newsfirstkannada.com

ಚುಮ್ಮಾ..ಚುಮ್ಮಾ..ದೆ..ದೇ.. ಮತ ಪ್ರಚಾರದ ವೇಳೆ ಮಹಿಳೆಗೆ ಕಿಸ್​ ಕೊಟ್ಟ BJP ಅಭ್ಯರ್ಥಿ!

Share :

Published April 10, 2024 at 8:39am

    ಲೋಕಸಭಾ ಚುನಾವಣೆಗಾಗಿ ಭರ್ಜರಿ ಮತ ಪ್ರಚಾರ

    ಬಿಜೆಪಿ ಅಭ್ಯರ್ಥಿಯಿಂದ ಪ್ರಚಾರದ ವೇಳೆ ಮಹಿಳೆಗೆ ಕಿಸ್​

    ಎಡವಟ್ಟು ಮಾಡಿಕೊಂಡ ಬಿಜಿಪಿ ಆಭ್ಯರ್ಥಿಯ ಕಾಲೆಳೆದ ಟಿಎಂಸಿ

ಪಶ್ಚಿಮ ಬಂಗಾಳ: ಲೋಕಸಭಾ ಚುನಾವಣೆಗಾಗಿ ಭರ್ಜರಿ ಮತ ಪ್ರಚಾರ ನಡೆಯುತ್ತಿದೆ. ಈಗಾಗಲೇ ಅಭ್ಯರ್ಥಿಗಳು ಎಸಿ ಕಾರಿನಿಂದ ಇಳಿದು ಗಲ್ಲಿ ಗಲ್ಲಿ ಸುತ್ತುತ್ತಾ ಮತಯಾಚನೆ ಮಾಡುತ್ತಿದ್ದಾರೆ. ಹೀಗೆ ಮತಯಾಚಣೆ ಮಾಡುತ್ತಿದ್ದ ಅಭ್ಯರ್ಥಿಯೊಬ್ಬರು ಎಡವಟ್ಟು ಮಾಡಿಕೊಂಡಿದ್ದು, ಸುದ್ದಿಯಾಗಿದ್ದಾರೆ.

ಮಾಲ್ಡಾ ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ 2ನೇ ಬಾರಿಗೆ ಸ್ಪರ್ಧಿಸುತ್ತಿರುವ ಬಿಜೆಪಿ ಸಂಸದ ಖಗೇನ್ ಮುರ್ಮು ಯಡವಟ್ಟೊಂದನ್ನ ಮಾಡಿದ್ದಾರೆ. ಚಂಚಲ್‌ನಲ್ಲಿರುವ ಸಿಹಿಪುರ್ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡ್ತಿದ್ದ ವೇಳೆ ಖಗೇನ್ ಮುರ್ಮು ಮಹಿಳೆಯೊಬ್ಬರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ.

ಸದ್ಯ ಈ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು, ಟಿಎಮ್​ಸಿ ನಾಯಕರು ಸೇರಿದಂತೆ ಪ್ರತಿಪಕ್ಷಗಳ ನಾಯಕರು ಖಗೇನ್ ಮುರ್ಮು ನಡೆಯನ್ನ ಖಂಡಿಸಿದ್ದಾರೆ. ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ.

ಟಿಎಂಸಿ ಈ ಬಗ್ಗೆ ಖಂಡಿಸಿದ್ದು, ‘ಮಹಿಳಾ ಕುಸ್ತಿಪಟುಗಳಿಗೆ ಲೈಗಿಂಕ ಕಿರುಕುಳ ನೀಡುವ ಸಂಸದರಿಂದ ಹಿಡಿದು ಬಂಗಾಳಿ ಮಹಿಳೆಯರ ಬಗ್ಗೆ ಅಶ್ಲೀಲ ಹಾಡುಗಳನ್ನು ಹಾಡುವ ನಾಯಕವರೆಗೆ ಬಿಜೆಪಿಯಲ್ಲಿ ಮಹಿಳಾ ವಿರೋಧಿ ರಾಜಕಾರಣಿಗಳೇನು ಕೊರತೆಯಿಲ್ಲ. ನಾರಿ ಕಾ ಸಮ್ಮಾನ್​ನಲ್ಲಿ ಮೋದಿ ಕಾ ಪರಿವಾರ್​ ತೊಡಗಿಸಿಕೊಂಡಿರೋದು ಹೀಗೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹಠಾತ್ ಹೃದಯಾಘಾತ; ಲೋಕಸಭೆ ಚುನಾವಣಾ ಅಭ್ಯರ್ಥಿ ಸಾವು

ಇನ್ನು ಟಿಎಂಸಿ ಹೇಳಿಕೆಯನ್ನು ಅಲ್ಲಗಳೆದ ಖಗೇನ್​ ಮುರ್ಮು, ಅದು ಟಿಎಂಸಿ ಸಂಸ್ಕೃತಿ. ಪ್ರತಿಯೊಂದು ಕುಟುಂಬದಲ್ಲಿ ತಾಐಇ ಮತ್ತು ಹೆಣ್ಣು ಮಕ್ಕಳಿರುತ್ತಾರೆ. ಎಲ್ಲರೂ ಮಕ್ಕಳನ್ನು ಪ್ರೀತಿಸುತ್ತಾರೆ. ನಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಮತದಾರರನ್ನು ತಲುಪುತ್ತೇವೆ. ಮಹಿಳೆಯನ್ನು ನನಗೆ ತಾಯಿಯಂತೆ, ಜನರು ನನಗೆ ದೇವರಂತೆ. ಬಿಜೆಪಿ ಮಹಿಳೆಯರನ್ನು ಗೌರವಿಸುತ್ತದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚುಮ್ಮಾ..ಚುಮ್ಮಾ..ದೆ..ದೇ.. ಮತ ಪ್ರಚಾರದ ವೇಳೆ ಮಹಿಳೆಗೆ ಕಿಸ್​ ಕೊಟ್ಟ BJP ಅಭ್ಯರ್ಥಿ!

https://newsfirstlive.com/wp-content/uploads/2024/04/Khagen-Murmu.jpg

Load More