newsfirstkannada.com

ಸಂಬಳ ಪಾವತಿ ಮಾಡದ್ದಕ್ಕೆ ಬೀದಿಗಿಳಿದ BMTC ಎಲೆಕ್ಟ್ರಿಕ್‌ ಬಸ್‌ ಚಾಲಕರು; ನ್ಯಾಯಕ್ಕಾಗಿ ಹೋರಾಟ

Share :

Published May 15, 2024 at 6:08am

    ಸಿಲಿಕಾನ್​ ಸಿಟಿಯಲ್ಲಿ ರಸ್ತೆಗಿಳಿದ 600ಕ್ಕೂ ಹೆಚ್ಚು BMTC ಎಲೆಕ್ಟ್ರಿಕ್ ಬಸ್​ಗಳು

    ಶಾಂತಿನಗರ ಡಿಪೋ-3ರಲ್ಲಿ ನ್ಯಾಯಕ್ಕಾಗಿ ಬಸ್​ ಚಾಲಕರ ಆಕ್ರೋಶ

    ತಿಂಗಳ ಸಂಬಳದಲ್ಲಿ ತಾರತಮ್ಯ ಆಗುತ್ತಿದೆ ಅಂತ ಚಾಲಕರ ಆರೋಪ

ಶಕ್ತಿ ಯೋಜನೆ ಯಶಸ್ವಿ ನಂತರ ಶಕ್ತಿಗೆ ಮತ್ತಷ್ಟು ಶಕ್ತಿ ಕೊಡೋಕೆ ಕಾಂಗ್ರೆಸ್​​ ಸರ್ಕಾರ ಹೊಸ ಎಲೆಕ್ಟ್ರಿಕ್​​ ಬಸ್​​ಗಳನ್ನೇ ಹೆಚ್ಚಾಗಿ ರೋಡಿಗಿಳಿಸಿದೆ. ಜೊತೆಗೆ ಸಿಟಿಯಲ್ಲಿ ಆಗ್ತಿರೋ ವಾಯು ಮಾಲಿನ್ಯ ನಿಯಂತ್ರಣಕ್ಕೂ BMTC 600ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್​​ಗಳನ್ನು ರಸ್ತೆಗೆ ಇಳಿಸಿದೆ. ಈ ಬಸ್​ಗಳಿಗೆ ಗುತ್ತಿಗೆ ಆಧಾರದ ಮೇಲೆ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಪಶು ವೈದ್ಯರು ಕೊಟ್ಟ ಗುದ್ದಿಗೆ ಜ್ವರದಿಂದ ಬಳಲ್ತಿದ್ದ ವ್ಯಕ್ತಿ ಸಾವು ಆರೋಪ.. ಸಾವು ತಂದ ಆತ್ಮೀಯತೆ..!

ಆದರೆ, ಇದೀಗ ಇದೇ ಬಸ್​​ ಚಾಲಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಸರಿಯಾಗಿ ವೇತನ ಸಿಕ್ತಿಲ್ಲ ಅಂತ ಎಲೆಕ್ಟ್ರಿಕ್ ಬಸ್ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಬಿಎಂಟಿಸಿಯಲ್ಲಿ ಒಟ್ಟು 6,842 ಬಸ್​​ಗಳಿವೆ. ಅದರಲ್ಲಿ ಸಾಮಾನ್ಯ 5642 ಬಸ್​​ಗಳಿದ್ದರೆ, 600ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್​​ಗಳಿವೆ. ಡಿಪೋ-3 ಒಂದರಲ್ಲೇ 113 ಎಲೆಕ್ಟ್ರಿಕ್​ ಬಸ್​ಗಳು ಸಂಚರಿಸುತ್ತೇವೆ. ಇಲ್ಲಿ ಚಾಲಕರು ಮೂರು ಶಿಫ್ಟ್​​​ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದಾರೆ.

ಬಿಎಂಟಿಸಿಯ ಚಾಲಕರಿಗೆ ತಿಂಗಳಿಗೆ 35 ರಿಂದ 40 ಸಾವಿರ ರೂಪಾಯಿ ಸಂಬಳ ನೀಡಿದರೆ, ಖಾಸಗಿ ಕಂಪನಿಗಳು ಎಲೆಕ್ಟ್ರಿಕ್ ಬಸ್ ಡ್ರೈವರ್​​​ಗಳಿಗೆ 15 ರಿಂದ 18 ಸಾವಿರ ರೂಪಾಯಿ ಸಂಬಳ ನೀಡುತ್ತಿವೆ ಅನ್ನೋದು ಇವರ ಆರೋಪ. ಕೇವಲ 18 ಸಾವಿರವಷ್ಟೇ ಸಂಬಳ ಬರುತ್ತಂತೆ. ಅದು ಕೂಡ ಸರಿಯಾಗಿ ನೀಡುತ್ತಿಲ್ಲ ತಾರತಮ್ಯ ಆಗ್ತಿದೆ ಅನ್ನೋದು ಚಾಲಕರ ಆರೋಪ. ಈ ಬಗ್ಗೆ ಅಧಿಕಾರಿಗಳು ಅದ್ಯಾವ ನಿರ್ಧಾರ ತೆಗೆದುಕೊಳ್ತಾರೋ ಕಾದು ನೋಡಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂಬಳ ಪಾವತಿ ಮಾಡದ್ದಕ್ಕೆ ಬೀದಿಗಿಳಿದ BMTC ಎಲೆಕ್ಟ್ರಿಕ್‌ ಬಸ್‌ ಚಾಲಕರು; ನ್ಯಾಯಕ್ಕಾಗಿ ಹೋರಾಟ

https://newsfirstlive.com/wp-content/uploads/2024/05/bmtc1.jpg

Load More