newsfirstkannada.com

ಕೋಟಿ ಕೋಟಿ ದುಡ್ಡು ಮಾಡಿದ್ದ PSI ಹಗರಣದ ಕಿಂಗ್ ಪಿನ್ ಮನೆಗೆ BJP ಸಂಸದರ ಭೇಟಿ; ಏನಿದು ಟ್ವಿಸ್ಟ್​​​?

Share :

Published April 17, 2024 at 8:43pm

  ಇಡೀ ರಾಜ್ಯದ ಯುವಕರ ಭವಿಷ್ಯವನ್ನೇ ಹಾಳು ಮಾಡಿದ್ದ ಕಿಂಗ್‌ಪಿನ್‌!

  ಆರ್‌.ಡಿ ಪಾಟೀಲ್ ಮನೆಯಲ್ಲಿ ಉಮೇಶ್ ಜಾಧವ್‌ಗೆ ಊಟೋಪಚಾರ

  PSI ಮರುಪರೀಕ್ಷೆ ವೇಳೆ ಕೂಡ ಅಕ್ರಮ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದರು

ಕಲಬುರಗಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯದ ಮತಯುದ್ಧ ಜೋರಾಗಿದೆ. ಬಿಜೆಪಿ ಸಂಸದ ಉಮೇಶ್ ಜಾಧವ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರ ಮಧ್ಯೆ ಬಿಗ್ ಫೈಟ್ ನಡೆಯುತ್ತಿದೆ. ಚುನಾವಣಾ ಪ್ರಚಾರ ರಂಗೇರಿರುವಾಗ ಬಿಜೆಪಿ ಸಂಸದ ಉಮೇಶ್ ಜಾಧವ್ ಅವರ ಒಂದು ನಡೆ ಕಲಬುರಗಿ ಕ್ಷೇತ್ರದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕಲಬುರಗಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರು PSI ಹಗರಣದ ಕಿಂಗ್ ಪಿನ್ ಮನೆಗೆ ಭೇಟಿ ನೀಡಿದ್ದು ಆಕ್ರೋಶಕ್ಕೆ ಗುರಿಯಾಗಿದೆ. ಇಡೀ ರಾಜ್ಯದ ಯುವಕರ ಭವಿಷ್ಯವನ್ನೇ ಹಾಳು ಮಾಡಿದ್ದ ಕಿಡಿಗೇಡಿ ಮನೆಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಊಟೋಪಚಾರ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

2022ರಲ್ಲಿ ನಡೆದ PSI ಹಗರಣದ ಮಾಸ್ಟರ್ ಮೈಂಡ್‌ RD ಪಾಟೀಲ್ ಅವರಾಗಿದ್ದಾರೆ. ಇವ್ರು ರಾಜ್ಯದಲ್ಲಿ 58 ಸಾವಿರಕ್ಕೂ ಅಧಿಕ ಯುವಕರ ಭವಿಷ್ಯದ ಪಾಲಿಗೆ ಶಾಪವಾಗಿ ಪರಿಣಮಿಸಿದ್ದರು. PSI ನೇಮಕಾತಿಯಲ್ಲಿ ಹಗರಣ ನಡೆಸಿ, ಪರೀಕ್ಷೆಯಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸಿ ಜೈಲುಪಾಲಾಗಿದ್ದರು. ಇಷ್ಟು ದೊಡ್ಡ ಆರೋಪಿ RD ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ತೆರಳಿ ಮತಯಾಚಿಸಿ, ಬೆಂಬಲ ಕೇಳಿರುವುದು ಅವರಿಗೆ ತಿರುಗುಬಾಣವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಝಣಝಣ ಕಾಂಚಾಣ.. ಪೇಡಾ ನಗರಿಯ ಅಪಾರ್ಟ್​​ಮೆಂಟ್​ನಲ್ಲಿ ಕೋಟಿ ಕೋಟಿ ಬೇಟೆಯಾಡಿದ IT

PSI ಮರುಪರೀಕ್ಷೆ ವೇಳೆ ಕೂಡ ಅಕ್ರಮ ಮಾಡಲು ಯತ್ನಿಸಿ ಸಿಕ್ಕಿಬಿದ್ದು RD ಪಾಟೀಲ್ ಅವರು ಜೈಲುಗಂಬಿ ಎಣಿಸುತ್ತಿದ್ದಾರೆ. ಇದೀಗ RD ಪಾಟೀಲ್ ಮನೆಗೆ ಉಮೇಶ್ ಜಾಧವ್ ಭೇಟಿಯಾಗಿರುವುದನ್ನು ಸಮರ್ಥಸಿಕೊಳ್ಳುವುದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರಿಗೂ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಭೇಟಿ ಮೂಲಕ ಜನರಿಗೆ ಯಾವ ರೀತಿಯ ಸಂದೇಶ ನೀಡಲು ಬಿಜೆಪಿ ಸಂಸದ ಮುಂದಾಗಿದ್ದಾರೆ? ಎಂಬ ಪ್ರಶ್ನೆಗೆ ಜಿಲ್ಲೆಯ ಯಾವುದೇ ಬಿಜೆಪಿ ನಾಯಕರ ಬಳಿಯೂ ಉತ್ತರವಿಲ್ಲದಾಗಿದೆ.

ಅಘಜಲಪುರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ RD ಪಾಟೀಲ್ ಅನ್ನು ಉಮೇಶ್ ಜಾಧವ್ ತನ್ನ ಚುನಾವಣೆಯಲ್ಲಿ ಸಹಕರಿಸುವಂತೆ ಕೇಳಿಕೊಂಡಿದ್ದಾರೆ. ಇದು ಜಿಲ್ಲೆಯ ಜನರಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ಕೈಗೆ ಬಹುದೊಡ್ಡ ಅಸ್ತ್ರವನ್ನ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಟಿ ಕೋಟಿ ದುಡ್ಡು ಮಾಡಿದ್ದ PSI ಹಗರಣದ ಕಿಂಗ್ ಪಿನ್ ಮನೆಗೆ BJP ಸಂಸದರ ಭೇಟಿ; ಏನಿದು ಟ್ವಿಸ್ಟ್​​​?

https://newsfirstlive.com/wp-content/uploads/2024/04/Kalburgi-Bjp-MP-Umesh-Jadhav.jpg

Load More