newsfirstkannada.com

BREAKING: ವಿಧಾನಪರಿಷತ್ ಚುನಾವಣೆ: ಮೂರು ಸ್ಥಾನಕ್ಕೆ BJP ಟಿಕೆಟ್ ಘೋಷಣೆ; ಯಾರಿಗೆ ಬಂಪರ್‌?

Share :

Published June 2, 2024 at 11:54am

Update June 2, 2024 at 12:18pm

    ವಿಧಾನಪರಿಷತ್ ಚುನಾವಣೆಗೆ ಮೂರು ಬಿಜೆಪಿ ಟಿಕೆಟ್ ಘೋಷಣೆ

    ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ

    ಪಕ್ಷದ ನಿಷ್ಠಾವಂತ ನಾಯಕರಿಗೆ ಮಣೆ ಹಾಕಿದ ಬಿಜೆಪಿ ಹೈಕಮಾಂಡ್

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಶುರುವಾಗಿರುವಾಗ ಬಿಜೆಪಿ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ. ಹೀಗಾಗಿ ಇಂದು ಬಿಜೆಪಿ ಹೈಕಮಾಂಡ್ ಅಂತಿಮವಾಗಿ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.

ಇದನ್ನೂ ಓದಿ: ವಿಧಾನಪರಿಷತ್​ ಕದನಕ್ಕೆ ಕಲಿಗಳ ಆಯ್ಕೆಯೇ ದೊಡ್ಡ ಟೆನ್ಷನ್; ಟಿಕೆಟ್​ ವಿಚಾರದಲ್ಲಿ ಸಿಎಂ ಎಚ್ಚರಿಕೆ.. ಏನದು? 

ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ ಕೊನೆಗೂ ಮಾಜಿ ಸಚಿವ ಸಿ.ಟಿ ರವಿ, ಎನ್. ರವಿಕುಮಾರ್ ಮತ್ತು ಎಂ.ಜಿ ಮೂಳೆ ಅವರಿಗೆ ಮಣೆ ಹಾಕಿದೆ. ಎಂಎಲ್‌ಸಿ ಚುನಾವಣೆಗೆ ಸಾಕಷ್ಟು ಮಂದಿಯ ಹೆಸರು ಕೇಳಿ ಬಂದರು ಅಂತಿಮವಾಗಿ ಬಿಜೆಪಿ ವರಿಷ್ಠರು ಮೂವರ ಹೆಸರು ಅಂತಿಮಗೊಳಿಸಿದ್ದಾರೆ.

ಮೂರು ಸ್ಥಾನಗಳಲ್ಲಿ ಒಕ್ಕಲಿಗ ಸಮುದಾಯದಿಂದ ಸಿ.ಟಿ ರವಿ, ಒಬಿಸಿ ವರ್ಗದಲ್ಲಿ ಎನ್‌. ರವಿಕುಮಾರ್ ಹಾಗೂ ಎಂ.ಜಿ ಮುಳೆ ಅವರಿಗೆ ಸ್ಥಾನ ನೀಡಲಾಗಿದೆ. ಎಂ.ಜಿ ಮೂಳೆ ಅವರು ಬಸವ ಕಲ್ಯಾಣ ಕ್ಷೇತ್ರದ ಮಾಜಿ ಶಾಸಕ ಮತ್ತು ಮರಾಠಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಆಗಿದ್ದರು. ಮೂಳೆ ಅವರು ಈ ಮೊದಲು ಜೆಡಿಎಸ್‌ನಲ್ಲಿದ್ದು, ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಸೇರಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ವಿಧಾನಪರಿಷತ್ ಚುನಾವಣೆ: ಮೂರು ಸ್ಥಾನಕ್ಕೆ BJP ಟಿಕೆಟ್ ಘೋಷಣೆ; ಯಾರಿಗೆ ಬಂಪರ್‌?

https://newsfirstlive.com/wp-content/uploads/2024/06/Bjp-MLC-Election.jpg

Load More