VIDEO: ಚಹಾ ಮಾಡುತ್ತಿದ್ದ ಮಾವನಿಗೆ ದೈಹಿಕವಾಗಿ ಹಲ್ಲೆ ಮಾಡಿದ ಬಿಜೆಪಿ ಮಹಿಳಾ ನಾಯಕಿ

author-image
AS Harshith
Updated On
VIDEO: ಚಹಾ ಮಾಡುತ್ತಿದ್ದ ಮಾವನಿಗೆ ದೈಹಿಕವಾಗಿ ಹಲ್ಲೆ ಮಾಡಿದ ಬಿಜೆಪಿ ಮಹಿಳಾ ನಾಯಕಿ
Advertisment
  • 81 ವಯಸ್ಸಿನ ಮಾವನ ಮೇಲೆ ಹಲ್ಲೆ
  • ಚಹಾ ಮಾಡುತ್ತಿದ್ದ ಮಾವನಿಗೆ ನಿಂದಿಸಿದ ಮಹಿಳೆ
  • ಮನೆಯ ಸಿಸಿಟಿವಿಯಲ್ಲಿ ಸೆರೆಯಾಯ್ತು ಮಹಿಳೆಯ ವರ್ತನೆ

81 ವರ್ಷದ ಮಾವನಿಗೆ ಮಹಿಳೆಯೊಬ್ಬರು ಹಲ್ಲೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹಲ್ಲೆ ಮಾಡಿದವರನ್ನು ಪಟಿಯಾಲದ ಬಿಜೆಪಿ ಬ್ಲಾಕ್​ ಅಧ್ಯಕ್ಷೆ ಮಾರ್ಗರೇಟ್​​ ಡಿಸೋಜಾ ಎಂದು ಗುರುತಿಸಲಾಗಿದೆ.

ಮಾರ್ಗರೇಟ್​​ ಡಿಸೋಜಾ ಅವರನ್ನು ತಾರಾ ಬಾಯಿ ಎಂದು ಕರೆಯಲಾಗುತ್ತದೆ. ಇವರು ಚಹಾ ಮಾಡಲು ಮುಂದಾಗಿದ್ದ ಮಾವನಿಗೆ ನಿಂದಿಸುತ್ತಾರೆ. ಸ್ಮಾರ್ಟ್​ಫೋನಿನಲ್ಲಿ ವಿಡಿಯೋ ಸೆರೆ ಹಿಡಿಯುತ್ತಾರೆ. ಇದರಿಂದ ಕೋಪಗೊಂಡ ಮಾವ ಆಕೆಯ ಕೈಯಲ್ಲಿದ್ದ ಫೋನನ್ನು ಎಸೆಯುತ್ತಾರೆ.

ಕೋಪಗೊಂಡ ತಾರಾ ಬಾಯಿ ನೆಲಕ್ಕೆ ಬಿದ್ದ ಫೋನನ್ನು ಮೇಲೆತ್ತಿಕೊಳ್ಳುತ್ತಾ ಮಾವನನ್ನು ತಳ್ಳುತ್ತಾರೆ. ಸದ್ಯ ಈ ವಿಡಿಯೋ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲೂ ವೈರಲ್​ ಆಗಿದೆ.

ಇದನ್ನೂ ಓದಿ: ದರ್ಶನ್​ ರಿಲೀಸ್​​ಗೆ ಫುಲ್​ ಖುಷ್​! ಕಾರು ಫಾಲೋ ಮಾಡಿದ ​​ಫ್ಯಾನ್ಸ್​​.. ಲಾಠಿ ಬೀಸಿದ ಪೊಲೀಸರು


">October 30, 2024

ತಾರಾ ಬಾಯಿಯ ನಡತೆಯನ್ನು ಕಂಡು ಅನೇಕರು ಕಾಮೆಂಟ್​ ಮಾಡಿದ್ದಾರೆ. ಸಾರ್ವಜನಿಕವಾಗಿ ಗುರುತಿಸಿಕೊಂಡ ವ್ಯಕ್ತಿ ಮನೆಯಲ್ಲಿನ ಹಿರಿಯರ ಆರೈಕೆ ಮಾಡುವ ಜವಾಬ್ದಾರಿಯನ್ನು ಹೊಂದಬೇಕು ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಕುಟುಂಬದ ಗೌರವ, ಮೌಲ್ಯಗಳನ್ನು ಇಂತಹ ವ್ಯಕ್ತಿಗಳು ತಿಳಿದುಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಖ್ಯಾತ IPL​ ಆಟಗಾರನಿಗೆ ಆಘಾತ.. ಭಾವನಾತ್ಮಕ ಪೋಸ್ಟ್​ ಹಂಚಿಕೊಂಡ ಸ್ಟಾರ್​​ ಕ್ರಿಕೆಟಿಗ

ಸದ್ಯ ನೆಟ್ಟಿಗರು ಈ ವಿಡಿಯೋವನ್ನು ಬಿಜೆಪಿ ಪ್ರತಿನಿಧಿಗಳಿಗೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಹಂಚಿಕೊಂಡಿದ್ದಾರೆ. ಆದರೆ ತಾರಾ ಬಾಯಿ ವರ್ತನೆ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment