newsfirstkannada.com

ಹಠಾತ್ ಹೃದಯಾಘಾತ; ಲೋಕಸಭೆ ಚುನಾವಣಾ ಅಭ್ಯರ್ಥಿ ಸಾವು

Share :

Published April 10, 2024 at 8:07am

Update April 10, 2024 at 9:53am

    ಹೃದಯಾಘಾತಕ್ಕೆ ಬಲಿಯಾದ ಲೋಕಸಭಾ ಚುನಾವಣಾ ಅಭ್ಯರ್ಥಿ

    ಏಪ್ರಿಲ್​ 26ರಂದು ನಡೆಯಬೇಕಾಗಿದ್ದ ಚುನಾವಣೆ ಮುಂದೂಡಿಕೆ

    ಎದೆನೋವು ಕಾಣಿಸಿಕೊಂಡಿದ್ದಕ್ಕೆ ಆಸ್ಪತ್ರೆ ದಾಖಲಿಸಿದ್ರು ಉಳಿಯಲಿಲ್ಲ

ಮಧ್ಯಪ್ರದೇಶ: ಲೋಕಸಭಾ ಚುನಾವಣೆ ಅಭ್ಯರ್ಥಿಯೊಬ್ಬರು ಹೃದಯಾಘಾತಕ್ಕೆ ನಿಧನರಾದ ಕಾರಣ ಏಪ್ರಿಲ್​ 26ರಂದು ನಡೆಯಬೇಕಾಗಿದ್ದ 2ನೇ ಹಂತದ ಚುನಾವಣೆಯನ್ನು ಮುಂದೂಡಲಾಗಿದೆ.

ಮಧ್ಯಪ್ರದೇಶದ ಬೇತುಲ್​ ಕ್ಷೇತ್ರದಿಂದ ಮಾಯಾವತಿಯವರ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಅಶೋಕ್​ ಭಾಲವಿ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಹೃದಯಾಘಾತಕ್ಕೆ ಅಶೋಕ್​ ನಿಧನರಾಗಿದ್ದಾರೆ.

ಪಕ್ಷ ಹಂಚಿಕೊಂಡ ಮಾಹಿತಿ ಪ್ರಕಾರ, ಅಶೋಕ್​​ ಭಾಲವಿಯವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಅಶೋಕ್​ ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು ಎಂದು ತಿಳಿಸಿದೆ.

ಇದನ್ನೂ ಓದಿ: ಗಂಡ-ಹೆಂಡತಿ ನಡುವೆ ಗಲಾಟೆ.. ಮಧ್ಯ ಪ್ರವೇಶಿಸಿದ ಬಾಮೈದುನನಿಗೆ ಚಾಕು ಇರಿದು ಕೊಲೆ

ಇನ್ನು ಅಶೋಕ್​ ಭಾಲವಿ ಸಾವಿನ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸಲಾಗಿದೆ. ಹೀಗಾಗಿ 1951ರ ಸೆಕ್ಷನ್​ 52ರ ಅಡಿಯಲ್ಲಿ ಏಪ್ರಿಲ್​ 26ರಂದು ನಡೆಯಬೇಕಾಗಿದ್ದ ಲೋಕಸಭಾ ಚುನಾವಣೆ ಮುಂದೂಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಠಾತ್ ಹೃದಯಾಘಾತ; ಲೋಕಸಭೆ ಚುನಾವಣಾ ಅಭ್ಯರ್ಥಿ ಸಾವು

https://newsfirstlive.com/wp-content/uploads/2024/04/Ashok-Abalavi.jpg

Load More