newsfirstkannada.com

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ್ರಾ ‘ರಣವಿಕ್ರಮ’ ಸಿನಿಮಾ ನಟಿ ಅಂಜಲಿ; ಹುಡುಗ ಯಾರು?

Share :

Published March 23, 2024 at 7:25pm

  ಐಟಂ ಸಾಂಗ್‌ಗಳಲ್ಲಿ ಸೊಂಟ ಬಳುಕಿಸಿ ಸುದ್ದಿಯಾಗಿದ್ದ ನಟಿ ಅಂಜಲಿ

  ಕನ್ನಡದಲ್ಲಿ ಹೊಂಗನಸು, ರಣವಿಕ್ರಮ, ಬೈರಾಗಿ ಚಿತ್ರದಲ್ಲಿ ನಟನೆ

  ತಮಿಳು, ತೆಲುಗಿನಲ್ಲಿ ಸಖತ್​​ ಬ್ಯುಸಿಯಾಗಿರೋ ನಟಿ ಇವರು

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ರಣವಿಕ್ರಮ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಅಂಜಲಿ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಕನ್ನಡವಷ್ಟೇ ಅಲ್ಲದೇ ತಮಿಳು, ತೆಲುಗು ಸಿನಿರಂಗದಲ್ಲಿಯೂ ಅಂಜಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟಿ ಅಂಜಲಿ ಕನ್ನಡದಲ್ಲಿ ಹೊಂಗನಸು, ಪುನೀತ್ ರಾಜಕುಮಾರ್ ಜತೆಗೆ ‘ರಣವಿಕ್ರಮ’ ಹಾಗೂ ಶಿವರಾಜ್‌ಕುಮಾರ್ ಅಭಿನಯದ ‘ಬೈರಾಗಿ’ ಸಿನಿಮಾದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

ಇದನ್ನು ಓದಿ: ಮೆಟ್ರೋದಲ್ಲಿ ಮತ್ತೆ ಯುವತಿಯರ ಹುಚ್ಚಾಟ.. ಇವರ ವಯ್ಯಾರಕ್ಕೆ ನೆತ್ತಿಗೇರಿತು ಪ್ರಯಾಣಿಕರ ಕೋಪ

ಇದೀಗ ಮೂಲಗಳ ಪ್ರಕಾರ ನಟಿ ಅಂಜಲಿ ತೆಲುಗು ನಿರ್ಮಾಪಕರೊಬ್ಬರನ್ನು ಪ್ರೀತಿಸುತ್ತಿದ್ದು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಟಿ ಅಂಜಲಿ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕೂಡ ಜೋರಾಗಿದೆ. ನೆಚ್ಚಿನ ನಟಿಯನ್ನು ಯಾರು ಮದುವೆಯಾಗಲಿದ್ದಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ನಟಿ ಅಂಜಲಿ ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಂಡು ಸಖತ್​ ಸುದ್ದಿಯಲ್ಲಿದ್ದರು. ಇದೀಗ ಸದ್ಯದಲ್ಲೇ ನಟಿ ತೆಲುಗು ನಿರ್ಮಾಪಕರೊಬ್ಬರನ್ನು ಮದುವೆಯಾಗಲಿದ್ದಾರಂತೆ. ಆದರೆ ಈ ಬಗ್ಗೆ ನಟಿ ಅಂಜಲಿ ಯಾವುದೇ ಅಧಿಕೃತವಾದ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ತಮಿಳು, ತೆಲುಗಿನಲ್ಲಿ ನಟಿ ಸಖತ್​ ಬ್ಯುಸಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ್ರಾ ‘ರಣವಿಕ್ರಮ’ ಸಿನಿಮಾ ನಟಿ ಅಂಜಲಿ; ಹುಡುಗ ಯಾರು?

https://newsfirstlive.com/wp-content/uploads/2024/03/anjali-rana-vikrama.jpg

Load More