newsfirstkannada.com

ಗಲೀಜು ಬಟ್ಟೆ ಹಾಕಿದ್ದ ಎಂದು ರೈತನಿಗೆ ಅಪಮಾನ; ನ್ಯೂಸ್ ಫಸ್ಟ್ ವರದಿ ಬಳಿಕ BMRCL ಸಿಬ್ಬಂದಿ ವಜಾ

Share :

Published February 26, 2024 at 12:06pm

    ಗಲೀಜು ಬಟ್ಟೆ ಹಾಕಿದ್ದಾನೆ ಎಂದು ಒಳಗೆ ಬಿಡದ ಮೆಟ್ರೋ ಸಿಬ್ಬಂದಿ

    ಮೆಟ್ರೋದಲ್ಲಿ ರೈತನಿಗೆ ಅಪಮಾನ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ

    ಈ ಘಟನೆ ಕುರಿತು ತನಿಖೆ ನಡೆಸಲಾಗುವುದು ಎಂದ BMRCL ಅಧಿಕಾರಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ರೈತನಿಗೆ ಅಪಮಾನ ಮಾಡಿದ ನ್ಯೂಸ್ ಫಸ್ಟ್ ವರದಿಗೆ BMRCL ಎಚ್ಚೆತ್ತುಗೊಂಡಿದೆ. ನ್ಯೂಸ್ ಫಸ್ಟ್ ವರದಿಯ ಬಳಿಕ ಗಲೀಜು ಬಟ್ಟೆ ಹಾಕಿದ್ದಾನೆ ಎಂದು ಮೆಟ್ರೋ ಒಳಗೆ ಬಿಡದ ಭದ್ರತಾ ಮೇಲ್ವಿಚಾರಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ತಲೆ ಮೇಲೆ ಮೂಟೆ ಹೊತ್ತು, ಗಲೀಜು ಬಟ್ಟೆ ಹಾಕಿದ್ದಾನೆ ಅನ್ನೋ ಒಂದೇ ಕಾರಣಕ್ಕೆ ರೈತನನ್ನು ನಮ್ಮ ಮೆಟ್ರೋ ಒಳಗೆ ಬಿಟ್ಟಿರಲಿಲ್ಲ. ರಾಜಾಜಿನಗರದ ಮೆಟ್ರೋ ಸಿಬ್ಬಂದಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ನ್ಯೂಸ್ ಫಸ್ಟ್ ಈ ಕುರಿತು ವರದಿ ಮಾಡಿದ ಬಳಿಕ ಮೆಟ್ರೋ ಹಿರಿಯ ಅಧಿಕಾರಿ ಯಶವಂತ ಚವಾಣ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಗಲೀಜು ಬಟ್ಟೆ ಹಾಕಿದ್ದಾನೆ ಎಂದು ರೈತನ ‘ನಮ್ಮ ಮೆಟ್ರೋ’ಗೆ ಬಿಡದ ಸಿಬ್ಬಂದಿ -ಭಾರೀ ಆಕ್ರೋಶ

ಮೆಟ್ರೋ ಒಳಗೆ ರೈತನನ್ನು ಬಿಡದ ಭದ್ರತಾ ಮೇಲ್ವಿಚಾರಕನನ್ನು ಕೂಡಲೇ ವಜಾಗೊಳಿಸಲಾಗಿದೆ. ಈ ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ನ್ಯೂಸ್‌ ಫಸ್ಟ್‌ಗೆ ಮೆಟ್ರೋ ಹಿರಿಯ ಅಧಿಕಾರಿ ಯಶವಂತ ಚವಾಣ್ ಭರವಸೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಲೀಜು ಬಟ್ಟೆ ಹಾಕಿದ್ದ ಎಂದು ರೈತನಿಗೆ ಅಪಮಾನ; ನ್ಯೂಸ್ ಫಸ್ಟ್ ವರದಿ ಬಳಿಕ BMRCL ಸಿಬ್ಬಂದಿ ವಜಾ

https://newsfirstlive.com/wp-content/uploads/2024/02/NAMMA_METRO_ISSU.jpg

Load More