newsfirstkannada.com

ಬೊಲೆರೊ ಮತ್ತು ಟ್ರಕ್​ ನಡುವೆ ಭೀಕರ ಅಪಘಾತ.. ಇಬ್ಬರು ಮಕ್ಕಳು ಸೇರಿ 9 ಜನರು ಸಾವು

Share :

Published July 2, 2024 at 8:01am

Update July 2, 2024 at 8:02am

  13 ಜನರಿದ್ದ ಬೊಲೊರೊ ವಾಹನ ಅಪಘಾತ

  ಮಕ್ಕಳು, ಮಹಿಳೆಯರು ಸೇರಿ ಅಪಘಾತದಲ್ಲಿ ಸಾವು

  ದೇವಸ್ಥಾನಕ್ಕೆ ತೆರಳಿ ಹಿಂತಿರುಗುವಾಗ ನಡೆದ ಅಪಘಾತ

ರಾಜಸ್ಥಾನ: ಬೊಲೆರೊ ಮತ್ತು ಟ್ರಕ್​ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಕರೌಲಿ ಜಿಲ್ಲೆಯಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು, ಮಹಿಳೆಯರು ಸೇರಿ ಒಟ್ಟು 9 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕರೌಲಿ ಮತ್ತು ಮಂದರಯಾಲ್​​ ರಸ್ತೆಯ ದುಂಡಾಪುರ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಕರೌಲಿ ಜಿಲ್ಲಿಯ ಕಿಯೋಲಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಬೊಲೊರೊ ವಾಹನಕ್ಕೆ ಟ್ರಕ್​ ಗುದ್ದಿದೆ. ಬೊಲೊರೊದಲ್ಲಿ 13 ಜನರಿದ್ದರು. ಅದರಲ್ಲಿ 9 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Newsfirst​ Impact: ಮುಡಾ ಅಕ್ರಮದ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ.. ಆಯುಕ್ತ, ಕಾರ್ಯದರ್ಶಿ, ಇಂಜಿನಿಯರ್ ಎತ್ತಂಗಡಿ

ಇನ್ನು ಅಪಘಾತದಲ್ಲಿ ಬೊಲೊರೊ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ಸಮಯದಲ್ಲಿ ದೊಡ್ಡ ಶಬ್ಧ ಏರ್ಪಟ್ಟಿದ್ದು, ಸ್ಥಳಕ್ಕೆ ಸ್ಥಳೀಯರು ಆಗಮಿಸಿದ್ದಾರೆ. ತಕ್ಷಣ ಪೊಲೀಸರಿಗೆ ಮತ್ತು ಆ್ಯಂಬುಲೆನ್ಸ್​ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತುಂಬಿದ ಕೃಷ್ಣ ನದಿ, ಮಳೆಯಿಂದಾಗಿ ಉರುಳಿ ಬಿದ್ದ ಬಸ್​.. ರಾಜ್ಯದಲ್ಲಿ ವರುಣಾರ್ಭಟಕ್ಕೆ ಸಾಲು ಸಾಲು ಅವಾಂತರ

ಮೃತರಲ್ಲಿ ಕೆಲವರು ಮಧ್ಯಪ್ರದೇಶದ ಶಿಯೋಪುರ್​ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ಇನ್ನಿತರರು ರಾಜಸ್ಥಾನ್​​ ಕರೌಲಿಯ ಮುಂಡ್ರಾಯಲ್​​ ಖಿರ್ಕನ್​ ಗ್ರಾಮದವರು ಎಂದು ತಿಳಿದುಬಂದಿದೆ. ಅತ್ತ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೊಲೆರೊ ಮತ್ತು ಟ್ರಕ್​ ನಡುವೆ ಭೀಕರ ಅಪಘಾತ.. ಇಬ್ಬರು ಮಕ್ಕಳು ಸೇರಿ 9 ಜನರು ಸಾವು

https://newsfirstlive.com/wp-content/uploads/2024/07/Accident-7.jpg

Load More