newsfirstkannada.com

ಸಿದ್ದರಾಮಯ್ಯ ಇಳಿಯೋದು ಖಚಿತ, ಅವ್ರ ಪಾರ್ಟಿಯಲ್ಲಿ ಆಂತರಿಕ ಕಚ್ಚಾಟ ಬಹಳ ಇದೆ; ಪ್ರಲ್ಹಾದ್ ಜೋಶಿ 

Share :

Published March 23, 2024 at 2:42pm

    ನಾವು 28 ಕ್ಕೆ 28 ಕ್ಕೂ ಸ್ಥಾನ ಗೆಲ್ಲೋ ಗುರಿ ಇದೆ ಎಂದ ಕೇಂದ್ರ ಸಚಿವ

    ಸಾವಕಾಶವಾಗಿ ಈಶ್ವರಪ್ಪ ಸಮಾಧಾನ ಆಗ್ತಾರೆ ಎಂದ ಪ್ರಲ್ಹಾದ್ ಜೋಶಿ

    ಜಗದೀಶ್​​ ಶೆಟ್ಟರ್ ಟಿಕೆಟ್ ಸಿಗದಿರೋ​ ವಿಚಾರವಾಗಿ ಏನಂದ್ರು ಗೊತ್ತಾ?

ಹುಬ್ಬಳ್ಳಿ: ಸಿದ್ದರಾಮಯ್ಯ ಇಳಿಯೋದು ಖಚಿತ. ಅವರ ಪಾರ್ಟಿಯಲ್ಲಿ ಆಂತರಿಕ ಕಚ್ಚಾಟ ಬಹಳ ಇದೆ. ಆಂತರಿಕ ಕಚ್ಚಾಟವೇ ಸಿದ್ದರಾಮಯ್ಯಗೆ ಸಮಸ್ಯೆ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ, ನಾವು 28 ಕ್ಕೆ 28 ಕ್ಕೂ ಸ್ಥಾನ ಗೆಲ್ಲೋ ಗುರಿ ಇದೆ. ಬಿಜೆಪಿ ಜೆಡಿಎಸ್ 28 ಸ್ಥಾನ ಗುರಿ ಇದೆ. ಕಳೆದ ಬಾರಿ ರಾಜಸ್ಥಾನ, ಮದ್ಯಪ್ರದೇಶ, ಗುಜರಾತ್ ನಲ್ಲಿ ಔಟ್ ಆಪ್ ಔಟ್ ಸೀಟ್ ಗೆದ್ದಿದ್ದೇವೆ. ಆ ರೀತಿ ಕರ್ನಾಟಕದಲ್ಲಿ ಬಿಜೆಪಿ 28 ಗೆಲ್ಲುತ್ತೆ. ಹೀಗಾಗಿ ಸಿದ್ದರಾಮಯ್ಯ ಇಳಿಯಬೇಕಾಗತ್ತೆ ಎಂದು ಹೇಳಿದ್ದಾರೆ.

ಬಳಿಕ ಮಾತು ಮುಂದುವರಿಸಿದ ಅವರು, ಅವರ ಪಕ್ಷದ ನಿರ್ಣಯ ಇದ್ರೆ ಸಿದ್ದರಾಮಯ್ಯ ಇಳಿಯಬೇಕಾಗತ್ತೆ. ಇದು ಅವರ ಪಕ್ಷದ ಶಾಸಕರ ಹೇಳಿಕೆ. ಹೀಗಾಗಿ ಸಿದ್ದು, ಡಿಕೆ ಶಿವಕುಮಾರ್ ಅದಕ್ಕೆ ಉತ್ತರ ಕೊಡಬೇಕು. ಅವರ ಪಾರ್ಟಿಯಲ್ಲಿ ಆಂತರಿಕ ಕಚ್ಚಾಟ ಬಹಳ ಇದೆ. ಆಂತರಿಕ ಕಚ್ಚಾಟವೇ ಸಿದ್ದರಾಮಯ್ಯಗೆ ಸಮಸ್ಯೆ ಇದೆ. ಬೇರೆ ಯಾರಿಂದಲೂ ಅವರಿಗೆ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:‘ಇದು ನನ್ನೊಬ್ಬನ ಸಾಧನೆಯಲ್ಲ, ಭಾರತದ ಸಾಧನೆ’ ಭೂತಾನ್​ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಮೋದಿ

ಈಶ್ವರಪ್ಪನವ್ರ ಬಗ್ಗೆ ಏನಂದ್ರು?

ಈಶ್ವರಪ್ಪನವರು ಶಮನ ಆಗ್ತಾರೆ, ನಾನು ಈಶ್ವರಪ್ಪ ಅವರ ಜೊತೆ ಮಾತಾಡಿದೀನಿ. ಎಲ್ಲವೂ ಸರಿ ಹೋಗತ್ತೆ. ಸಾವಕಾಶವಾಗಿ ಈಶ್ವರಪ್ಪ ಸಮಾಧಾನ ಆಗ್ತಾರೆ. ಬಹಳ ಸಮಯ ಇರೋ ಕಾರಣಕ್ಕೆ ಕೆಲ ಕಡೆ ಗೊಂದಲ ಇದೆ. ಲೋಕಸಭೆ ಚುನಾವಣೆ ಬೇರೆ, ವಿಧಾನಸಭೆ ಚುನಾವಣೆ ಬೇರೆ. ಲೋಕಸಭೆಯಲ್ಲಿ ಮೋದಿ ನೋಡಿ ಮತ ಹಾಕ್ತಾರೆ. ಸಿದ್ದರಾಮಯ್ಯ ಇಳಸೋದು ಅವರ ಆಂತರಿಕ ವಿಚಾರ ಎಂದು ಜೋಶಿ ಹೇಳಿದ್ದಾರೆ.

ಜಗದೀಶ್​​ ಶೆಟ್ಟರ್​ ಕಥೆ ಏನು?

ಶೆಟ್ಟರ್ ಕಥೆ ಏನೂ ಆಗಿಲ್ಲ. ಅವರ ಕಥೆ ಅಂದ್ರೆ ಏನೂ, ಅವರು ನಮ್ಮ‌ಪಕ್ಷದ ಹಿರಿಯ ನಾಯಕರು. ಅವರೇ ಮುಂಚೂಣಿಯಲ್ಲಿ ಇದ್ದಾರೆ. ಅವರ ಒಬ್ಬರದ್ದೇ ಟಿಕೆಟ್ ಘೋಷಣೆ ಆಗದೆ ಹೋದ್ರೆ ಕಥೆ ಏನು ಅಂತಾ ಕೇಳಬೇಕು. ಆದ್ರೆ ಹಾಗಾಗಿಲ್ಲ, ಅವರಿಗೆ ಟಿಕೆಟ್ ಕೊಡಬೇಕು ಅನ್ನೋ ಅಪೇಕ್ಷೆ ಇದೆ ಎಂದು ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದರಾಮಯ್ಯ ಇಳಿಯೋದು ಖಚಿತ, ಅವ್ರ ಪಾರ್ಟಿಯಲ್ಲಿ ಆಂತರಿಕ ಕಚ್ಚಾಟ ಬಹಳ ಇದೆ; ಪ್ರಲ್ಹಾದ್ ಜೋಶಿ 

https://newsfirstlive.com/wp-content/uploads/2024/03/Prahladh-joshi.jpg

Load More