Advertisment

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಈ ಬಾಲಿವುಡ್​​ ನಟಿ ರೆಡಿ! ಕಾಂಗ್ರೆಸ್​​ನಿಂದ ಸ್ಪರ್ಧೆ ಖಚಿತ?

author-image
Veena Gangani
Updated On
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಈ ಬಾಲಿವುಡ್​​ ನಟಿ ರೆಡಿ! ಕಾಂಗ್ರೆಸ್​​ನಿಂದ ಸ್ಪರ್ಧೆ ಖಚಿತ?
Advertisment
  • ತಂದೆಯ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಜ್ಜಾದ್ರಾ ಖ್ಯಾತ ನಟಿ
  • ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಘೋಷಣೆ ಬಗ್ಗೆ ಭಾರಿ ಚರ್ಚೆ
  • ಜೋಗಿರಾ ಸಾರಾ ರಾರಾ ಚಿತ್ರದ ಮೂಲಕ ಭಾರಿ ಜನಪ್ರಿಯತೆ ಪಡೆದ ನಟಿ

18ನೇ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ಈ ಬಾರೀ ಲೋಕಸಭಾ ಚುನಾವಣೆಗೆ ಖ್ಯಾತ ನಟ ಹಾಗೂ ನಟಿಯರಿಗೆ ನಾನಾ ಪಕ್ಷಗಳು ಟಿಕೆಟ್ ನೀಡುತ್ತಿವೆ. ಇದೀಗ ಲೋಕಸಭಾ ಅಖಾಡಕ್ಕೆ ಬಾಲಿವುಡ್​ ಬ್ಯೂಟಿ ನೇಹಾ ಶರ್ಮಾ ಕೂಡ ಇಳಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

Advertisment

publive-image

ಇದನ್ನು ಓದಿ: ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ್ರಾ ‘ರಣವಿಕ್ರಮ’ ಸಿನಿಮಾ ನಟಿ ಅಂಜಲಿ; ಹುಡುಗ ಯಾರು?

ನಟಿ ನೇಹಾ ಶರ್ಮಾ ಬಿಹಾರದ ಭಾಗಲಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರೂ ಆಗಿರುವ ನೇಹಾ ಅವರ ತಂದೆ ಅಜಯ್ ಶರ್ಮಾ ಮಗಳಿಗಾಗಿ ಟಿಕೆಟ್ ಕೊಡಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಭಾಗಲಪುರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿರುವುದರಿಂದ ಅದೇ ಕ್ಷೇತ್ರದಲ್ಲೇ ಅಜಯ್ ಶರ್ಮಾ ಅವರ ಮಗಳ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

publive-image

ಈಗಾಗಲೇ ಕಾಂಗ್ರೆಸ್ ಹಲವು ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಭಾಗಲಪುರ ಕ್ಷೇತ್ರವನ್ನು ಕಾಂಗ್ರೆಸ್​ಗೆ ಉಳಿಸಿಕೊಳ್ಳುವ ಕಸರತ್ತನ್ನೂ ಅವರು ಮುಂದುವರೆಸಿದ್ದಾರೆ. ಹೀಗಾಗಿ ಬಾಲಿವುಡ್​ ಖ್ಯಾತ ನಟಿ ನೇಹಾ ಶರ್ಮಾ ಅವರು ಲೋಕಸಭಾ ಅಕಾಡಕ್ಕೆ ಇಳಿದರೆ ಯುವ ಸಮುದಾಯದಿಂದ ಹೆಚ್ಚಿನ ಮತ ಗಿಟ್ಟಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿದೆ. ನವಾಜುದ್ದೀನ್ ಸಿದ್ದಿಕ್ಕಿ ಜೊತೆಗಿನ ‘ಜೋಗಿರಾ ಸಾರಾ ರಾರಾ’ ಚಿತ್ರದ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡ ನೇಹಾ ಶರ್ಮಾ ಬಾಲಿವುಡ್‌ನಲ್ಲಿ ಸಕ್ರಿಯವಾಗಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ TH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment