newsfirstkannada.com

ಟಿಕೆಟ್​ ಸಿಗುತ್ತಿದ್ದಂತೆಯೇ ​ದೆಹಲಿಗೆ ​ಹಾರಿದ ನಟಿ ಕಂಗನಾ; ಜೆಪಿ ನಡ್ಡಾ ಜತೆ ಮಹತ್ವದ ಚರ್ಚೆ

Share :

Published March 27, 2024 at 7:37am

  ಇಡೀ ದೇಶಾದ್ಯಂತ ತಾರಕಕ್ಕೇರಿದ 18ನೇ ಲೋಕಸಭಾ ಚುನಾವಣೆ

  ದಿನದಿಂದ ದಿನಕ್ಕೆ ರಂಗೇರುತ್ತಿದೆ ಲೋಕಸಭಾ ಚುನಾವಣೆ ಕಣ

  ಬಾಲಿವುಡ್​ ಸ್ಟಾರ್​ ನಟಿ ಕಂಗನಾಗೆ ಮಣೆ ಹಾಕಿದ ಹೈಕಮಾಂಡ್​​

ನವದೆಹಲಿ: 18ನೇ ಲೋಕಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ಈ ಬಾರಿ ಲೋಕಸಭಾ ಚುನಾವಣೆಗೆ ಖ್ಯಾತ ನಟ ಹಾಗೂ ನಟಿಯರಿಗೆ ನಾನಾ ಪಕ್ಷಗಳು ಟಿಕೆಟ್ ನೀಡುತ್ತಿವೆ. ಹಿಮಾಚಲ ಪ್ರದೇಶ ಮಂಡಿ ಲೋಕಸಭಾ ಕ್ಷೇತ್ರದಿಂದ ಬಾಲಿವುಡ್ ನಟಿ ಕಂಗನಾ ರಣಾವತ್​ಗೆ ಬಿಜೆಪಿ ಟಿಕೆಟ್ ನೀಡುತ್ತಿದ್ದಂತೆ ಫುಲ್ ಆ್ಯಕ್ಟೀವ್ ಆಗಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಕಾಂಗ್ರೆಸ್​ಗೆ ಕುಮಾರಸ್ವಾಮಿ ಚೆಕ್​ಮೇಟ್​​.. ಆಪರೇಷನ್‌ಗೇ ರಿವರ್ಸ್ ಆಪರೇಷನ್..!

View this post on Instagram

A post shared by Kangana Ranaut (@kanganaranaut)

ಬಿಜೆಪಿಯಿಂದ ಟಿಕೆಟ್ ನೀಡಿದ ಬೆನ್ನಲ್ಲೇ ನಟಿ ಕಂಗನಾ ರಣಾವತ್​ ದೆಹಲಿಗೆ ಹಾರಿದ್ದಾರೆ. ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಭೇಟಿ ಬಳಿಕ ಕಂಗನಾ ಮಂಡಿ ಕ್ಷೇತ್ರದ ಪ್ರಗತಿಗೆ ತಮ್ಮ ಕೈಲಾದಷ್ಟು ಸೇವೆ ಮಾಡುವುದಾಗಿ ಪೋಸ್ಟ್ ಮಾಡಿದ್ದಾರೆ. ನಾನು ರಾಷ್ಟ್ರೀಯ ಅಧ್ಯಕ್ಷರಾದ ಗೌರವಾನ್ವಿತ ಜಗತ್ ಪ್ರಕಾಶ್ ನಡ್ಡಾ ಜೀ ಅವರನ್ನು ಭೇಟಿ ಮಾಡಿದ್ದೇನೆ. ಅವರ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ನಾನು ಯಾವಾಗಲೂ ಕೃತಜ್ಞಳಾಗಿರುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿಕೆಟ್​ ಸಿಗುತ್ತಿದ್ದಂತೆಯೇ ​ದೆಹಲಿಗೆ ​ಹಾರಿದ ನಟಿ ಕಂಗನಾ; ಜೆಪಿ ನಡ್ಡಾ ಜತೆ ಮಹತ್ವದ ಚರ್ಚೆ

https://newsfirstlive.com/wp-content/uploads/2024/03/kangan.jpg

Load More