Advertisment

ಬಾಲಿವುಡ್‌ಗೆ ಬಿಗ್ ಶಾಕ್‌.. ನಟಿ ಮಲೈಕಾ ಅರೋರ ತಂದೆ ದುರಂತ ಅಂತ್ಯ; ಕಾರಣವೇನು?

author-image
admin
Updated On
ಬಾಲಿವುಡ್‌ಗೆ ಬಿಗ್ ಶಾಕ್‌.. ನಟಿ ಮಲೈಕಾ ಅರೋರ ತಂದೆ ದುರಂತ ಅಂತ್ಯ; ಕಾರಣವೇನು?
Advertisment
  • ಮಲೈಕಾ 11 ವರ್ಷದ ಬಾಲಕಿಯಾಗಿದ್ದಾಗ ತಂದೆ, ತಾಯಿ ಡಿವೋರ್ಸ್‌!
  • ಮಲೈಕಾ ತಾಯಿ ಜಾಯ್ಸ್ ಪಾಲಿಕಾರ್ಪ್ ಡಿವೋರ್ಸ್ ಪಡೆದಿದ್ದರು
  • ಪಂಜಾಬಿ ಮೂಲದವರಾದ ಅನಿಲ್ ಅರೋರ ದುರಂತ ಅಂತ್ಯ

ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರ ತಂದೆ ಅನಿಲ್ ಅರೋರ ತಮ್ಮ ನಿವಾಸದ ಬಳಿ ದಾರುಣವಾಗಿ ಸಾವನ್ನಪ್ಪಿದ್ದಾರೆ. 6 ಅಂತಸ್ತಿನ ಕಟ್ಟಡದ ಟೆರೇಸ್‌ ಮೇಲೆ ಹೋಗಿರುವ ಅನಿಲ್ ಅರೋರ ಕೆಳಗೆ ಜಂಪ್ ಮಾಡಿದ್ದಾರೆ. ಮುಂಬೈ ಪೊಲೀಸರು ಘಟನಾ ಸ್ಥಳದಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ.

Advertisment

ಇದನ್ನೂ ಓದಿ: 6 ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟ ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ; ಆಗಿದ್ದೇನು? 

ಅನಿಲ್ ಅರೋರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಲೈಕಾ ಅರೋರ ಅವರ ಮಾಜಿ ಪತಿ ಅರ್ಬಾಜ್ ಖಾನ್ ಘಟನಾ ಸ್ಥಳಕ್ಕೆ ಮೊದಲು ಆಗಮಿಸಿದ್ದಾರೆ. ಪೊಲೀಸರು ಮೃತದೇಹವನ್ನು ಸ್ಥಳಾಂತರ ಮಾಡಿದ್ದು, ಅನಿಲ್ ಅರೋರ ಅವರ ಸಾವಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಾವುದೇ ಡೆತ್‌ನೋಟ್‌ ಬರೆಯದೇ ಅನಿಲ್ ಅರೋರ ಪ್ರಾಣ ಬಿಟ್ಟಿರೋದು ಅನುಮಾನಗಳಿಗೆ ಕಾರಣವಾಗಿದೆ.

publive-image

ಮಲೈಕಾ ಅರೋರ ಅವರ ತಂದೆ ಇಂದು ಬೆಳ್ಳಂಬೆಳಗ್ಗೆ ತಾವು ವಾಸಿಸುತ್ತಿದ್ದ ಬಾಂದ್ರಾ ಕಟ್ಟಡದ ಟೆರೇಸ್‌ ಮೇಲಿಂದ ಜಿಗಿದು ಸಾವಿಗೆ ಶರಣಾಗಿದ್ದಾರೆ. ಅನಿತ್ ಅರೋರ ಅವರ ಈ ದುರಂತ ಸಾವಿಗೆ ಇಡೀ ಬಾಲಿವುಡ್ ಶಾಕ್ ಆಗಿದೆ. ಅರ್ಬಾಜ್ ಖಾನ್ ಅವರು ಬಾಂದ್ರಾ ಪೊಲೀಸ್ ಅಧಿಕಾರಿಗಳ ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸರು ಪಂಚನಾಮೆ ಮುಗಿಸಿದ್ದಾರೆ.

Advertisment

ಇದನ್ನೂ ಓದಿ: ಮಲೈಕಾ ಅರೋರಾ ಹಾಟ್‌ & ವರ್ಕೌಟ್​ ವಿಡಿಯೋ ವೈರಲ್; ಈ ಬ್ಯೂಟಿ ವಯಸ್ಸೆಷ್ಟು? 

ಮುಂಬೈ ಬಾಂದ್ರಾದಲ್ಲಿರುವ ಆಯೇಷಾ ಮ್ಯಾನರ್ ನಿವಾಸದಲ್ಲಿ ಅನಿಲ್ ಅರೋರ, ಜಾಯ್ಸ್ ಪಾಲಿಕಾರ್ಪ್ ದಂಪತಿ ಹಲವು ವರ್ಷಗಳ ಕಾಲ ವಾಸವಿದ್ದರು. ಅನಿಲ್ ಅರೋರ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಮೃತಾ ಅರೋರಾ, ಮಲೈಕಾ ಅರೋರಾ ಇಬ್ಬರು ಬಾಲಿವುಡ್‌ ನಟಿಯರು. ಇದೇ ಮನೆಯಲ್ಲಿ ಅನಿಲ್ ಅರೋರ ಅವರು ಇಂದು ತಮ್ಮ ಬದುಕಿನ ಪಯಣ ಅಂತ್ಯಗೊಳಿಸಿದ್ದಾರೆ.

publive-image

ಅನಿಲ್ ಅರೋರ ಸಾವಿಗೆ ಕಾರಣವೇನು?
ಅನಿಲ್ ಅರೋರಾ ಅವರು ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಪಂಜಾಬಿ ಮೂಲದವರಾದ ಅನಿಲ್ ಅರೋರ ಅವರು ಜಾಯ್ಸ್ ಪಾಲಿಕಾರ್ಪ್ ಅವರನ್ನು ಮದುವೆಯಾಗಿದ್ದರು. ಒಂಟಿಯಾಗಿದ್ದ ಅನಿಲ್ ಅವರು ಮಲೈಕಾ ತಾಯಿ ಜಾಯ್ಸ್ ಪಾಲಿಕಾರ್ಪ್ ಡಿವೋರ್ಸ್ ಪಡೆದಿದ್ದರು ಅನ್ನೋ ಮಾಹಿತಿ ಇದೆ.

Advertisment

publive-image

ಮಲೈಕಾ ಅರೋರ 11 ವರ್ಷದ ಬಾಲಕಿಯಾಗಿದ್ದ ಸಂದರ್ಭದಲ್ಲಿ ಅನಿಲ್ ಅರೋರ, ಡಿವೋರ್ಸ್ ಪಡೆದು ಕುಟುಂಬದಿಂದ ದೂರ ಉಳಿದಿದ್ದರು. ತನ್ನ ತಂದೆ, ತಾಯಿ ಬೇರೆ, ಬೇರೆಯಾಗಿ ವಾಸಿಸುತ್ತಿದ್ದಾರೆ ಅನ್ನೋ ಮಾಹಿತಿಯನ್ನು ಮಲೈಕಾ ಅರೋರ ಅವರೇ ಇತ್ತೀಚಿಗೆ ಹೊರ ಜಗತ್ತಿಗೆ ತಿಳಿಸಿದ್ದರು. ಇಷ್ಟಾದ್ರೂ ಅನಿಲ್ ಅರೋರ ಅವರು ಇಬ್ಬರು ಮಕ್ಕಳು ಹಾಗೂ ಪತ್ನಿ ಆಗಾಗ ಕಾಲ ಕಳೆಯುತ್ತಿದ್ದರು.

ಇದನ್ನೂ ಓದಿ: ನಾಳೆಯೇ ಸಿನಿಮಾ ರಿಲೀಸ್ ಆಗಬೇಕಿತ್ತು.. ಖುಷಿಯಲ್ಲಿದ್ದ ಹೀರೋ ಕಿರಣ್ ರಾಜ್​ಗೆ ಅಪಘಾತ, ಹೇಗಿದೆ ಆರೋಗ್ಯ..? 

ಕಳೆದ ವರ್ಷ ಅನಿಲ್ ಅರೋರ ಅವರು ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಅನಿಲ್ ಅರೋರ ಅವರ ದಿಢೀರ್ ಸಾವಿಗೆ ಕಾರಣ ಏನು ಅನ್ನೋದು ಸದ್ಯ ನಿಗೂಢವಾಗಿದೆ. ಮೃತದೇಹವನ್ನು ಬಾಂದ್ರಾದ ಬಾಬಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪೋಸ್ಟ್‌ ಮಾರ್ಟಂ ಮಾಡಿದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment