newsfirstkannada.com

ಸಂಸದೆ ಶೋಭಾ ಕರಂದ್ಲಾಜೆ ಕಾರು ಚಾಲಕನ ನಿರ್ಲಕ್ಷ್ಯ; ಬೈಕ್ ಸವಾರ ದಾರುಣ ಸಾವು

Share :

Published April 8, 2024 at 2:17pm

Update April 8, 2024 at 2:19pm

  ಶೋಭಾ ಕರಂದ್ಲಾಜೆ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ದುರಂತ

  ಕಾರು ಚಾಲಕ ಏಕಾಏಕಿ ಡೋರ್ ತೆಗೆದ ಹಿನ್ನೆಲೆಯಲ್ಲಿ ಬೈಕ್ ಸವಾರ ಡಿಕ್ಕಿ

  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ

ಬೆಂಗಳೂರು: ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಯುವಕನೊಬ್ಬ ಸಾವನ್ನಪ್ಪಿರೋ ಆರೋಪ ಕೇಳಿ ಬಂದಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದೆ.

ಕೆ.ಆರ್. ಪುರಂ ಸಮೀಪದ‌ ದೇವಸಂದ್ರ ಬಳಿ ಚುನಾವಣಾ ಪ್ರಚಾರದ ವೇಳೆ ಈ ದುರಂತ ಸಂಭವಿಸಿದೆ. ಶೋಭಾ ಕರಂದ್ಲಾಜೆ ಅವರ ಕಾರು ಚಾಲಕ ಏಕಾಏಕಿ ಡೋರ್ ತೆಗೆದ ಹಿನ್ನೆಲೆಯಲ್ಲಿ ಬೈಕ್ ಸವಾರ ಬಿದ್ದಿದ್ದ. ಬೈಕ್ ಸವಾರ ಕೆಳಗೆ ಬಿದ್ದಾಗ ಬೈಕ್ ಸವಾರನ ಮೇಲೆ ಬಸ್ ಹರಿದು ಹೋಗಿದೆ. ಬೈಕ್ ಸವಾರ ಬರುವುದನ್ನ ಗಮನಿಸದೆ ಡೋರ್ ಓಪನ್ ಮಾಡಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ.

ಶೋಭಾ ಕರಂದ್ಲಾಜೆ ಕಾರಿಗೆ ಡಿಕ್ಕಿ ಹೊಡೆದ ದ್ವಿಚಕ್ರ ಸವಾರನನ್ನು 35 ವರ್ಷದ ಪ್ರಕಾಶ್‌ ಎಂದು ಗುರುತಿಸಲಾಗಿದೆ. ಪ್ರಕಾಶ್‌, ಟಿಸಿ ಪಾಳ್ಯ ನಿವಾಸಿಯಾಗಿದ್ದ. ಗಂಭೀರ ಗಾಯಗೊಂಡಿದ್ದ ಪ್ರಕಾಶ್ ಅನ್ನು ಕೆಆರ್ ಪುರಂ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಬೈಕ್ ಸವಾರ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎಷ್ಟು ಕೋಟಿಗೆ ಒಡತಿ; ಬಿಜೆಪಿ ಅಭ್ಯರ್ಥಿ ಆಸ್ತಿ ವಿವರ ಇಲ್ಲಿದೆ 

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ದೇವಸಂದ್ರ ವಿನಾಯಕ‌ ದೇವಸ್ಥಾನ ಬಳಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಕೆ.ಆರ್. ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂಸದೆ ಶೋಭಾ ಕರಂದ್ಲಾಜೆ ಕಾರು ಚಾಲಕನ ನಿರ್ಲಕ್ಷ್ಯ; ಬೈಕ್ ಸವಾರ ದಾರುಣ ಸಾವು

https://newsfirstlive.com/wp-content/uploads/2024/04/Shobha-Karandlaje-BJP-1.jpg

Load More