newsfirstkannada.com

VIDEO: ‘ಮದುವೆ ಗಂಡು ಯಾರು.. I.N.D.I.A ನಾಯಕರಿಂದ ಹೆಣ್ಣಿಗಾಗಿ ಕಿತ್ತಾಟ’- ಬಿಜೆಪಿ ವ್ಯಂಗ್ಯ

Share :

Published March 27, 2024 at 1:05pm

  ಮದುವೆ ಗಂಡು ಯಾರು ಅನ್ನೋ ವಿಚಾರಕ್ಕೆ ನಾಯಕರ ಮಧ್ಯೆ ಕಿತ್ತಾಟ!

  ಇನ್ನೂ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ

  I.N.D.I.A ಮಿತ್ರ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರು ಅಂತ ಬಿಜೆಪಿ ವ್ಯಂಗ್ಯ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂದು ಬಿಜೆಪಿ ಕೇಳಿದೆ. ಸೋಷಿಯಲ್ ಮೀಡಿಯಾದಲ್ಲಿ ವ್ಯಂಗ್ಯದ ವಿಡಿಯೋ ಹಂಚಿಕೊಂಡಿರುವ ಬಿಜೆಪಿ, ಮದುವೆ ಗಂಡು ಯಾರು ಅಂತ ಪ್ರಶ್ನಿಸಿದೆ.

ಮದುವೆಗೆ ಹೆಣ್ಣು ನೋಡಲು ಹುಡುಗಿ ಮನೆಗೆ ಒಂದಷ್ಟು ನಾಯಕರು ಹೋಗಿದ್ದಾರೆ. ಅದರಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ, ಎಂ.ಕೆ ಸ್ಟಾಲಿನ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ತೇಜಸ್ವಿ ಯಾದವ್, ಲಾಲು ಪ್ರಸಾದ್ ಯಾದವ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರನ್ನೇ ಹೋಲುವ ಪಾತ್ರಗಳನ್ನು ಸೃಷ್ಟಿಸಲಾಗಿದೆ.

ಮದುವೆಗೆ ಹೆಣ್ಣು ನೋಡಲು ಹೋದಾಗ ಮದುವೆ ಗಂಡು ಯಾರು ಎಂದು ಹುಡುಗಿ ಪ್ರಶ್ನಿಸುತ್ತಾಳೆ. ಆಗ ಎಲ್ಲರೂ ತಾವೇ ಮದುವೆ ಗಂಡು ಎಂದು ಹೇಳಿ ಹೊಡೆದಾಟ ನಡೆಸುತ್ತಾರೆ. ಇವರು ತಮ್ಮ ಮಧ್ಯೆ ಮದುವೆ ಗಂಡು ಯಾರು ಎಂದು ಆಯ್ಕೆ ಮಾಡಿಕೊಳ್ಳಬಹುದು ಎಂದು ಅನ್ನಿಸುತ್ತಾ? ಎಂದು ಮದುವೆ ಹೆಣ್ಣು ಕೇಳಿದ್ದಾರೆ.

ಇದನ್ನೂ ಓದಿ: ಟಿಕೆಟ್​ ಸಿಗುತ್ತಿದ್ದಂತೆಯೇ ​ದೆಹಲಿಗೆ ​ಹಾರಿದ ನಟಿ ಕಂಗನಾ; ಜೆಪಿ ನಡ್ಡಾ ಜತೆ ಮಹತ್ವದ ಚರ್ಚೆ

ಮದುವೆ ಗಂಡು ಯಾರು ಅನ್ನೋ ವಿಚಾರಕ್ಕೆ ನಾಯಕರ ಮಧ್ಯೆ ಕಿತ್ತಾಟ ನಡೆಯುತ್ತೆ. ಇನ್ನೂ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಬಿಜೆಪಿ ಈ ವಿಡಿಯೋದಲ್ಲಿ ಪ್ರಶ್ನಿಸಿದೆ. ವಿರೋಧ ಪಕ್ಷಗಳಲ್ಲಿ ಇನ್ನೂ ಪ್ರಧಾನಿ ಅಭ್ಯರ್ಥಿಯೇ ಆಯ್ಕೆಯಾಗಿಲ್ಲ. ಅಂತಿಮವೂ ಆಗಿಲ್ಲ ಎನ್ನುವುದನ್ನ ವಿಡಿಯೋದಲ್ಲಿ ಬಿಜೆಪಿ ಪಕ್ಷ ಬಿಂಬಿಸಿದೆ. ಬಿಜೆಪಿ ರಿಲೀಸ್ ಮಾಡಿರೋ ವ್ಯಂಗ್ಯದ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಮದುವೆ ಗಂಡು ಯಾರು.. I.N.D.I.A ನಾಯಕರಿಂದ ಹೆಣ್ಣಿಗಾಗಿ ಕಿತ್ತಾಟ’- ಬಿಜೆಪಿ ವ್ಯಂಗ್ಯ

https://newsfirstlive.com/wp-content/uploads/2024/03/BJP-ON-INDIA-Congress.jpg

Load More