newsfirstkannada.com

ಬಂಡೆದ್ದ ದಂಡಿನ ಜೊತೆ ಯಡಿಯೂರಪ್ಪ ಮೀಟಿಂಗ್​​.. ದಾವಣಗೆರೆ ಬಳಿಕ ಬೆಳಗಾವಿ ಕ್ಷೇತ್ರಕ್ಕೆ ಬಿಎಸ್​ವೈ ಎಂಟ್ರಿ!

Share :

Published March 27, 2024 at 6:31am

Update March 27, 2024 at 6:34am

    ತುಮಕೂರು ಬಿಜೆಪಿ ಟಿಕೆಟ್​ಗಾಗಿ ಮುನಿದಿದ್ದ ಮಾಧುಸ್ವಾಮಿ

    5 ದಿನಗಳ ಹಿಂದೆ ಸಭೆ ನಡೆಸಿದ ಮನವೊಲಿಸಿದ್ದ ಬಿಎಸ್​​ವೈ

    ನಿನ್ನೆ ಕರ್ನಾಟಕ ಮಧ್ಯಭಾಗ ದಾವಣಗೆರೆಗೆ ಬಿಎಸ್​​ವೈ ಎಂಟ್ರಿ

ಬಿಜೆಪಿಯಲ್ಲಿ ಎದ್ದ ಟಿಕೆಟ್​ ಬಂಡಾಯಕ್ಕೆ ಮದ್ದು ಸಿಗ್ತಾನೇ ಇಲ್ಲ. ಹೀಗಾಗಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರೇ ಖುದ್ದು ಅಖಾಡಕ್ಕೆ ಇಳಿದಿದ್ದಾರೆ. ಎಲ್ಲೆಲ್ಲಿ ಬಂಡಾಯ ಇದ್ಯೋ ಅಲ್ಲೆಲ್ಲಾ ಬೂಸ್ಟರ್​ಡೋಸ್​ ಕೊಟ್ಟು ಅಸಮಾಧಾನಕ್ಕೆ ಅಂಕುಶ ಹಾಕ್ತಿದ್ದಾರೆ.

ಬಂಡೆದ್ದ ದಂಡಿನ ಜೊತೆ ಯಡಿಯೂರಪ್ಪ ಮೀಟಿಂಗ್​​..!

ಬಿಜೆಪಿ ಟಿಕೆಟ್​​ ಘೋಷಣೆ ಬಳಿಕ ಸಿಡಿದೆದ್ದ ಮದ್ದಾನೆಗಳನ್ನ ಅಂಕುಶ ಹಾಕಿ ಪಳಗಿಸಲಾಗ್ತಿದೆ. ಇದೀಗ ಬಿಜೆಪಿಗೆ ಘರ್​​​ವಾಪ್ಸಿ ಆಗಿ ಬೆಳಗಾವಿ ಟಿಕೆಟ್​​​ ಗಿಟ್ಟಿಸಿದ ಬಿಜೆಪಿ ಅಭ್ಯರ್ಥಿ ಶೆಟ್ಟರ್ ಗೆಲ್ಲಿಸಲು ಬಿಎಸ್​​ವೈ ಪ್ಲಾನ್​​​ ರೂಪಿಸಿದ್ದಾರೆ.

ಅಸಮಾಧಾನಿತ ಟಿಕೆಟ್‌ ಆಕಾಂಕ್ಷಿಗಳಿಂದಲೇ ಬಿಎಸ್​​ವೈಗೆ ಸ್ವಾಗತ

ಬೆಳಗಾವಿಯಲ್ಲಿ ಟಿಕೆಟ್​​ ಕಿಡಿ ಹಾರಿದ ಬಳಿಕ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಯಡಿಯೂರಪ್ಪರನ್ನ ಬಂಡಾಯ ನಾಯಕರೇ ಸ್ವಾಗತಿಸಿದ್ದು ವಿಶೇಷ. ಮುಖಂಡರ ಜೊತೆ ಖಾಸಗಿ ಹೋಟೆಲ್​ನಲ್ಲಿ ಕೆಲ ಹೊತ್ತು ಸಭೆ ನಡೆಸಿದ್ದಾರೆ.. ಜಿಲ್ಲಾ ಮುಖಂಡರಿಗೆ ಪಕ್ಷ ಗೆಲ್ಲಿಸುವ ಟಾಸ್ಕ್ ಕೊಟ್ಟಿದ್ದಾರೆ.. ಇದೇ ವೇಳೆ, ಮಾತ್ನಾಡಿದ ಮಾಜಿ ಸಿಎಂ, ಮತ್ತದೇ 28 ಕ್ಷೇತ್ರಗಳನ್ನ ಗೆಲ್ಲೋದಾಗಿ ಪುನರುಚ್ಚರಿಸಿದ್ರು. ಟಿಕೆಟ್​​ ಗಿಟ್ಟಿಸಿದ ಬಳಿಕ ಈವರೆಗೂ ಬೆಳಗಾವಿಗೆ ಕಾಲಿಡದ ಶೆಟ್ಟರ್​​, ಇವತ್ತು ಆಗಮಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ:  ಪತಿಯ IPL ಬೆಟ್ಟಿಂಗ್​ನಿಂದ 1.5 ಕೋಟಿ ರೂಪಾಯಿ ಸಾಲ: ಮನನೊಂದು ಪತ್ನಿ ಆತ್ಮಹತ್ಯೆ; ಮೂವರು ಅರೆಸ್ಟ್​

ಟ್ರಬಲ್​ಶೂಟರ್​ ಬಿಎಸ್​ವೈ!

  • ತುಮಕೂರು ಬಿಜೆಪಿ ಟಿಕೆಟ್​ಗಾಗಿ ಮುನಿದಿದ್ದ ಮಾಧುಸ್ವಾಮಿ
  • 5 ದಿನಗಳ ಹಿಂದೆ ಸಭೆ ನಡೆಸಿದ ಮನವೊಲಿಸಿದ್ದ ಬಿಎಸ್​​ವೈ
  • ನಿನ್ನೆ ಕರ್ನಾಟಕ ಮಧ್ಯಭಾಗ ದಾವಣಗೆರೆಗೆ ಬಿಎಸ್​​ವೈ ಎಂಟ್ರಿ
  • ಬಿಜೆಪಿ ಗೆಲ್ಲಿಸಲು ರವಿಂದ್ರನಾಥ್​​​​ ಹೆಗಲಿಗೆ ಬಿಎಸ್​​ವೈ ಹೊಣೆ
  • ಇವತ್ತು ಬೆಳಗಾವಿಯಲ್ಲಿ ಬಿಎಸ್​​ವೈ ಇನ್ನೊಂದು ಸುತ್ತಿನ ಸಭೆ

ಒಟ್ಟಾರೆ, ಬಿಎಸ್​​ವೈ ಚುನಾವಣೆಯನ್ನ ಸಾಕಷ್ಟು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ.. ಹೈಕಮಾಂಡ್​ ಇಟ್ಟ ವಿಶ್ವಾಸ ಉಳಿಸಿಕೊಳ್ಳಲು ಶತಪ್ರಯತ್ನಕ್ಕೆ ಇಳಿದಿದ್ದಾರೆ.. ಹೀಗಾಗಿ ಬಂಡೆದ್ದ ಜಾಗಕ್ಕೆ ಹೋಗಿ ಮದ್ದು ನೀಡಿ ಮದ್ದಾನೆಗಳನ್ನ ಪಳಗಿಸ್ತಿದ್ದಾರೆ.. ಕಾರಣ ಬಿಎಸ್​​ವೈ ಬಿಜೆಪಿ ಪಾಲಿನ ರಾಜಾಹುಲಿ.. ಇಟ್ಟ ಹೆಜ್ಜೆ ತೊಟ್ಟ ಗುರಿ, ಬೇಟೆ ಮಿಸ್​​ ಆಗೋದೆ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಂಡೆದ್ದ ದಂಡಿನ ಜೊತೆ ಯಡಿಯೂರಪ್ಪ ಮೀಟಿಂಗ್​​.. ದಾವಣಗೆರೆ ಬಳಿಕ ಬೆಳಗಾವಿ ಕ್ಷೇತ್ರಕ್ಕೆ ಬಿಎಸ್​ವೈ ಎಂಟ್ರಿ!

https://newsfirstlive.com/wp-content/uploads/2023/07/Renukacharya-BSY.jpg

Load More