯಾಚರಣೆ ಮಾಡಿದ್ದಾರೆ. ಇದು ಜಾಯಿಂಟ್ ಆಪರೇಷನ್ ಎಂದು ಮುನಿರತ್ನ ತಮ್ಮ ವಿಡಿಯೋದಲ್ಲಿ ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ನನಗೆ ಮೊದಲೇ ಗೊತ್ತಿತ್ತು.. ಜೈಲಿಗೆ ಕಳಿಸಲು ಇಬ್ಬರಿಂದ ಜಂಟಿ ಆಪರೇಷನ್’- ಮುನಿರತ್ನ ವಿಡಿಯೋ ಬಿಡುಗಡೆ

https://newsfirstlive.com/wp-content/uploads/2023/10/KUSUMA_MUNIRATNA.jpg

Load More