newsfirstkannada.com

ಕನ್ನಡಿಗರು ಯಾಕೆ ಕೊಡಬೇಕು ಕಪ್ಪ? – ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವ್ಯಂಗ್ಯ

Share :

Published February 20, 2024 at 4:03pm

Update February 20, 2024 at 4:09pm

  ‘ಕರ್ನಾಟಕದಲ್ಲಿ ಆನೆ ತುಳಿದು ಸಾವನ್ನಪ್ಪಿದರೆ 5 ಲಕ್ಷ ಕೊಡ್ತೀರಿ’

  ಕೇರಳದಲ್ಲಿ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಗೆ 15 ಲಕ್ಷ ರೂಪಾಯಿ!

  ಬಿಜೆಪಿ ಕರ್ನಾಟಕ ಸೋಷಿಯಲ್ ಮೀಡಿಯಾದಿಂದ ವ್ಯಂಗ್ಯ

ಬೆಂಗಳೂರು: ಕೇರಳದಲ್ಲಿ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡಿದ ವಿಚಾರ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ. ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿರೋ ಬಿಜೆಪಿ, ಜೆಡಿಎಸ್ ನಾಯಕರು ಕರ್ನಾಟಕದಲ್ಲಿ ಆನೆ ತುಳಿದು ಸಾವನ್ನಪ್ಪಿದರೆ 5 ಲಕ್ಷ ರೂಪಾಯಿ ಕೊಡ್ತೀರಿ. ಕೇರಳದಲ್ಲಿ ಆನೆ ತುಳಿದು ಮೃತಪಟ್ರೆ 15 ಲಕ್ಷ ಕೊಡ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇರಳದ ಆನೆ ದಾಳಿಯ ಪರಿಹಾರದ ವಿಚಾರಕ್ಕೆ ಬಿಜೆಪಿ ಕರ್ನಾಟಕ ಸೋಷಿಯಲ್ ಮೀಡಿಯಾದಲ್ಲಿ ವ್ಯಂಗ್ಯ ಮಾಡಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ ಅವರ ಫೋಟೋ ಬಳಿಸಿ ಸರ್ಕಾರದ ಮೇಲೆ ಕಿಡಿಕಾರಿದೆ.

ಇದನ್ನೂ ಓದಿ: ಕೇರಳದಲ್ಲಿ ಆನೆ ದಾಳಿಗೆ ಕರ್ನಾಟಕದಿಂದ ₹15 ಲಕ್ಷ ಪರಿಹಾರ ಯಾಕೆ? ಬಿಜೆಪಿ ನಾಯಕರ ಕೈಗೆ ಹೊಸ ಅಸ್ತ್ರ!

ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಕೇರಳದ ವ್ಯಕ್ತಿಗೆ ರಾಜ್ಯ ಸರ್ಕಾರ 15 ಲಕ್ಷ ರೂಪಾಯಿ ಪರಿಹಾರ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ. ಕನ್ನಡಿಗರ ತೆರಿಗೆ ರಾಹುಲ್‌ ಗಾಂಧಿ ಹಕ್ಕು ಅನ್ನೋ ಶೀರ್ಷಿಕೆಯಲ್ಲಿ ಫೋಟೋ ರಿಲೀಸ್ ಮಾಡಲಾಗಿದ್ದು, ಕಾಂಗ್ರೆಸ್ ಗುಲಾಮಿ ಮನಸ್ಥಿತಿಯ ಸದಸ್ಯರೇ, ಧೈರ್ಯವಾಗಿ ನಕಲಿ ಗಾಂಧಿಗಳನ್ನು ಪ್ರಶ್ನಿಸಿ ಕನ್ನಡಿಗರೇಕೆ ಕೊಡಬೇಕು ಕಪ್ಪ? ಕಣ್ಣಿಗೆ ಕಾಣದ‌ ಕನ್ನಡಿಗರ ಮೂಟೆ ಮೂಟೆ ಹಣ ಹೋಗುತ್ತಿರುವುದು ದೆಹಲಿಯ 10 ಜನಪಥ್ ಮನೆಗೆ. ಸಿದ್ದರಾಮಯ್ಯ ಅವರ ಸರ್ಕಾರ ಲೂಟಿ ಹೊಡೆದು ಮೂಟೆಗಳಲ್ಲಿ ಕನ್ನಡಿಗರ ತೆರಿಗೆ ಹಣವನ್ನು ಸಾಗಿಸಿ, ಖಜಾನೆ ಖಾಲಿ ಎನ್ನುತ್ತಿದೆ ನಾಡ ದ್ರೋಹಿ ಸರ್ಕಾರ ಎಂದು ಬಿಜೆಪಿ ಕಿಡಿಕಾರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗರು ಯಾಕೆ ಕೊಡಬೇಕು ಕಪ್ಪ? – ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವ್ಯಂಗ್ಯ

https://newsfirstlive.com/wp-content/uploads/2024/02/BjP-Tweet-Elephant.jpg

Load More