newsfirstkannada.com

ಮಂಡ್ಯದಲ್ಲಿ ಕಾಂಗ್ರೆಸ್​ಗೆ ಕುಮಾರಸ್ವಾಮಿ ಚೆಕ್​ಮೇಟ್​​.. ಆಪರೇಷನ್‌ಗೇ ರಿವರ್ಸ್ ಆಪರೇಷನ್..!

Share :

Published March 27, 2024 at 6:54am

    ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿ ಆಗಿ ಮುನಿಯಪ್ಪ ಡಿಮ್ಯಾಂಡ್​​​

    ಸುಮಲತಾ ಅಂಬರೀಶ್​ ಅವರನ್ನೂ ಭೇಟಿಯಾಗುವ ಮಾತಾಡಿದ HDK

    ಅಳಿಯನಿಗೆ ಟಿಕೆಟ್ ಕೊಡಿಸುವಲ್ಲಿ ಮುನಿಯಪ್ಪ ಯಶಸ್ವಿಯಾದ್ರಾ?

ಮಂಡ್ಯ ಕಾಂಗ್ರೆಸ್​ಗೆ ಪ್ರತಿಷ್ಠೆ.. ರಾಜ್ಯದಲ್ಲಿ ಘನತೆ ತಲೆ ಎತ್ತಲು ಮಂಡ್ಯ ಅನಿವಾರ್ಯ. ಜೆಡಿಎಸ್​ಗೆ ಇದು ಅಸ್ತಿತ್ವದ ಪ್ರಶ್ನೆ. ಉಳಿವು-ಉಳಿವಿನ ಹೋರಾಟ.. ಈ ಹೋರಾಟ ಬೆನ್ನಟ್ಟಿದ ದಳಪತಿ, ಸ್ವತಃ ತಾವೇ ಅಖಾಡಕ್ಕೆ ಇಳಿಯುವ ಸುಳಿವು ನೀಡಿದ್ದಾರೆ. ವಿರೋಧಿಗಳನ್ನೆಲ್ಲಾ ಒಟ್ಟಾಗಿಸಿ ಚದುರಂಗ ಕಟ್ಟುತ್ತಿದ್ದಾರೆ. ಆಪರೇಷನ್​​​ ಹಸ್ತಕ್ಕೆ ಹೆಜ್ಜೆ ಇಡ್ತಿದ್ದ ಕಾಂಗ್ರೆಸ್​ಗೆ ರಾತ್ರೋರಾತ್ರಿ ಚೆಕ್​​ಮೇಟ್​ ಇಟ್ಟಿದ್ದಾರೆ.

ಮಂಡ್ಯದಲ್ಲಿ ಆಪರೇಷನ್‌ಗೆ ರಿವರ್ಸ್ ಆಪರೇಷನ್!
ಮಂಡ್ಯ ಚುನಾವಣಾ ಅಖಾಡಕ್ಕೆ ಮಾಜಿ ಸಿಎಂ ಹೆಚ್​​ಡಿಕೆ, ಇಳಿಯೋದು ಬಹುತೇಕ ಫಿಕ್ಸ್​​ ಆಗಿದೆ.. ಹೀಗಾಗಿ ಮಂಡ್ಯ ಗೆಲ್ಲಲು ಪ್ರತಿಷ್ಠೆಗೆ ಬಿದ್ದ ಕುಮಾರಸ್ವಾಮಿ, ಹೊಸ ಶತ್ರುವನ್ನ ಮಟ್ಟಹಾಕಲು ಹಳೇ ಗೆಳೆಯನ ಮೊರೆ ಹೋಗಿ ಆಪರೇಷನ್​​ ಹಸ್ತಕ್ಕೆ ಚೆಕ್​​ಮೇಟ್​ ಇಟ್ಟು ಮಂಡ್ಯದಲ್ಲಿ ಘೀಳಿಟ್ಟಿದ್ದಾರೆ. ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವತ್ಥ್​​​ನಾರಾಯಣ್ ಮಧ್ಯಸ್ಥಿಕೆಯಲ್ಲಿ ನಾರಾಯಣಗೌಡರನ್ನ ಹೆಚ್​ಡಿಕೆ ಭೇಟಿ ಮಾಡಿದ್ದಾರೆ. ಬಳಿಕ ಮಾತ್ನಾಡಿದ ಕುಮಾರಸ್ವಾಮಿ, ಎರಡು ಪಕ್ಷದ ಮುಖಂಡರಲ್ಲಿ ವಿಶ್ವಾಸದ ವಾತಾವರಣ ನಿರ್ಮಾಣ ಆಗಬೇಕಿದೆ.

ಇದನ್ನೂ ಓದಿ: ಬಂಡೆದ್ದ ದಂಡಿನ ಜೊತೆ ಯಡಿಯೂರಪ್ಪ ಮೀಟಿಂಗ್​​.. ದಾವಣಗೆರೆ ಬಳಿಕ ಬೆಳಗಾವಿ ಕ್ಷೇತ್ರಕ್ಕೆ ಬಿಎಸ್​ವೈ ಎಂಟ್ರಿ!

ಇದೊಂದು ಸೌಹಾರ್ದಯುತ ಭೇಟಿ ಅಂತ ಬಣ್ಣಿಸಿದ್ರು. ಇದೇ ವೇಳೆ, ಸುಮಲತಾ ಬೆಂಬಲ ಕೋರುವ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್​ಡಿಕೆ, ಎಲ್ಲರನ್ನೂ ಭೇಟಿ ಮಾಡುತ್ತೇನೆ. ವಿಶ್ವಾಸದ ಕೊರತೆಗಳನ್ನ ಸರಿ ಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.

AICC ಅಧ್ಯಕ್ಷ ಖರ್ಗೆ ಭೇಟಿಯಾಗಿ ಮುನಿಯಪ್ಪ ಡಿಮ್ಯಾಂಡ್​​​
ಕೋಲಾರ ಕಾಳಗ ಕಾಂಗ್ರೆಸ್​​ನಲ್ಲಿ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ನೇರವಾಗಿ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ಸಚಿವ ಮುನಿಯಪ್ಪ ತಮ್ಮ ಅಳಿಯನ ಪರ ಪಟ್ಟು ಹಿಡಿದ್ರು. ಟಿಕೆಟ್​​​ ಕೊಟ್ರೆ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಖರ್ಗೆಗೆ ವಚನ ನೀಡಿದ್ದಾರೆ. ಫೈನಲೀ ಖರ್ಗೆ ಸಹ ಸಮ್ಮತಿ ನೀಡಿದ್ದಾರೆ ಅಂತ ಮೂಲಗಳಿಂದ ಗೊತ್ತಾಗಿದೆ. ಒಟ್ಟಾರೆ, ರಾಜ್ಯದಲ್ಲಿ ಅಧಿಸೂಚನೆಗೆ ಗಂಟೆಗಳ ಘಂಟೆ ಬಾರಿಸ್ತಿದೆ. ಆದ್ರೆ, ಟಿಕೆಟ್​​ ಫೈಟ್​ ಮಾತ್ರ ಮುಗಿತಾನೆ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಲ್ಲಿ ಕಾಂಗ್ರೆಸ್​ಗೆ ಕುಮಾರಸ್ವಾಮಿ ಚೆಕ್​ಮೇಟ್​​.. ಆಪರೇಷನ್‌ಗೇ ರಿವರ್ಸ್ ಆಪರೇಷನ್..!

https://newsfirstlive.com/wp-content/uploads/2024/03/HDK-3-1.jpg

Load More