newsfirstkannada.com

ವಿಧಾನಪರಿಷತ್​ ಕದನಕ್ಕೆ ಕಲಿಗಳ ಆಯ್ಕೆಯೇ ದೊಡ್ಡ ಟೆನ್ಷನ್; ಟಿಕೆಟ್​ ವಿಚಾರದಲ್ಲಿ ಸಿಎಂ ಎಚ್ಚರಿಕೆ.. ಏನದು?

Share :

Published June 2, 2024 at 8:44am

Update June 2, 2024 at 8:45am

    ಜೂನ್ 13ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆ

    ಒಟ್ಟು 65 ಮಂದಿಯ ಅಭ್ಯರ್ಥಿಗಳ ಲಿಸ್ಟ್ ಹೈಕಮಾಂಡ್​ ಕೈಯಲ್ಲಿ

    ವಿಧಾನ ಪರಿಷತ್ ಚುನಾವಣೆ ನಾಮಪತ್ರಕ್ಕೆ ನಾಳೆಯೇ ಕೊನೆ ದಿನ

ಬೆಂಗಳೂರು: ಇಂದು ನಗರದ ಖಾಸಗಿ ಹೋಟಲ್​ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ವಿಧಾನ ಪರಿಷತ್ ಚುನಾವಣೆ, ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಸಾಕಷ್ಟು ಚರ್ಚೆ ಆಗಲಿದೆ. ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ‌ ಜೊತೆಗೆ, ಸಚಿವರ ಒಗ್ಗಟ್ಟು ಪ್ರದರ್ಶನ ಕೂಡ ಆಗಲಿದೆ.

ಇದನ್ನೂ ಓದಿ: ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್.. ಬೆಳಗಾವಿ ವಿವಿಯಿಂದ ಅಚ್ಚರಿಯ ಫಲಿತಾಂಶ.. ಹೊಸ ದಾಖಲೆ..!

ಕಾಂಗ್ರೆಸ್​ನಲ್ಲಿ ವಿಧಾನಪರಿಷತ್​ ಕದನಕ್ಕೆ ಕಲಿಗಳ ಆಯ್ಕೆಯೇ ದೊಡ್ಡ ಟೆನ್ಷನ್​ ಆಗಿದೆ. ಕಾಂಗ್ರೆಸ್​ನಲ್ಲಿ ಅಕಾಂಕ್ಷಿಗಳ ಪಟ್ಟಿ ಹಿಗ್ಗಿದ್ದು, ಟಿಕೆಟ್​ ವಿಚಾರದಲ್ಲಿ ಯಾರಿಗೂ ಅಸಮಾಧಾನವಾಗದಂತೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ವಹಿಸಿದ್ದಾರೆ. ಈ ಹಿನ್ನೆಲೆ ಇವತ್ತು ಸಿಎಂ ನೇತೃತ್ವದಲ್ಲಿ ಕಾಂಗ್ರೆಸ್​ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಕುತೂಹಲವನ್ನು ಹೆಚ್ಚಿಸಿದೆ. ಜೂನ್ 13ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ವಿಷ್ಯವೇ ಶಾಸಕಾಂಗ ಪಕ್ಷದ ಸಭೆಯ ಪ್ರಮುಖ ಅಜಂಡವಾಗಿದೆ. ನಾಮಪತ್ರ ಸಲ್ಲಿಸಲು ನಾಳೆ ಅಂದ್ರೆ ಜೂನ್​ 3 ಕೊನೆಯ ದಿನವಾಗಿದ್ದು, ಇವತ್ತು ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಕಳೆದ ವಾರ ದೆಹಲಿಗೆ ತೆರಳಿದ್ದ ಸಿಎಂ, ಡಿಸಿಎಂ 65 ಮಂದಿಯ ಅಭ್ಯರ್ಥಿಗಳ ಲಿಸ್ಟ್ ಹೈಕಮಾಂಡ್​ಗೆ ನೀಡಿ ಬಂದಿದ್ದಾರೆ. ಅಂತಿಮವಾಗಿ ಪರಿಷತ್ ಟಿಕೆಟ್ ಗಿಟ್ಟಿಸುವ ಆ 7 ಮಂದಿ ಯಾರು ಎಂಬ ಕುತೂಹಲಕ್ಕೂ ಇಂದೇ ತೆರೆ ಬೀಳುವ ಸಾಧ್ಯತೆ ಇದೆ. ಯಾರಿಗೆ ಪರಿಷತ್ ಟಿಕೆಟ್ ಸಿಕ್ಕರೂ ಎಲ್ಲಾ ಒಗ್ಗೂಡಿ ಕೆಲಸ ಮಾಡುವ ಜೊತೆಗೆ, ಅಸಮಾಧಾನಕ್ಕೆ ಅವಕಾಶ ನೀಡಬಾರದು ಎಂಬ ಸಂದೇಶ ಕೂಡ ಶಾಸಕಾಂಗ ಸಭೆಯಲ್ಲಿ ರವಾನೆ ಆಗಲಿದೆ. ಇದರ ಜೊತೆಗೆ ಚುನಾವಣೋತ್ತರ ಸಮೀಕ್ಷೆ ಸೇರಿದಂತೆ ಇತರೆ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: Axis My India ಎಕ್ಸಿಟ್​ ಪೋಲ್​​​ನಲ್ಲಿ ಅಚ್ಚರಿ ಫಲಿತಾಂಶ.. ಅಣ್ಣಾಮಲೈಗೆ ಶಾಕ್..!

ಕುತೂಹಲ ಮೂಡಿಸಿದ ಸಿಎಲ್​ಪಿ ಸಭೆ

ಲೋಕ ಚುನಾವಣೆ ಬಳಿಕ ನಡಿತಿರೋ ಮೊದಲ ಸಿಎಲ್​ಪಿ ಸಭೆ ಇದಾಗಿದೆ. ಸಭೆಯಲ್ಲಿ ಸರ್ಕಾರದ 1 ವರ್ಷದ ಸಾಧನೆಯ ಬಗ್ಗೆ ಶಾಸಕರಿಗೆ ಸಿಎಂ ಮನವರಿಕೆ ಮಾಡಿಕೊಡಲಿದ್ದಾರೆ. ಇನ್ನು ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದರ ಜೊತೆಗೆ ಸರ್ಕಾರದ ಮುಂದಿನ ನಡೆ ಹೇಗಿರಬೇಕು ಮತ್ತು ಶಾಸಕರ ಜವಾಬ್ದಾರಿ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಸರ್ಕಾರಕ್ಕೆ ಒಂದು ವರ್ಷ ಪೂರೈಸಿರುವ ಹಿನ್ನೆಲೆ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯರನ್ನ ಶಾಸಕರು ಅಭಿನಂದನೆ ಸಲ್ಲಿಸಲಿದ್ದಾರೆ. ಒಟ್ಟಾರೆ, ಕಾಂಗ್ರೆಸ್​ನಲ್ಲಿ ಪರಿಷತ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ರಾಜ್ಯ ನಾಯಕರು ಟೆನ್ಷನ್​ನಲ್ಲಿ ಇದ್ದಾರೆ. ಪರಿಷತ್​ ಫೈಟ್​ನಲ್ಲಿ ಆಕಾಂಕ್ಷಿಗಳ ಮನವೊಲಿಕೆಗಿಂತ ನಾಯಕರ ಪ್ರತಿಷ್ಠೆಯ ಮಾತುಗಳು ಕೇಳಿ ಬರುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಧಾನಪರಿಷತ್​ ಕದನಕ್ಕೆ ಕಲಿಗಳ ಆಯ್ಕೆಯೇ ದೊಡ್ಡ ಟೆನ್ಷನ್; ಟಿಕೆಟ್​ ವಿಚಾರದಲ್ಲಿ ಸಿಎಂ ಎಚ್ಚರಿಕೆ.. ಏನದು?

https://newsfirstlive.com/wp-content/uploads/2023/08/DKS_SIDDU.jpg

Load More