newsfirstkannada.com

ಶಾಲಾ ಮಕ್ಕಳಿದ್ದ ದೋಣಿ ಪಲ್ಟಿ, 18 ಮಕ್ಕಳು ನಾಪತ್ತೆ; ರಕ್ಷಣಾ ಪಡೆಯಿಂದ ಶೋಧ ಕಾರ್ಯ ಮುಂದುವರಿಕೆ

Share :

Published September 14, 2023 at 2:18pm

Update September 14, 2023 at 3:13pm

  ನಡು ನೀರಿನಲ್ಲಿ ಪಲ್ಟಿ ಹೊಡೆದ 34 ಜನರನ್ನು ತುಂಬಿದ್ದ ದೋಣಿ

  ಶಾಲಾ ಮಕ್ಕಳಿದ್ದ ದೋಣಿ ಅವಘಡ, 18 ಮಕ್ಕಳು ನಾಪತ್ತೆ

  ನಾಪತ್ತೆಯಾದ ಮಕ್ಕಳಿಗಾಗಿ ನಡೆಯುತ್ತಿದೆ ಶೋಧ ಕಾರ್ಯ

ದೋಣಿ ಮಗುಚಿ 18 ಮಕ್ಕಳು ನಾಪತ್ತೆಯಾದ ಘಟನೆ ಬಿಹಾರದ ಜಿಲ್ಲೆಯ ಮುಜಾಫರ್​ಪುರದ ಮಧುಪುರ್​ ಪಟ್ಟಿ ಘಾಟ್​​ ಬಳಿ ಇರುವ ಭಾಗಮತಿ ನದಿಯಲ್ಲಿ ನಡೆದಿದೆ. ದೋಣಿಯಲ್ಲಿ ಒಟ್ಟು 34 ಜನರಿದ್ದು, ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿರುವಾಗ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ನೀನು ಹಳ್ಳಿ ಗುಗ್ಗು ಎಂದು ಕಾಟ ಕೊಟ್ಟ ಹೆಂಡತಿ; ರೋಸಿ ಹೋದ ಗಂಡ ಸಾವಿಗೆ ಶರಣು

ದೋಣಿ ದುರಂತದ ಬಗ್ಗೆ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಮಾತನಾಡಿ, ಜಿಲ್ಲಾ ಮ್ಯಾಜಿಸ್ಟ್ರೇಟ್​​ ಸೇರಿದಂತೆ ಹಿರಿಯ ಜಿಲ್ಲಾಧಿಕಾರಿಗಳಿಗೆ ಅಪಘಾತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ. ಮಕ್ಕಳ ಕುಟುಂಬಗಳಿಗೆ ನೆರವು ಮತ್ತು ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾತನಾಡಿದ ಸಿಎಂ ನಿತೀಶ್​ ಕುಮಾರ್ ಅವರು, ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ತುರ್ತಾಗಿ ಕೆಲಸ ಮಾಡುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಹೇಳಿದ್ದೇನೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಎಲ್ಲಾ ನೆರವು ಸಿಗಲಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಲಾ ಮಕ್ಕಳಿದ್ದ ದೋಣಿ ಪಲ್ಟಿ, 18 ಮಕ್ಕಳು ನಾಪತ್ತೆ; ರಕ್ಷಣಾ ಪಡೆಯಿಂದ ಶೋಧ ಕಾರ್ಯ ಮುಂದುವರಿಕೆ

https://newsfirstlive.com/wp-content/uploads/2023/09/dhoni-4.jpg

Load More