newsfirstkannada.com

ಕುಡಿದು ಕಾರು ಚಾಲನೆಯಿಂದ ಅಪಘಾತ.. ನಟಿ ರವೀನಾ ಟಂಡನ್​ ಮೇಲೆ ಭಾರೀ ಆಕ್ರೋಶ; ಆಮೇಲೇನಾಯ್ತು?

Share :

Published June 2, 2024 at 12:40pm

Update June 2, 2024 at 1:51pm

  ಖ್ಯಾತ ನಟಿ ರವೀನಾ ಟಂಡನ್ ಸುತ್ತಾ ಮುತ್ತಿಗೆ ಹಾಕಿದ ಸಾರ್ವಜನಿಕರು

  ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​ 2ನಲ್ಲಿ ನಟಿಸಿದ್ದ ನಟಿ ರವೀನಾ

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಈ ವಿಡಿಯೋ

ಮುಂಬೈ: ಬಾಲಿವುಡ್​ನ ಖ್ಯಾತ ನಟಿ ರವೀನಾ ಟಂಡನ್ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಎಬ್ಬಿಸುತ್ತಿದೆ. ವೈರಲ್​ ಆಗುತ್ತಿರೋ ವಿಡಿಯೋ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಹೌದು, ಶನಿವಾರ ರಾತ್ರಿ ನಡೆದಿರುವ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮುಂಬೈನ  ಬಾಂದ್ರಾ ಉಪನಗರದಲ್ಲಿ ನಟಿ ರವೀನಾ ಟಂಡನ್ ಅವರ ಸುತ್ತಾ ಮುತ್ತ ಜನರು ಮುಗಿ ಬಿದ್ದಿದ್ದು ನಟಿಯ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ನಟಿ ರವೀನಾ ಟಂಡನ್​ ಅವರ ಕಾರು ಚಾಲಕ ಕುಡಿದ ಮತ್ತಿನಲ್ಲಿ ಕಾರನ್ನು ಮೂವರ ಮೇಲೆ ಹತ್ತಿಸಿದ್ದಾನೆ. ಮಾಹಿತಿ ಪ್ರಕಾರ ನಟಿ ರವೀನಾ ಅವರ ಕಾರು ಚಾಲಕನ ಮೇಲೆ ರ್ಯಾಶ್ ಡ್ರೈವಿಂಗ್ ಆರೋಪ ಕೇಳಿ ಬಂದಿದೆ. ರಿಜ್ವಿ ಕಾಲೇಜ್ ಬಳಿ ನಡೆದುಕೊಂಡು ಹೋಗುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದಿದ್ದಾರಂತೆ. ಹೀಗಾಗಿ ಸಾಕಷ್ಟು ಜನರು ಇದನ್ನು ವಿರೋಧಿಸಿ ಕಾರು ಚಾಲಕನ ಮೇಲೆ ಆರೋಪಿಸುತ್ತಿದ್ದರು. ಇದೇ ವೇಳೆ ಕಾರಿನಿಂದ ಕೆಳಗೆ ಇಳಿದ ನಟಿ ಏಕಾಏಕಿ ಬೈಯಲು ಶುರು ಮಾಡಿದ್ದಾರಂತೆ.

ಇದನ್ನೂ ಓದಿ: ಪುಣೆ ಮಾದರಿಯಲ್ಲೇ ಮತ್ತೊಂದು ಅಪಘಾತ.. ಅಪ್ಪನ SUV ಕಾರು ಓಡಿಸಿ ವಿದ್ಯಾರ್ಥಿನಿಗೆ ಗುದ್ದಿದ 17 ವರ್ಷದ ಬಾಲಕ

ಆದರೆ ನಟಿ ರವೀನಾ ಟಂಡನ್​ ಮದ್ಯ ಸೇವನೆ ಮಾಡಿದ್ದರು ಎಂದು ಹೇಳಲಾಗಿದೆ. ವೈರಲ್​ ಆಗಿರೋ ವಿಡಿಯೋದಲ್ಲಿ ಸಾರ್ವಜನಿಕರು ನಟಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಅದರಿಂದ ತಪ್ಪಿಸಿಕೊಳ್ಳಲು ನಟಿ ಪೊಲೀಸರಿಗೆ ಕರೆ ಮಾಡುತ್ತಿರುವುದು ಕಂಡು ಬಂದಿದೆ. ಇದಾದ ಬಳಿಕ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಯುವತಿಗೆ, ದಯಮಾಡಿ ವಿಡಿಯೋ ಮಾಡಬೇಡಿ, ತಳ್ಳಬೇಡಿ, ದಯವಿಟ್ಟು ನನಗೆ ಹೊಡೆಯಬೇಡಿ ಅಂತ ಮನವಿ ಮಾಡಿಕೊಂಡಿರೋ ವಿಡಿಯೋ ವೈರಲ್​ ಆಗುತ್ತಿದೆ. ಈ ಘಟನೆ ಸಂಬಂಧ ಸಂತ್ರಸ್ತರು ಖಾರ್ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಿಸಲು ಮುಂದಾಗಿದ್ದರು. ಆದರೆ ಪೊಲೀಸರು ನಮ್ಮ ದೂರನ್ನು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿದು ಕಾರು ಚಾಲನೆಯಿಂದ ಅಪಘಾತ.. ನಟಿ ರವೀನಾ ಟಂಡನ್​ ಮೇಲೆ ಭಾರೀ ಆಕ್ರೋಶ; ಆಮೇಲೇನಾಯ್ತು?

https://newsfirstlive.com/wp-content/uploads/2024/06/Raveena-Tandon2.jpg

Load More